'3 ದಶಕಗಳಿಂದ ನಿಮ್ಮ ಪ್ರೀತಿಗೆ ಸೋತೆ ಹೋದೆ ಸೋತೆ ಹೋದೆ..' ಎಂದಿದ್ಯಾಕೆ ರಮೇಶ್ ಅರವಿಂದ್: ಇಲ್ಲಿದೆ ಕಾರಣ!

Published : Jun 14, 2025, 02:31 PM IST

ಬಣ್ಣದ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನೋ ಕನಸು ಕಟ್ಟಿಕೊಂಡಿರುವ ಹಲವು ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ʻಜೀ ಕನ್ನಡʼ ವಾಹಿನಿಯ ʻಮಹಾನಟಿʼ ರಿಯಾಲಿಟಿ ಶೋ ಅತ್ಯುತ್ತಮ ವೇದಿಕೆ.

PREV
16

ʻಜೀ ಕನ್ನಡʼ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿದೆ. ಇದೀಗ ಎರಡು ವಿಭಿನ್ನ ಶೋಗಳ ಮೂಲಕ ವೀಕ್ಷಕರನ್ನು ಎಂಟರ್‌ಟೈನ್‌ ಮಾಡೋದಕ್ಕೆ ʻಜೀ ಕನ್ನಡʼ ವಾಹಿನಿ ಸಜ್ಜಾಗಿದೆ.

26

ʻಮಹಾನಟಿ ಸೀಸನ್‌ 1ʼ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಈ ಶೋನ ಎರಡನೇ ಸೀಸನ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಬಣ್ಣದ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನೋ ಕನಸು ಕಟ್ಟಿಕೊಂಡಿರುವ ಹಲವು ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ʻಜೀ ಕನ್ನಡʼ ವಾಹಿನಿಯ ʻಮಹಾನಟಿʼ ರಿಯಾಲಿಟಿ ಶೋ ಅತ್ಯುತ್ತಮ ವೇದಿಕೆ.

36

ಕಳೆದ ಸೀಸನ್‌ನಂತೆ ನಿಶ್ವಿಕಾ ನಾಯ್ಡು, ಪ್ರೇಮಾ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ಈ ಶೋನ ತೀರ್ಪುಗಾರರಾಗಿದ್ದು, ಎವರ್‌ಗ್ರೀನ್‌ ನಟ ರಮೇಶ್ ಅರವಿಂದ್ ಅವರು ಮಾಸ್ಟರ್ ಮೈಂಡ್ ಆಗಿ ಇವರಿಗೆ ಮಾರ್ಗದರ್ಶನ ನೀಡಲಿದ್ದಾರೆ.

46

ಹೌದು! ರಮೇಶ್ ಅರವಿಂದ್ ಅವರು ‘ಮಹಾನಟಿ ಸೀಸನ್ 2’ಗೆ ಜಡ್ಜ್ ಆಗಿದ್ದಾರೆ. ಈ ಬಗ್ಗೆ ಅವರು ಫೋಟೋಗಳನ್ನು ಹಂಚಿಕೊಂಡಿದ್ದು, ಮೂರು ದಶಕಗಳಿಂದ ನಿಮ್ಮ ಪ್ರೀತಿಗೆ ಸೋತೆ ಹೋದೆ ಸೋತೆ ಹೋದೆ. ಈಗ ಮತ್ತೊಂದು ವೇದಿಕೆಯಲ್ಲಿ ಸಿಗುವ ಅವಕಾಶ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

56

ಇನ್ನು ರಮೇಶ್ ಅರವಿಂದ್ ಜೊತೆಗೆ ಹಿರಿಯ ನಟಿ ಪ್ರೇಮಾ, ಯುವ ನಟಿ ನಿಶ್ವಿಕಾ ನಾಯ್ಡು ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ಜಡ್ಜ್​ ಸ್ಥಾನದಲ್ಲಿ ಇರುತ್ತಾರೆ. ಇಂದಿನಿಂದ (ಜೂನ್ 14) ಪ್ರತಿ ಶನಿವಾರ ಹಾಗೂ ಭಾನುವಾರ ‘ಮಹಾನಟಿ ಸೀಸನ್ 2’ ಪ್ರಸಾರವಾಗಲಿದೆ.

66

ಕನ್ನಡದ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ಈ ಶೋನ ನಿರೂಪಣಾ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸದ್ಯ ಕನಸುಗಳು ಹೇಗೆ ನನಸಾಗುತ್ತೆ ಅನ್ನೋದಕ್ಕೆ ಮಹಾನಟಿ ರಿಯಾಲಿಟಿ ಶೋ ಒಂದು ಉತ್ತಮ ಉದಾಹರಣೆಯಾಗಿದೆ.

Read more Photos on
click me!

Recommended Stories