ಮುದ್ದು ಮಗನ ಜೊತೆ ಮುದ್ದಾದ ಫೋಟೋ ಶೂಟ್ ನಲ್ಲಿ ಮಿಂಚಿದ ರಾಧಾ ಕಲ್ಯಾಣ ನಟಿ ರಾಧಿಕಾ

Published : Dec 19, 2023, 06:00 PM IST

ರಾಧಾ ಕಲ್ಯಾಣ ಸೀರಿಯಲ್ ಮೂಲಕ ಕಿರುತೆರೆ ಜನರ ಮನ ಗೆದ್ದಿದ್ದ ನಟಿ ರಾಧಿಕಾ ರಾವ್ ತಮ್ಮ ಮಗನ ಜೊತೆಗೆ ಮುದ್ದಾಗಿ ಫೋಟೋ ಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.   

PREV
17
ಮುದ್ದು ಮಗನ ಜೊತೆ ಮುದ್ದಾದ ಫೋಟೋ ಶೂಟ್ ನಲ್ಲಿ ಮಿಂಚಿದ ರಾಧಾ ಕಲ್ಯಾಣ ನಟಿ ರಾಧಿಕಾ

ಝೀ ಕನ್ನಡ ರಾಧಾ ಕಲ್ಯಾಣ (Radha Kalyana) ಸೀರಿಯಲ್ ಮೂಲಕ ಮಿಂಚಿದ್ದ ನಟಿ ರಾಧಿಕಾ ರಾವ್, ಈ ಹಿಂದೆ ತಮ್ಮ ಪ್ರೆಗ್ನೆಸಿ ಫೋಟೊ ಶೂಟ್ ಮೂಲಕ ಭಾರಿ ಸುದ್ದಿಯಾಗಿದ್ದರು. ಈ ಬಾರಿ ಮಗನ ಫೊಟೊಗಳನ್ನು ಶೇರ್ ಮಾಡಿದ್ದಾರೆ. 
 

27

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಾಧಿಕಾ (Radhika Rao) ಅವರಿಗೆ ಐದು ತಿಂಗಳ ಹಿಂದೆ ಗಂಡು ಮಗು ಹುಟ್ಟಿದ್ದು, ಇಲ್ಲಿವರೆಗೆ ಮಗುವಿನ ಫೋಟೊ ರಿವೀಲ್ ಮಾಡಿರಲಿಲ್ಲ. ಎರಡು ದಿನದ ಹಿಂದೆ ಮಗುವಿನ ಫೋಟೊ ಮತ್ತು ಅಗಸ್ತ್ಯ ಎಂದು ಹೆಸರು ಇಟ್ಟಿರೋದಾಗಿ ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. 
 

37

ಇದೀಗ ಮಗುವಿನ ಒಂದಷ್ಟು ಫೋಟೋಗಳು,  ಮಗುವಿನ ಜೊತೆಗೆ ರಾಧಿಕಾ ಇರುವಂತಹ ಮುದ್ದಾದ ಫೋಟೋಗಳನ್ನು  (photoshoot) ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ತಾಯಿ ಮಗುವಿನ ಮುದ್ದಾದ ಫೋಟೋ ನೋಡಿ ನೆಟ್ಟಿಜನ್ಸ್ ಖುಷಿಯಾಗಿದ್ದಾರೆ. ಜೊತೆಗೆ ಶುಭ ಕೋರಿದ್ದಾರೆ. 
 

47

ಮರೂನ್, ಬ್ರೌನ್ ಮತ್ತು ಬಿಳಿ ಬಣ್ಣದ ಲಾಂಗ್ ಗೌನ್ ಧರಿಸಿರುವ ರಾಧಿಕಾ, ಜೊತೆಗೆ ಕೈಯಲ್ಲಿ ಮುಟ್ಟ ಕಂದಮ್ಮನನ್ನು ಹಿಡಿದು, ಮುದ್ದಾಗಿ ಫೋಸ್ ನೀಡಿದ್ದು, ಸ್ನೇಹಿತರು, ಕುಟುಂಬಸ್ಥರು ಮಗುವಿಗೆ ಹಾಗೂ ತಾಯಿಯಾಗಿರುವ ರಾಧಿಕಾಗೆ ಶುಭ ಕೋರಿದ್ದಾರೆ. 
 

57

ಫೋಟೊಗಳನ್ನು ಶೇರ್ ಮಾಡಿರುವ ರಾಧಿಕಾ ತಾಯಿ ಮತ್ತು ಮಗುವಿನ ಸಂಬಂಧದಂತಹ ಒಂದು ಬಾಂಧವ್ಯ ಹಿಂದೆ ಇದ್ದೂ ಇಲ್ಲ, ಮುಂದೆ ಇರೋದು ಇಲ್ಲ. ಐ ಲವ್ ಯೂ ಕಂದ ಎಂದು ತಮ್ಮ ಪ್ರೀತಿಯನ್ನು ಹೊರಹಾಕಿದ್ದಾರೆ ರಾಧಿಕಾ. 
 

67

ನಟಿ ರಾಧಿಕಾ ರಾವ್ ರಾಧಾ ಕಲ್ಯಾಣ ಮತ್ತು 'ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ' ಸೀರಿಯಲ್‌ಗಳ (serial) ಮೂಲಕ ಮನೆ ಮಾತಾಗಿದ್ದರು. ತುಳು ಕಿರುತೆರೆಯಲ್ಲೂ ನಟಿಸಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಯುವರಾಣಿಯಲ್ಲೂ ಸಹ ನಟಿಸಿ ಸೈ ಎನಿಸಿಕೊಂಡಿದ್ದರು. 
 

77

ಮಂಗಳೂರು ಹುಡುಗಿ ರಾಧಿಕಾ 2020 ರಲ್ಲಿ ಆಕರ್ಷ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರಾಧಿಕಾ ಪತಿ ಆಕರ್ಷ್ ಭಟ್ ಇಂಟರ್ನ್ಯಾಷನಲ್ ಮ್ಯಾಜೀಷಿಯನ್ ಮತ್ತು ಮೈಂಡ್ ರೀಡರ್ ಆಗಿದ್ದಾರೆ. ಮದುವೆ ನಂತರ ರಾಧಿಕಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories