ತಿರುಪತಿ ತಿಮ್ಮಪ್ಪನ ದರ್ಶನ; ದೇವರು ಯಾವ ರೂಪದಲ್ಲಾದ್ರೂ ಕೈ ಹಿಡಿತಾನೆ ಎಂದ ನಟಿ ರಜಿನಿ

First Published | Aug 12, 2024, 5:45 PM IST

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದ ಮೂಲಕ ಕಾಣಿಸಿಕೊಂಡ ನಟಿ ರಜಿನಿ, ಇದಿಗ ತಿರುಪತಿ ತಿರುಮಲಕ್ಕೆ ಭೇಟಿ ನೀಡಿ ಫೋಟೋಗಳನ್ನ ಶೇರ್ ಮಾಡಿದ್ದಾರೆ. 
 

ಅಮೃತವರ್ಷಿಣಿ ಮೂಲಕ ಜನಮನ್ನಣೆ ಪಡೆದ ನಟಿ ರಜಿನಿ (Rajini), ನಂತರ ಹಲವು ಸೀರಿಯಲ್ ಗಳಲ್ಲಿ ಕಾಣಿಸಿಕೊಂಡರೂ ಸಹ ಮತ್ತೆ ಅವರಿಗೆ ಹೆಸರು ತಂದುಕೊಟ್ಟದ್ದು ಹಿಟ್ಲರ್ ಕಲ್ಯಾಣ ಧಾರಾವಾಹಿಯ ಅಂತರ ಪಾತ್ರ. ನೆಗೆಟಿವ್ ಪಾತ್ರದಲ್ಲಿ ರಜಿನಿ ಅದ್ಭುತವಾಗಿ ನಟಿಸಿದ್ದರು. 
 

ಸಿನಿಮಾ, ನಟನೆ, ಶೂಟಿಂಗ್ ಎಂದು ಬ್ಯುಸಿಯಾಗಿರುವ ನಟಿ ಹೆಚ್ಚಾಗಿ ತೀರ್ಥ ಕ್ಷೇತ್ರಗಳಿಗೆ ದರ್ಶನ ನೀಡುತ್ತಿರುತ್ತಾರೆ. ಇತ್ತೀಚೆಗಷ್ಟೇ ನಟಿ ತಮ್ಮ ಕುಟುಂಬದ ಜೊತೆ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಬಂದಿದ್ದರು. ಇದೀಗ ತಿರುಪತಿಗೆ ತೆರಳಿದ್ದಾರೆ. 
 

Tap to resize

ತಿರುಪತಿ ತಿರುಮಲ ಸನ್ನಿಧಾನಕ್ಕೆ ತೆರಳಿರುವ ನಟಿ ರಜಿನಿ ತಿಮ್ಮಪ್ಪನ ದರ್ಶನ (Tirupathi Tirumala) ಪಡೆದು ಸನ್ನಿಧಾನದ ಎದುರು ನಿಂತು ಫೋಟೊ ತೆಗೆಸಿಕೊಂಡಿದ್ದು, ಒಂದಷ್ಟು ಫೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಎಂದಿನಂತೆ ಒಂದಷ್ಟು ವೇದ ವಾಕ್ಯಗಳನ್ನು ಸಹ ಬರೆದುಕೊಂಡಿದ್ದಾರೆ. 
 

ರಜಿನಿ ತಮ್ಮ ಫೋಟೋಗಳ ಜೊತೆಗೆ ಕ್ಯಾಪ್ಶನ್ ಬರೆದು ಕೊಂಡಿದ್ದು, ಹಣ, ಒಡವೆ, ವಸ್ತ್ರ, ಬಂಧು-ಬಾಂಧವರು ಯಾವ ಕ್ಷಣದಲ್ಲಾದರೂ ನಿಮ್ಮನ್ನು ಕೈಬಿಡಬಹುದು. ಇವೆಲ್ಲ ಶಾಶ್ವತ ಅಲ್ಲ ...! ಆದರೆ ದೇವರು ಮಾತ್ರ ಯಾವ ರೂಪದಲ್ಲಾದರೂ …… ನಮ್ಮ ಕೈಹಿಡಿಯುತ್ತಾನೆ.. ಇದು ಶಾಶ್ವತ.... ಶ್ರಾವಣ ಸೋಮವಾರದ ಶುಭ ದಿನ ಎಂದು ಬರೆದು ಕೊಂಡಿದ್ದಾರೆ. 
 

ರಜಿನಿ ನೀಲಿ ಮತ್ತು ಬಿಳಿ ಬಣ್ಣದ ಸಲ್ವಾರ್ ಕಮೀಜ್ ಧರಿಸಿದ್ದು, ಹಣೆ ಮೇಲೆ ತಿಮ್ಮಪ್ಪನ ನಾಮ ಧರಿಸಿದ್ದಾರೆ. ಜೊತೆಗೆ ಅಲ್ಲಿನ ಸುಂದರ ಪ್ರಕೃತಿ, ಲಡ್ಡುವಿನ ಫೋಟೋ ಕೂಡ ಶೇರ್ ಮಾಡಿದ್ದಾರೆ. ಫೊಟೋ ನೋಡಿ ಅಭಿಮಾನಿಗಳು ತಿರುಪತಿ ನಾರಾಯಣ ನಿಮಗೆ ಒಳ್ಳೇದು ಮಾಡ್ಲಿ ಮೇಡಮ್ ಎಂದಿದ್ದಾರೆ. 
 

ಸೀರಿಯಲ್, ರಿಯಾಲಿಟಿ ಶೋಗಳಲ್ಲಿ ಆಗೋಮ್ಮೆ ಈಗೊಮ್ಮೆ ಕಾಣಿಸಿಕೊಳ್ಳೋ ರಜಿನಿ ಹೆಚ್ಚಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್, ಕಾಮಿಡಿ ರೀಲ್ಸ್, ಟ್ರೆಂಡಿಂಗ್ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಯಾವಾಗ್ಲೂ ಆಕ್ಟಿವ್ ಆಗಿರ್ತಾರೆ. ಫೋಟೋಗಳ ಜೊತೆ ರಜಿನಿ ಕ್ಯಾಪ್ಶನ್ ನಲ್ಲಿ ಬರೆಯುವಂತಹ ಸಾಲುಗಳನ್ನ ಜನರು ತುಂಬಾನೆ ಮೆಚ್ಚಿಕೊಂಡಿದ್ದಾರೆ. 
 

Latest Videos

click me!