Published : Sep 27, 2025, 07:42 PM ISTUpdated : Sep 27, 2025, 07:58 PM IST
ಕ್ವಾಟ್ಲೆ ಕಿಚನ್ ಶೋನ ಗ್ರ್ಯಾಂಡ್ ಫಿನಾಲೆ ಪ್ರಸಾರ ಆಗುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸುವ 3 ಸ್ಪರ್ಧಿಗಳ ಹೆಸರನ್ನು ಕ್ವಾಟ್ಲೆ ಕಿಚನ್ ಗ್ರ್ಯಾಂಡ್ ಫಿನಾಲೆಯಲ್ಲಿ ರಿವೀಲ್ ಮಾಡಲಾಗುವುದು ಎಂದು ಮೊದಲೇ ಮಾಹಿತಿಯಿತ್ತು. ಹಾಗಾದರೆ ಅವರು ಯಾರು?
ಸಲಗ, ಮಾದೇವ, ಟಗರು ಮುಂತಾದ ಸ್ಟಾರ್ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿರುವ ಕಾಕ್ರೋಚ್ ಸುಧಿ ಅವರು ಡೈಲಾಗ್ ಹೇಳೋದರಲ್ಲಿ ಪಂಟರ್. ಅವರೀಗ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರಂತೆ.
29
ಮಂಜುಭಾಷಿಣಿ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮಂಜುಭಾಷಿಣಿ ಅವರು ಭಾಗವಹಿಸಲಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮನ ಪಾತ್ರ ಮಾಡುತ್ತಿದ್ದರು. ಕಳೆದ ಬಾರಿ ಇದೇ ಧಾರಾವಾಹಿಯಿಂದ ನಟಿ ಹಂಸ ಪ್ರತಾಪ್ ಅವರು ಕೂಡ ಈ ಶೋನಲ್ಲಿ ಭಾಗವಹಿಸಿದ್ದರು. ಈ ಬಾರಿ ಮಂಜುಭಾಷಿಣಿ ಅವರು ಭಾಗವಹಿಸುತ್ತಿರೋದು ವಿಶೇಷವಾಗಿದೆ.
39
ಗಿಲ್ಲಿ ನಟ
ಗಿಲ್ಲಿ ನಟ ಕೂಡ ಈ ಶೋನಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಎರಡು ಸೀಸನ್‌ಗಳಿಂದಲೂ ಗಿಲ್ಲಿ ನಟ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಈಗ ಇವರು ಈ ಶೋನಲ್ಲಿ ಭಾಗವಹಿಸೋದು ಪಕ್ಕಾ ಆಗಿದೆ. ಪ್ರಾಪರ್ಟಿ ಕಾಮಿಡಿ ಅವರು ನಗಿಸಿದ್ದರು, ಅಚ್ಚರಿ ಎಂಬಂತೆ ಡ್ಯಾನ್ಸ್ ಕೂಡ ಮಾಡಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಕೆಲಸಗಳಲ್ಲಿ ಭಾಗಿಯಾಗಿರುವ ಅಶ್ವಿನಿ ಗೌಡ ಅವರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರೆ. 50 ಧಾರಾವಾಹಿ, ಸಿನಿಮಾ ಎಂದು ಅವರು ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದರು. ಈ ಬಾರಿ ಅವರು ದೊಡ್ಮನೆ ಪ್ರವೇಶ ಮಾಡಿದ್ದಾರೆ.
59
ಡಾಗ್ ಸತೀಶ್
ಡಾಗ್ ಸತೀಶ್ ಎಂದೇ ಖ್ಯಾತಿ ಪಡೆದಿರುವವರು ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರಂತೆ. ಇವರ ಬಳಿ ದುಬಾರಿ ಬೆಲೆಯ ಶ್ವಾನಗಳು ಇವೆ. ಈ ಹಿಂದೆ ಒಮ್ಮೆ ಶ್ವಾನವನ್ನು ದುಬಾರಿ ಬೆಲೆ ಶ್ವಾನ ಎಂದು ಯಾಮಾರಿಸಿದ್ದರು ಎಂಬ ಕಾಂಟ್ರವರ್ಸಿ ಸೃಷ್ಟಿಯಾಗಿತ್ತು.
69
ಧನುಷ್ ಗೌಡ
ಈಗಾಗಲೇ ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ಭಾಗವಹಿಸಿರುವ ಧನುಷ್ ಗೌಡ ಅವರು ‘ಗೀತಾ’ ಧಾರಾವಾಹಿಯಿಂದ ಖ್ಯಾತಿ ಪಡೆದಿದ್ದಾರೆ. ಇವರು ಈ ಬಾರಿ ಬಿಗ್ ಬಾಸ್ ಶೋನಲ್ಲಿ ಇರಲಿದ್ದಾರಂತೆ.
79
ಅಭಿಷೇಕ್ ಶ್ರೀಕಾಂತ್
ಅಭಿಷೇಕ್ ಶ್ರೀಕಾಂತ್ ಅವರು ಲಕ್ಷಣ ಧಾರಾವಾಹಿಯಲ್ಲಿ ನಟಿಸಿದ್ದರು. ವಧು ಧಾರಾವಾಹಿಯಲ್ಲಿ ಹೀರೋ ಕೂಡ ಆಗಿದ್ದರು. ಅವರು ಬಿಗ್ ಬಾಸ್ ಪ್ರವೇಶ ಮಾಡಲಿದ್ದಾರಂತೆ.
89
ಕಾವ್ಯ ಶೈವ, ಸ್ಪಂದನಾ ಸೋಮಣ್ಣ
ಕಲರ್ಸ್ ಕನ್ನಡ ವಾಹಿನಿಯ ಕೆಂಡಸಂಪಿಗೆ ಧಾರಾವಾಹಿ, ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿರುವ ಕಾವ್ಯ ಶೈವ ಭಾಗವಹಿಸಲಿದ್ದಾರಂತೆ.
ಕರಿಮಣಿ ಧಾರಾವಾಹಿ ನಟಿ ಸ್ಪಂದನಾ ಸೋಮಣ್ಣ ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
99
ಜಾಹ್ನವಿ, ಮೌನ ಗುಡ್ಡೇಮನೆ
ಸುದ್ದಿ ನಿರೂಪಕಿ ಜಾಹ್ನವಿ ಕೂಡ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರಂತೆ
ರಾಮಾಚಾರಿ ಧಾರಾವಾಹಿ ನಟಿ ಮೌನ ಗುಡ್ಡೇಮನೆ ಕೂಡ ಇರಲಿದ್ದಾರೆ ಎನ್ನಲಾಗಿದೆ.