ಯಾರಿಗೂ ತಿಳಿಯದಂತೆ 40ನೇ ವರ್ಷದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಪ್ರಖ್ಯಾತ ನಟಿ!

Published : Sep 16, 2025, 04:34 PM IST

Huma Qureshi Engaged to Boyfriend Rachit Singh ತಮ್ಮ ದೀರ್ಘಕಾಲದ ಗೆಳೆಯ ಆಕ್ಟಿಂಗ್‌ ಕೋಚ್‌ ರಚಿತ್‌ ಸಿಂಗ್‌ ಅವರ ಜೊತೆ ಬಾಲಿವುಡ್‌ ನಟಿ ತಮ್ಮ 40ನೇ ವರ್ಷದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

PREV
110

ಬಾಲಿವುಡ್‌ನ ಖ್ಯಾತ ನಟಿ ತಮ್ಮ 40ನೇ ವರ್ಷದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದೀರ್ಘಕಾಲದ ಗೆಳೆಯ ರಚಿತ್‌ ಸಿಂಗ್‌ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿಟಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.

210

ಅವರ ಸಿನಿಮಾ ಬಯಾನ್‌ ಇತ್ತೀಚೆಗೆ ಟೊರೋಂಟೋ ಇಂಟರ್‌ನ್ಯಾಷನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರದರ್ಶನವಾಗಿತ್ತು. ಇದರ ನಡುವೆಯೇ ಅವರ ವೈಯಕ್ತಿಕ ಜೀವನದ ಖುಷಿಯ ಸುದ್ದಿ ಹೊರಬಿದ್ದಿದೆ.

310

ತಮ್ಮ ಆಕ್ಟಿಂಗ್‌ ಕೋಚ್‌ ಕೂಡ ಆಗಿದ್ದ ರಚಿತ್‌ ಸಿಂಗ್‌ ಅವರೊಂದಿಗೆ ದೀರ್ಘಕಾಲ ಸಂಬಂಧದಲ್ಲಿದ್ದ ಬಾಲಿವುಡ್‌ನಟಿ ಹುಮಾ ಖುರೇಷಿ ಇತ್ತೀಚೆಗೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿದೆ.

410

ಹಾಗಂತ ನಿಶ್ಚಿತಾರ್ಥವಾಗಿರುವ ಬಗ್ಗೆ ಇವರಿಬ್ಬರೂ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಇವರಿಬ್ಬರಿಗೂ ಸ್ನೇಹಿತೆಯಾಗಿರುವ ಗಾಯಕಿ ಅಕ್ಸಾ, ಇಬ್ಬರ ಕ್ಯಾಂಡೀಡ್‌ ಫೋಟೋ ಹಂಚಿಕೊಂಡಿದ್ದಾರೆ.

510

ಇದರೊಂದಿಗೆ ಆಕ್ಸಾ, "ಹುಮಾ ಎಂಬ ಅತ್ಯುತ್ತಮ ಹೆಸರಿನೊಂದಿಗೆ ನಿಮ್ಮ ಪುಟ್ಟ ಸ್ವರ್ಗಕ್ಕೆ ಅಭಿನಂದನೆಗಳು. ಅತ್ಯುತ್ತಮ ರಾತ್ರಿಯನ್ನು ಕಳೆದೆ" ಎಂದು ಅವರು ಬರೆದುಕೊಂಡಿದ್ದಾರೆ.

610

ಹುಮಾ ಖುರೇಷಿ ಅವರೊಂದಿಗೆ ರಚಿತ್‌ ಸುತ್ತಾಡುತ್ತಿರುವುದು ಹಲವು ವರ್ಷಗಳಿಂದ ಮಾಧ್ಯಮಗಳಿಗೂ ಹಾಗೂ ಅವರ ಕುಟುಂಬಕ್ಕೂ ಗೊತ್ತಿರುವ ವಿಚಾರ.

710

ರಚಿತ್‌ ಸಿಂಗ್‌, ಹುಮಾ ಮತ್ತು ಅವರ ಸಹೋದರ ಸಾಕಿಬ್ ಸಲೀಮ್ ಅವರ ಹಲವಾರು ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಇತ್ತೀಚೆಗೆ ಗೌರಿ ಖಾನ್ ಅವರ ಟೋರಿ ರೆಸ್ಟೋರೆಂಟ್ ಉದ್ಘಾಟನೆಯ ವೇಳೆ ನಟಿಯ ಜೊತೆ ಭಾಗವಹಿಸಿದ್ದರು.

810

ವೃತ್ತಿಪರವಾಗಿ, ಹುಮಾ ಖುರೇಷಿ ಮಿಂಚುತ್ತಲೇ ಇದ್ದಾರೆ. ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಚೆಫ್‌ ಮತ್ತು ಅಡುಗೆ ಪುಸ್ತಕ ಲೇಖಕಿ ತರ್ಲಾ ದಲಾಲ್ ಅವರ ಜೀವನ ಚರಿತ್ರೆ ಆಧಾರಿತ ತರ್ಲಾದಲ್ಲಿ.

910

ಅವರ ಮುಂಬರುವ ಸಿನಿಮಾಗಳಲ್ಲಿ ಜಾಲಿ ಎಲ್‌ಎಲ್‌ಬಿ 3 ಸೇರಿದೆ, ಇದರಲ್ಲಿ ಅವರು ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ, ಅಮೃತಾ ರಾವ್ ಮತ್ತು ಸೌರಭ್ ಶುಕ್ಲಾ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ. ಅವರು ಮೃಣಾಲ್ ಠಾಕೂರ್ ಜೊತೆಗೆ ಪೂಜಾ ಮೇರಿ ಜಾನ್ ಶೂಟಿಂಗ್‌ನಲ್ಲೂ ಭಾಗಿಯಾಗಿದ್ದಾರೆ.

1010

ಅವರ ಇತ್ತೀಚಿನ ಚಿತ್ರ ಬಯಾನ್ ಸೆಪ್ಟೆಂಬರ್ 6 ರಂದು TIFF ನಲ್ಲಿ ಜಾಗತಿಕವಾಗಿ ಮೊದಲ ಬಾರಿಗೆ ಪ್ರದರ್ಶನಗೊಂಡಿತ್ತು. ತನ್ನ ಸಹೋದರ ಸಾಕಿಬ್ ಸಲೀಮ್ ಜೊತೆ ನಿರ್ಮಾಣ ಕಂಪನಿಯನ್ನು ಸಹ-ಸ್ಥಾಪಿಸಿದ ಹುಮಾ, TIFF ಅನುಭವವನ್ನು ಹಂಚಿಕೊಂಡಿದ್ದಾರೆ.

Read more Photos on
click me!

Recommended Stories