Satya Serial : ಬಾಲನ ಜೀವನಕ್ಕೆ ಎಂಟ್ರಿ ಕೊಟ್ಟ ರುಕ್ಕು ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ

First Published | Feb 23, 2024, 2:35 PM IST

ಸತ್ಯ ಸೀರಿಯಲ್ ನಲ್ಲಿ ಕಥೆಗೆ ವಿಭಿನ್ನ ತಿರುವು ಸಿಕ್ಕಿದ್ದು, ಬಾಲನ ಜೀವನಕ್ಕೆ ಸದ್ಯ ರುಕ್ಕು ಎಂಟ್ರಿ ಕೊಟ್ಟಿದ್ದು, ರುಕ್ಕುವಿನ ಅಂದ, ಚೆಂದ, ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. 
 

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಸತ್ಯ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬಂದಿದ್ದು, ಪ್ರೇಕ್ಷಕರಿಗಂತೂ ಸೀರಿಯಲ್ (serial) ಕಥೆ ತುಂಬಾನೆ ಇಷ್ಟವಾಗಿದೆ. 
 

ಧಾರಾವಾಹಿಯಲ್ಲಿ ಒಂದು ಕಡೆ ಸತ್ಯ ಪೋಲೀಸ್ ಆಗುವ ಬಗ್ಗೆ ಕುತೂಹಲಕಾರಿ ಎಪಿಸೋಡ್ ಮೂಡಿ ಬಂದರೆ, ಮತ್ತೊಂದೆಡೆ ದಿವ್ಯಾ ಮತ್ತು ಬಾಲ ದೂರ ಆಗಿದ್ದು, ಈಗ ಬಾಲನ ಜೀವನಕ್ಕೆ ರುಕ್ಕು ಎಂಟ್ರಿ ಕೊಟ್ಟಿದ್ದಾಳೆ. 
 

Tap to resize

ಬಾಲನ ಮಾವನ ಮಗಳಾದ ರುಕ್ಕು ಅಂದ್ರೆ ರುಕ್ಮಿಣಿ ಕೆಲಸ ಅರಸಿ, ಬೆಂಗಳೂರಿಗೆ ಬಂದಿದ್ದು, ಬಾಲನ ಜೊತೆಯಲ್ಲಿಯೇ ಅವನ ಅತ್ತೆ ಮನೆಯಲ್ಲಿ ಉಳಿದಿದ್ದಾಳೆ. ಲಂಗ, ದಾವಣಿ ಧರಿಸಿ ಬಂದ ರುಕ್ಕು ನಗು, ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. 
 

ಮಾರುದ್ದ ಜಡೆ, ಮುಡಿ ಮೇಲೆ ಮಲ್ಲಿಗೆ, ಪಕ್ಕಾ ಗ್ರಾಮೀಣ ಹುಡುಗಿ, ಆದ್ರೆ ಅಂದದಲ್ಲಿ ದೇವತೆಯಂತೆ ಕಾಣುವ ರುಕ್ಕು ಪಾತ್ರದಲ್ಲಿ ಗಂಡ ಹೆಂಡತಿ ಧಾರಾವಾಹಿಯಲ್ಲಿ ನಾಯಕ ಮುರಳಿ ತಂಗಿ ಐಶ್ವರ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಸೌಂದರ್ಯ (Soundarya) ಅಭಿನಯಿಸುತ್ತಿದ್ದಾರೆ. 
 

ಸೌಂದರ್ಯ ಹೆಸರಿಗೆ ತಕ್ಕಂತೆ ಅಂದಗಾತಿ ಹೌದು, ಮಾಡೆಲ್ (Model)  ಆಗಿರುವ ಸೌಂದರ್ಯ ನಟನೆಗೆ ಎಂಟ್ರಿ ಕೊಟ್ಟಿದ್ದು ಗಂಡ ಹೆಂಡತಿ ಸೀರಿಯಲ್ ಮೂಲಕ. ಇದೀಗ ಸತ್ಯ ಸೀರಿಯಲ್ ನಲ್ಲಿ ನಟಿಸುತ್ತಿದ್ದು, ಬಂದ ಕೆಲವೇ ದಿನಗಳಲ್ಲಿ ಸೌಂದರ್ಯ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. 
 

ಪ್ರೇಕ್ಷಕರು ದಿವ್ಯಗಿಂತ ನಿಮ್ಮ ಅತ್ತೆ ಮಗಳೇ ಚೆನ್ನಾಗಿದ್ದಾಳೆ ಬಾಲಾ ಅವರೇ....ಅವಳನ್ನೇ ಮದುವೆ ಆಗಿ ಎಂದು ಒಬ್ಬರು ಹೇಳಿದ್ರೆ. ರುಕ್ಕುನ ಅಂದನ್ನಾ ಹೋಗಳೋಕೆ ಸಾಧ್ಯನೇ ಇಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹೇ ರುಕ್ಕಮ್ಮಾ ನಿನ್ನ ಮಾತೆ ಮಾತಮ್ಮ ಎಂದಿದ್ದಾರೆ. 
 

ದಿವ್ಯ ಸೊಕ್ಕು ಅಡಗಿಸೋಕೆ ನೀನೇ ಬೇಕು ರುಕ್ಕು ಎಂದು ಕೆಲವರು ಹೇಳಿದ್ರೆ, ಮತ್ತೆ ಕೆಲವರು ರುಕ್ಕು ನಿಮ್ಮ ಆಕ್ಟಿಂಗ್ ತುಂಬಾ ಚೆನ್ನಾಗಿದೆ, ನ್ಯಾಚುರಲ್ ಸ್ಟಾರ್ ನೀವು. ನಿಮ್ಮ ನಟನೆಗೆ ಫ್ಯಾನ್ ಆಗ್ಬಿಟ್ಟೆ ಎಂದ್ರೆ, ಮತ್ತೆ ಹಲವು ಜನ ಇವರನ್ನ ನೋಡಿದ್ರೆ ಟರಗು ಪಲ್ಯ ಹೀರೋಯಿನ್ ಅಮೃತಾ ಪ್ರೇಮ್ ತರಾ ಇದ್ದಾರೆ ಅಂದಿದ್ದಾರೆ. 
 

Latest Videos

click me!