Sonu Gowda: ‘ನನ್ನ ನಗು ಎಷ್ಟು ಸುಂದರ’ ಎಂದ ಬಿಕಿನಿ ಬ್ಯೂಟಿ: ನನ್ ಮೇಲೆ ಆಣೆ ಮಾಡಿ ಹೇಳು ಎಂದ ಫ್ಯಾನ್ಸ್‌!

First Published Dec 20, 2023, 8:19 AM IST

ಬಿಗ್ ಬಾಸ್ ಕನ್ನಡ ಒಟಿಟಿಯ ನಂತರ ಸೋನು ಶ್ರೀನಿವಾಸ್‌ ಗೌಡ ಖ್ಯಾತಿ ಗಳಿಸಿದರು. ಅವರು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ.

ತಮ್ಮ ಬೋಲ್ಡ್‌ ಪೋಟೋಗಳು, ವಿಡಿಯೋಗಳ ಮೂಲಕವೇ ಸೋನು ಶ್ರೀನಿವಾಸ್‌ ಗೌಡ ಇನ್‌ಸ್ಟಾಗ್ರಾಂನಲ್ಲಿ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿದ್ದಾರೆ.

ಇದೀಗ ಸೋನು ಶ್ರೀನಿವಾಸ್​ ಗೌಡ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಲೀವ್ ಲೆಸ್ ಬ್ಲೌಸ್, ಸೀರೆ ಧರಿಸಿ ಪೋಸ್​ ಕೊಡುವ ಮೂಲಕ ಸೋನು ಶ್ರೀನಿವಾಸ್​ ಗೌಡ ಸಂಭ್ರಮಿಸಿದ್ದಾರೆ.

ಜೊತೆಗೆ ‘ನನ್ನ ನಗು ಎಷ್ಟು ಸುಂದರ’ ಅಂತ ಕ್ಯಾಪ್ಷನ್ ಬರೆದು ಅಭಿಮಾನಿಗಳ ಬಳಿ ಸೋನು ಗೌಡ ಕೇಳಿದ್ದಾರೆ. ಸದ್ಯ ಸೋನು ಶ್ರೀನಿವಾಸ್​ ಗೌಡ ಅವರ ಗ್ಲಾಮರಸ್​ ಫೋಟೋಸ್‌ಗಳು ವೈರಲ್​ ಆಗಿವೆ.

ಸೋನು ಗೌಡ ಹಂಚಿಕೊಂಡ ಫೋಟೋಗಳಿಗೆ ನೆಟ್ಟಿಗರು, ಯಾರಿಗೆ ಹೇಳ್ಬೇಡ ನಿನ್ ನಗು ಬಗ್ಗೆ ನಿನ್ನ ನಗು ಅತೀ ಸುಂದರ, ಬ್ಯೂಟಿಫುಲ್, ನೈಸ್, ಯಾರಿಗೂ ಹೇಳ್ಬೇಡಿ ಹಾಗೂ ಅಂಬರೀಶ್ ಸ್ಟೈಲ್‌ನಲ್ಲಿ ನನ್ ಮೇಲೆ ಆಣೆ ಮಾಡಿ ಹೇಳು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಸೋನು ಗೌಡ ಅವರು ಇತ್ತೀಚೆಗೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಸೋನು ಗೌಡ ತಮ್ಮನ್ನು ಟ್ರೋಲ್ ಮಾಡದಂತೆ ರಿಕ್ವೆಸ್ಟ್ ಮಾಡಿಕೊಂಡಿದ್ದರು.

ಟ್ರೋಲ್ ಮಾಡಿ, ಆದರೆ ತೀರಾ ಮನೆ ಮಂದಿ, ಅಪ್ಪ, ಅಮ್ಮನನ್ನು ಹಿಡಿದುಕೊಂಡು ಮತನಾಡಬೇಡಿ. ಅವರಿಗೂ ನೋವಾಗುತ್ತದೆ ಎಂದು ಸೋನು ಗೌಡ ನೇರವಾಗಿ ಹೇಳಿದ್ದಾರೆ.

ಸೋನು ವಿಡಿಯೋ ವೈರಲ್ ಆಗಿದ್ದ ಬೆನ್ನಲ್ಲೇ ಈಗ ಬಿಗ್​ಬಾಸ್ ಚೆಲುವೆ ಚಂದದ ಫೋಟೋಶೂಟ್ ಮಾಡಿಕೊಂಡು ಅದರ ಫೋಟೋಸ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಖುಷಿಪಟ್ಟಿದ್ದಾರೆ.

click me!