ಬಿಗ್ ಬಾಸ್‌ ಕೊಟ್ಟ ಸಂಭಾವನೆಯಲ್ಲಿ 80% ಬಟ್ಟೆಗೆ ಹೋಗಿದೆ ಏನೂ ಸಾಕಾಗಿಲ್ಲ: ಸ್ನೇಹಿತ್ ಹೇಳಿಕೆ ವೈರಲ್

Published : Dec 19, 2023, 05:12 PM ISTUpdated : Dec 19, 2023, 05:13 PM IST

ಬಿಗ್ ಬಾಸ್‌ ಮನೆಗೆ ಕಾಲಿಡಲು ದುಬಾರಿ ಸಂಭಾವನೆ ಪಡೆದ್ರಾ ಸ್ನೇಹಿತ್? ಬಟ್ಟೆಗಳ ಬಗ್ಗೆ ಕಿರುತೆರೆ ನಟನ ಮಾತು... 

PREV
17
ಬಿಗ್ ಬಾಸ್‌ ಕೊಟ್ಟ ಸಂಭಾವನೆಯಲ್ಲಿ 80% ಬಟ್ಟೆಗೆ ಹೋಗಿದೆ ಏನೂ ಸಾಕಾಗಿಲ್ಲ: ಸ್ನೇಹಿತ್ ಹೇಳಿಕೆ ವೈರಲ್

ಬಿಗ್ ಬಾಸ್ ಸೀಸನ್ 9 ಆರಂಭ ಆಗುವುದಕ್ಕೂ ಒಂದು ವಾರ ಮುನ್ನ ಆಫರ್ ಬಂದಿದ್ದು. ಪಿಆರ್‌ ಟೀಂ ಜೊತೆ ವಿಡಿಯೋ ಶೂಟ್‌ ಮಾಡಲು ಸಮಯ ಹೋಯ್ತು. 

27

ಶಾಪಿಂಗ್ ಮಾಡಲು ಹೆಚ್ಚಿನ ಸಮಯ ಇರಲಿಲ್ಲ. ಎರಡು ವಾರದ ಮಟ್ಟಕ್ಕೆ ಬಟ್ಟೆ ತೆಗೆದುಕೊಂಡು ಹೋಗಿದ್ದೆ ಅದಕ್ಕೂ ಹೆಚ್ಚಿನ ದಿನಗಳು ಇದ್ರೆ ಬಟ್ಟೆ ಕಳುಹಿಸಿ ಎಂದು ಹೇಳಿದ್ದೆ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸ್ನೇಹಿತ್ ಮಾತನಾಡಿದ್ದಾರೆ. 

37

 ನನ್ನ ಸ್ಟೈಲ್ ನನ್ನ ಇಷ್ಟಗಳು ಪೋಷಕರಿಗೆ ಗೊತ್ತಿಲ್ಲ ಆದರೂ ಅಪ್ಪ-ಅಮ್ಮ ಸಮಯ ತೆಗೆದುಕೊಂಡು ತುಂಬಾ ಶಾಪಿಂಗ್ ಮಾಡಿ ಕಳುಹಿಸುತ್ತಿದ್ದರು. ಅದನ್ನೇ ಹಾಕಿಕೊಳ್ಳುತ್ತಿದ್ದೆ. 

47

ಬಿಗ್ ಬಾಸ್‌ನಿಂದ ಬಂದಿರುವ ಸಂಭಾವನೆಯಲ್ಲಿ 70% ರಿಂದ 80% ಹಣ ನಾನು ಹಾಕಿರುವ ಬಟ್ಟೆಗೆ ಖರ್ಚಾಗಿದೆ. ಸರಿಯಾದ ಮೊತ್ತ ಹೇಳಲು ಇಷ್ಟವಿಲ್ಲ.

57

ನನ್ನ ಪ್ರಕಾರ ನಾನು ರಿಯಾಲಿಟಿ ಶೋ ವ್ಯಕ್ತಿ ಅಲ್ಲ. ನನಗೆ ಫಿಕ್ಷನ್‌ ಇಷ್ಟ ಆಗುತ್ತದೆ. ನಾನು ಅಕ್ಟರ್ ಆಗಬೇಕು ಎಂದು ಬಂದವನು. ನಟನೆಯಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೀನಿ. 

67

ಜೀವನ ಪೂರ್ತಿ ನಾನು ಕನಸು ಕಂಡಿದ್ದು ಆಕ್ಟರ್ ಆಗಬೇಕು ಎಂದು ಒಂದು ಕ್ಯಾರೆಕ್ಟರ್‌ನ ಪೋಟ್ರೆ ಮಾಡಬೇಕು ಎಂದು. ಬಿಗ್ ಬಾಸ್‌ನಿಂದ ಜನರಿಗೆ ಚೆನ್ನಾಗಿ ಪರಿಚಯ ಆಗಿದ್ದೀನಿ

77

24 ಗಂಟೆಗಳ ಕಾಲ ನಾನು ಏನು ಮಾಡಿದ್ದಿನಿ ಮಾಡಿಲ್ಲ ಅನ್ನೋದನ್ನು ಜನರು ನೋಡಿದ್ದಾರೆ. ಹೀಗಾಗಿ ಇನ್ನು ಮುಂದೆ ರಿಯಾಲಿಟಿ ಶೋಗಳನ್ನು ಮಾಡುವುದಿಲ್ಲ.

Read more Photos on
click me!

Recommended Stories