ಕಲರ್ಸ್ ಕನ್ನಡದಲ್ಲಿ ವರ್ಷದ ದೊಡ್ಡ ಹಬ್ಬ ಅನುಬಂಧ ಅವಾರ್ಡ್ಸ್ ಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಕಾರ್ಯಕ್ರಮ ನಡೆದಿದ್ದೂ, ಸೆಪ್ಟೆಂಬರ್ 20, 21, 22 ರಂದು ಪ್ರಸಾರವಾಗಲಿದೆ. ಈ ಸೀರಿಯಲ್ ಹಬ್ಬದಲ್ಲಿ ಪ್ರತಿಯೊಂದು ಸೀರಿಯಲ್ ತಾರೆಯರೂ ವಿಭಿನ್ನವಾಗಿ ರೆಡಿಯಾಗಿದ್ದು, ನಟಿ ಸುಷ್ಮಾ ನಾಣಯ್ಯ (Sushma Nanaiah) ಕೂಡ ಸಖತ್ ಸ್ಟೈಲಿಶ್ ಆಗಿ ತಯಾರಾಗಿದ್ದಾರೆ.
ಯಾರಿದು ಸುಷ್ಮಾ ನಾಣಯ್ಯ ಅಂತ ಕೇಳ್ತಿದ್ದೀರಾ? ಇವರು ಬೇರಾರೂ ಅಲ್ಲ, ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಲಕ್ಷ್ಮೀ ಅತ್ತೆ ಹಾಗೂ ವೈಷ್ಣವ್ ನ ಮುದ್ದಿನ ಅಮ್ಮ ಕಾವೇರಿ ಪಾತ್ರಕ್ಕೆ ಜೀವ ತುಂಬುತ್ತಿರುವ ನಟಿಯೇ ಸುಷ್ಮಾ ನಾಣಯ್ಯ. ಯಾವಾಗ್ಲೂ ಸೀರೆಯಲ್ಲೇ ಕಾಣಿಸಿಕೊಳ್ಳುವ ಕಾವೇರಿ, ಅನುಬಂಧ ಅವಾರ್ಡ್ಸ್ ಗೆ ವಿಭಿನ್ನವಾಗಿ ತಯಾರಾಗಿದ್ದಾರೆ.
ಸುಷ್ಮಾ ನಾಣಯ್ಯ ಡಾರ್ಕ್ ಬ್ಲೂ ಬಣ್ಣದ ಸ್ಟ್ರಾಪ್ ಬ್ಲೌಸ್ ಜೊತೆಗೆ, ನೀಲಿ ಬಣ್ಣದ ಲಂಗ ಕೂಡ ಧರಿಸಿದ್ದಾರೆ. ಇದರ ಜೊತೆಗೆ ತಮ್ಮ ಗುಂಗುರು ಕೂದಲನ್ನು ಲೂಸ್ ಬಿಟ್ಟಿದ್ದು, ಕುತ್ತಿಗೆಗೆ ಪರ್ಲ್ ಸರ ಹಾಗೂ ಕೈಯಲ್ಲಿ ವ್ಯಾನಿಟಿ ಬ್ಯಾಗ್ ಹಿಡಿದು, ತುಂಬಾನೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಕಾವೇರಿಯದ್ದು ನೆಗೆಟಿವ್ ಶೇಡ್ (negative shade) ಪಾತ್ರ. ಧಾರವಾಹಿ ವಿಲನ್ ಅಂದ್ರೆ ಅದು ಕಾವೇರಿ. ಮಗನ ಮೇಲಿನ ಅತಿಯಾದ ಪ್ರೀತಿ, ಮೋಹ ಆಕೆಯಿಂದ ಏನೆಲ್ಲಾ ಕೆಟ್ಟ ಕೆಲಸ ಮಾಡಿಸುತ್ತೆ. ಮಗನ ಪ್ರೀತಿ ತನಗಷ್ಟೇ ಸಿಗಬೇಕು, ಆತನ ಪ್ರೇಮಿ ಹಾಗೂ ಹೆಂಡ್ತಿಗೂ ಸೇರಬಾರದು ಎನ್ನುವ ವಿಚಿತ್ರ ಮನಸ್ಥಿತಿಯ ಮಹಿಳೆ ಕಾವೇರಿ.
ಇದೇ ಕಾವೇರಿ ಇದೀಗ ಅನುಬಂಧ ಅವಾರ್ಡ್ಸ್ ನಲ್ಲಿ (Anubandha Awards) ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾವೇರಿಯನ್ನು ಈ ಗೆಟಪ್ ನಲ್ಲಿ ನೋಡಿ ಲಕ್ಷ್ಮೀ ಬಾರಮ್ಮ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುವ ಮೂಲಕ ಸುಷ್ಮಾ ನಾಣಯ್ಯ ಅವರಿಗೆ ಹೊಗಳಿಕೆಮ್ ತೆಗಳಿಕೆ ಎಲ್ಲವನ್ನೂ ಮಾಡಿದ್ದಾರೆ.
ಕಾವೇರಿಯ ಅಪಿಯರೆನ್ಸ್, ಡ್ರೆಸ್ಸಿಂಗ್ ಸೆನ್ಸ್, ಸ್ಟೈಲ್ ಕುರಿತು ಜನ ಮೆಚ್ಚುಗೆ ಸೂಚಿಸಿದ್ದಾರೆ. ಕಾವೇರಿ ನೀವು ತುಂಬಾನೆ ಸೂಪರ್ ಎಂದಿದ್ದಾರೆ, ಮತ್ತೊಬ್ರು ಇಷ್ಟು ಸಣ್ಣ ವಯಸ್ಸಲ್ಲಿ ನೀವು ತಾಯಿ ಪಾತ್ರ ಮಾಡೋದಕ್ಕೆ ಯಾಕೆ ಒಪ್ಪಿಕೊಂಡ್ರಿ ಅಂದಿದ್ದಾರೆ. ಅಷ್ಟೇ ಅಲ್ಲ ನೀವು ಲಕ್ಷ್ಮೀ ಪಾತ್ರ ಮಾಡೋದಕ್ಕೆ ಸರಿಯಾಗಿದ್ರಿ ಎಂದಿದ್ದಾರೆ. ಅಷ್ಟಕ್ಕೂ ಕಾವೇರಿ ಪಾತ್ರದಲ್ಲಿ ನಟಿಸೋ ಸುಷ್ಮಾ ನಾಣಯ್ಯ ವಯಸ್ಸು ಎಷ್ಟು ಗೊತ್ತಾ? ಕೇವಲ 35 ಅಷ್ಟೇ, 4 ವರ್ಷದ ಮಗುವಿನ ಅಮ್ಮ, ಇವರಿಗೂ ಮಗನ ಪಾತ್ರ ಮಾಡೋ ವೈಷ್ಣವ್ ಗೂ 4 ವರ್ಷಗಳ ಅಂತರ ಇರಬಹುದು ಅಷ್ಟೇ.
ಇನ್ನೊಂದಿಷ್ಟು ಜನ ಇಲ್ಲ ಇಲ್ಲ ಈ ಗೆಟಪ್ ಚೆನ್ನಾಗಿಲ್ಲ, ಕಾವೇರಿಯಮ್ಮ ತರಾನೇ ಇರಬೇಕು ಆಗಲೇ ಅವರು ಚೆನ್ನಾಗಿರೋದು, ಈ ಗೆಟಪ್ ಅಲ್ಲಿ ಏನು ಚೆನ್ನಾಗಿಲ್ಲ ಅಂದ್ರೆ ಮತ್ತೊಬ್ಬರು ಆಂಟಿ ಸಾರಿ ಯೇ ಸೂಟ್ ನಿಮ್ಗೆ ಲಕ್ಷ್ಮಿ ತರ ಹುಡ್ಗಿಯರಂತೆ ಮೇಕಪ್ ಮಾಡ್ಬೇಡಿ. ಚೆನ್ನಾಗಿ ಕಾಣಲ್ಲ ಎಂದಿದ್ದಾರೆ. 20 ವರ್ಷ ಹುಡುಗಿ ಆಂಟಿ ಪತ್ರ ಮಾಡ್ತಾ ಇದೆ ಅಂತಾನೂ ಹೇಳಿದ್ದಾರೆ.