ಕಳೆದೆರಡು ವರ್ಷಗಳಿಂತಲೂ ಹೆಚ್ಚು ಸಮಯದಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಪೋಷಕ ಪಾತ್ರಕ್ಕೆ ಜೀವ ತುಂಬಿರುವ ನಟಿ ರೇಖಾ ಕೃಷ್ಣಪ್ಪ (Rekha Krishnappa), ಅವರ ಪತಿ ವಸಂತ್ ಕುಮಾರ್ ಕೂಡ ಕಿರುತೆರೆಯ ಜನಪ್ರಿಯ ನಟ.
ಕನ್ನಡ, ತಮಿಳು ಸೇರಿ 50 ಕ್ಕೂ ಅಧಿಕ ಧಾರಾವಾಹಿಗಳಲ್ಲಿ, ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ ರೇಖಾ ಮತ್ತು ಕಿರುತೆರೆ ನಟ ವಸಂತ್ ಕುಮಾರ (Vasanth Kumar) ಇದೀಗ 25ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
25ನೇ ವೆಡ್ಡಿಂಗ್ ಆನಿವರ್ಸರಿಯನ್ನು(25th wedding anniversary) ಅದ್ಧೂರಿಯಾಗಿ ಆಚರಿಸಿಕೊಂಡಿರುವ ರೇಖಾ -ವಸಂತ್ ದಂಪತಿ ಕುಟುಂಬ ಮತ್ತು ಸ್ನೇಹಿತರ ಜೊತೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಕಿರುತೆರೆಯ ಹಲವು ನಟ, ನಟಿಯರು ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ರೇಖಾ ಅವರು ಕನ್ನಡ ಮಾತ್ರವಲ್ಲದೇ, ತಮಿಳು, ಮಲಯಾಳಂ ಕಿರುತೆರೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು. ವಸಂತ್ ಕುಮಾರ್ ಕೆಲವು ಜನಪ್ರಿಯ ಕನ್ನಡ ಧಾರಾವಾಗಿಗಳಾದ ಮಂಗಳಗೌರಿ ಮದುವೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಗಳಲ್ಲಿ ನಟಿಸಿದ್ದರು.
1999 ರಲ್ಲಿ ಮಾಯಾಮೃಗ (Mayamruga) ಸೀರಿಯಲ್ ನಲ್ಲಿ ನಟಿಸಿದ್ದ ರೇಖಾ, ಅದೇ ಸಮಯದಲ್ಲಿ ವಸಂತ್ ಕುಮಾರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿ ಒಬ್ಬ ಮುದ್ದಾದ ಮಗಳು ಕೂಡ ಇದ್ದಾರೆ.
ವಿವಾಹ ವಾರ್ಸಿಕೋತ್ಸವದ ಸಂಭ್ರಮದಲ್ಲಿ ರೇಖಾ ಮತ್ತು ವಸಂತ ಕೆಂಪು ಮತ್ತು ಬಿಳಿ ಬಣ್ಣದ ಡ್ರೆಸ್ ನಲ್ಲಿ ಮಿಂಚಿದ್ದರು. ರೇಖಾ ಕೆಂಪು ಸೀರೆ, ಬಿಳಿ ಬ್ಲೌಸ್ ಧರಿಸಿದ್ರೆ, ವಸಂತ್, ಕೆಂಪು ಶರ್ಟ್, ಬಿಳಿ ವೇಸ್ಟಿ ಧರಿಸಿದ್ದರು. ಇಬ್ಬರು ಪರಸ್ಪರ ಉಂಗುರ ಬದಲಾಯಿಸಿ ಸಂಭ್ರಮಿಸಿದ್ದಾರೆ.
ವಾರ್ಷಿಕೋತ್ಸವ ಸಮಾರಂಭಕ್ಕೆ ಚಿತ್ರಲ್ ರಂಗಸ್ವಾಮಿ (Chitral Rangaswamy), ಸಿಹಿಕಹಿ ಗೀತಾ, ಸುಧಾ ನರಸಿಂಹರಾಜು, ಸೇರಿ ಕಿರುತೆರೆಯ ಹಲವಾರು ನಟಿಯರು ಆಗಮಿಸಿ ಶುಭ ಕೋರಿದ್ದಾರೆ.