RCB ಕ್ರಿಕೆಟರ್‌, ಬೆಂಗಳೂರಿನ ಹುಡುಗನನ್ನು ಪ್ರೀತಿಸ್ತಿದ್ದಾರಾ ಈ Bigg Boss ಸ್ಪರ್ಧಿ; ಮ್ಯಾಚ್‌ ದಿನ ಏನಾಯ್ತು?

Published : May 15, 2026, 02:28 PM IST

Bigg Boss Shehnaaz Gill: ರಿಯಾಲಿಟಿ ಶೋ ಮೂಲಕ ಹೆಸರು ಮಾಡಿದ ನಟಿ ಶೆಹನಾಜ್ ಗಿಲ್ ಅವರು ಪ್ರಿಯತಮ ಸಿದ್ದಾರ್ಥ ಶುಕ್ಲಾ ನಿಧನರಾದಮೇಲೆ ಬೇಸರಗೊಂಡಿದ್ದರು. ಈ ಹಿಂದೆ ಮದುವೆ ಆಗೋದಿಲ್ಲ ಎಂದು ಹೇಳಿದ್ದರು. ಈಗ ಓರ್ವ ಕ್ರಿಕೆಟರ್‌ ಜೊತೆ ಡೇಟ್‌ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. 

PREV
15
ದೇವದತ್ ಪಡಿಕ್ಕಲ್ ಜೊತೆ ಡೇಟ್‌ ಮಾಡುತ್ತಿದ್ದಾರೆ?

ಇತ್ತೀಚೆಗೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮಧ್ಯದ ಐಪಿಎಲ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರು ಆರ್‌ಸಿಬಿಗೆ ಚಿಯರ್‌ ಮಾಡುತ್ತಿದ್ದರು. ಆರ್‌ಸಿಬಿ ಬ್ಯಾಟರ್, ಬೆಂಗಳೂರಿನ ಹುಡುಗ ದೇವದತ್ ಪಡಿಕ್ಕಲ್ ಜೊತೆ ಡೇಟ್‌ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

25
ಮ್ಯಾಚ್‌ ನೋಡಿದ್ರು

ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಶೆಹನಾಜ್ ಅವರು ಗ್ಯಾಲರಿಯಲ್ಲಿ ಕುಳಿತು ಆರ್‌ಸಿಬಿ ತಂಡವನ್ನು ಚಿಯರ್‌ ಮಾಡುತ್ತಿದ್ದರು. ಈ ವಿಡಿಯೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಅಭಿಮಾನಿಗಳು ಮಾತ್ರ ಶೆಹನಾಜ್, ಪಡಿಕ್ಕಲ್ ನಡುವೆ ಏನೋ ನಡೆಯುತ್ತಿದೆ ಎಂದು ಊಹಿಸಿದ್ದಾರೆ.

35
ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡ್ತಿಲ್ಲ

ಈ ಹಿಂದೆ ಕ್ರಿಕೆಟ್‌ ಬಗ್ಗೆ ಆಸಕ್ತಿ ತೋರದ ಶೆಹನಾಜ್ ಗಿಲ್‌ ಅವರು ಈಗ ಮ್ಯಾಚ್‌ ನೋಡಲು ಬಂದಿರೋದು ದೇವದತ್‌ಗೋಸ್ಕರ ಎನ್ನುತ್ತಿದ್ದಾರೆ. ಈ ಬಗ್ಗೆ ಶೆಹನಾಜ್ ಗಿಲ್ ಆಗಲಿ ಅಥವಾ ದೇವದತ್ ಪಡಿಕ್ಕಲ್ ಆಗಲಿ ಪ್ರತಿಕ್ರಿಯೆ ನೀಡಿಲ್ಲ. ಇವರಿಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಫಾಲೋ ಮಾಡುತ್ತಿಲ್ಲ. ಯಾಕೆ ಈ ವದಂತಿ ಶುರು ಆಯ್ತು ಎನ್ನೋದು ಮಾತ್ರ ಅರ್ಥ ಆಗುತ್ತಿಲ್ಲ.

45
ಮದುವೆ ಬೇಡ ಎಂದಿದ್ರು

ಈ ಹಿಂದೆ ಕೂಡ ಶೆಹನಾಜ್‌ ಗಿಲ್‌ ಅವರು ಪ್ರೀತಿ ಮಾಡುತ್ತಿದ್ದಾರೆ ಎಂದು ಕೆಲ ನಟರು, ಗಾಯಕರ ಜೊತೆ ಹೆಸರು ಥಳುಕು ಹಾಕಿಕೊಂಡಿತ್ತು. ಬಿಗ್‌ ಬಾಸ್‌ 13 ಶೋನಲ್ಲಿ ಸನಾ ಹಾಗೂ ಸಿದ್ದಾರ್ಥ್‌ ಶುಕ್ಲಾ ಮಧ್ಯೆ ಸ್ನೇಹ ಶುರು ಆಗಿತ್ತು. ಆ ಮನೆಯಿಂದ ಹೊರಬಂದಮೇಲೂ ಕೂಡ ಹಾಗೆ ಇತ್ತು. ಆಮೇಲೆ ಹೃದಯಾಘಾತದಿಂದ ಸಿದ್ದಾರ್ಥ್‌ ಶುಕ್ಲಾ ನಿಧನರಾದರು. ಆ ಬಳಿಕ ಮದುವೆ ಬೇಡ ಎನ್ನುತ್ತಿದ್ದ ಸನಾ, ಮತ್ತೆ ಮದುವೆ ಆಗೋದಾಗಿ ಸಲ್ಮಾನ್‌ ಖಾನ್‌ ಮುಂದೆ ಹೇಳಿದ್ದರು.

55
ಸತ್ಯ ಏನು?

ಶೆಹನಾಜ್‌ ಗಿಲ್‌ ಅವರಿಗೆ 32 ವರ್ಷ, ದೇವದತ್‌ ಅವರಿಗೆ 25 ವರ್ಷ. ಇವರಿಬ್ಬರು ಡೇಟಿಂಗ್‌ ಮಾಡ್ತಿರೋದು ಶುದ್ಧ ಸುಳ್ಳು ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಯಾರೋ ತಮಾಷೆಗೆ ಕಾಮೆಂಟ್‌ ಹಾಕಿರೋದು ಈ ರೀತಿ, ಇಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿರಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories