ಹಿಟ್ಲರ್ ಕಲ್ಯಾಣದಲ್ಲಿ ದುರ್ಗಾ ನಾಪತ್ತೆ! ಜೀ ಕನ್ನಡ ವೇದಿಕೆಯಲ್ಲಿ ಸೀಮಂತ

Published : Nov 09, 2023, 03:24 PM IST

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಹಿಟ್ಲರ್ ಕಲ್ಯಾಣ ಸೀರಿಯಲ್ ನಟಿ ನಂದಿನಿ ಮೂರ್ತಿ ಆಲಿಯಾಸ್ ದುರ್ಗಾ ಅವರಿಗೆ ಜೀ ಕನ್ನಡ ವೇದಿಕೆಯಲ್ಲಿ ಸೀಮಂತ ಮಾಡಿ ಸಂಭ್ರಮಿಸಲಾಯಿತು. ಅತ್ತ ಸೀರಿಯಲ್‌ನಲ್ಲಿ ಅವರು ನಾಪತ್ತೆಯಾಗಿರುವಂತೆ ಸ್ಕ್ರಿಪ್ಟ್ ಕ್ರಿಯೇಟ್ ಮಾಡಿದ್ದು, ಇದೀಗ ಹೀಗೆಕೆ ಎಂಬುದಕ್ಕೆ ಸ್ಪಷ್ಟ ಕಾರಣ ಪತ್ತೆಯಾಗಿದೆ.  

PREV
19
ಹಿಟ್ಲರ್ ಕಲ್ಯಾಣದಲ್ಲಿ ದುರ್ಗಾ ನಾಪತ್ತೆ! ಜೀ ಕನ್ನಡ ವೇದಿಕೆಯಲ್ಲಿ ಸೀಮಂತ

ಜೀ ಕನ್ನಡದ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣ (Hitler Kalyana). ಈ ಸೀರಿಯಲ್‌ನ ಎಲ್ಲಾ ಪಾತ್ರಗಳು ಸಹ ಒಂದೊಂದು ಕಥೆ ಹೇಳುವಂತಹ ಪ್ರಮುಖ ಪಾತ್ರಗಳೇ ಆಗಿವೆ. ಅಂತಹ ಪಾತ್ರಗಳಲ್ಲಿ ದುರ್ಗಾ ಪಾತ್ರವೂ ಒಂದು. 
 

29

ದುರ್ಗಾಳದ್ದು ಎಜೆ ಮನೆಯ ಹಿರಿ ಸೊಸೆಯ ಪಾತ್ರ. ತುಂಬಾ ಸ್ಟ್ರಾಂಗ್ (Strong character) ಆಗಿರೋವಂತಹ ಪಾತ್ರ ಇದು. ಈ ಪಾತ್ರ ಜೀವ ತುಂಬಿರುವವರು ನಂದಿನಿ ಮೂರ್ತಿ. ಲೀಲಾಳನ್ನು ಮನೆಯಿಂದ ಹೊರ ಹಾಕಲು ತಂತ್ರ ರೂಪಿಸುವ ವಿಲನ್ ಆಗಿ ದುರ್ಗಾ ಕಾಣಿಸಿಕೊಂಡಿದ್ದರು. 
 

39

ಲೀಲಾಳನ್ನು ಎಜೆಯಿಂದ ದೂರ ಮಾಡಲು ಎಲ್ಲಾ ರೀತಿಯ ಆಟ ಆಡಿ, ಕೊನೆಗೆ ಅಂತರಾ ರೂಪ ಹೊಂದಿರುವ ಪ್ರಾರ್ಥನಾಳನ್ನು ಮನೆಗೆ ಕರೆಯಿಸಿದಂತಹ ವಿಲನ್ (Villain)  ಈಕೆ. ಆದರೆ ಕೊನೆಗೆ ಪ್ರಾರ್ಥನಾಳ ಬುದ್ದಿ ಗೊತ್ತಾಗಿ ಮತ್ತೆ ಲೀಲಾಳ ಕಾಲು ಹಿಡಿದು ಮನೆಗೆ ಬರುವಂತೆ ಮಾಡುತ್ತಾಳೆ ದುರ್ಗಾ. 
 

49

ಇಂತಹ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ನಂದಿನಿ ಮೂರ್ತಿ (Nandini Murthy) ಕಳೆದ ಕೆಲವು ದಿನಗಳಿಂದ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಯಾವುದೇ ಕೆಲಸದ ನಿಮಿತ್ತ ಯಾವುದೋ ಊರಿಗೆ ತೆರಳಿರೋದಾಗಿ ಹೇಳಿದ್ದರು. ಆದರೆ ನಿಜಕ್ಕೂ ನಂದಿನಿ ಮೂರ್ತಿ ಸೀರಿಯಲ್ ಬಿಟ್ಟಿದ್ದಾರೋ ಎನ್ನುವ ಮಾತು ಕೇಳಿ ಬರುತ್ತಿತ್ತು. 
 

59

ದುರ್ಗಾ ಪಾತ್ರ ಒಮ್ಮಿಂದೊಮ್ಮೆಲೆ ಕಾಣೆಯಾದಾಗ, ಆಕೆಯ ಮಾತು ಆಗಲಿ, ಸಣ್ಣ ಸುಳಿವಿನ ಬಗ್ಗೆಯಾಗಲಿ ಸೀರಿಯಲ್ ನಲ್ಲಿ ಕಾಣಿಸದೇ ಇದ್ದಾಗ, ಪ್ರೇಕ್ಷಕರೇ ದುರ್ಗಾ ಸೀರಿಯಲ್ ಬಿಟ್ಟಿರುವ ಬಗ್ಗೆ ಪ್ರಶ್ನೆ ಮಾಡಿದ್ದರು. ಇದೀಗ ಝೀ ವೇದಿಕೆಯಲ್ಲಿ (Zee Kannada awards) ಅದಕ್ಕೀಗ ಕಾರಣ ಸ್ಪಷ್ಟವಾಗಿದೆ.
 

69

ಜೀ ಕನ್ನಡ ಅವಾರ್ಡ್ಸ್ ಸಮಾರಂಭ ನಡೆಯುತ್ತಿದ್ದು, ಅದರ ಪ್ರೋಮೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಝೀ ಕುಟುಂಬದ ಈ ಜಾತ್ರೆಯಲ್ಲಿ ದುರ್ಗಾ ಪಾತ್ರ ನಿರ್ವಹಿಸುತ್ತಿರುವ ನಂದಿನಿ ಮೂರ್ತಿಯವರಿಗೆ ಸೀಮಂತ ಕಾರ್ಯ ನಡೆಸಿದ್ದಾರೆ. 
 

79

ಝೀ ಕನ್ನಡ ವೇದಿಕೆ ಮೇಲೆ ಹಿಟ್ಲರ್ ಕಲ್ಯಾಣದ ಎಲ್ಲಾ ಸದಸ್ಯರು ಸೇರಿ ಸೀರೆ, ಕುಂಕುಮ, ಹೂವು, ಬಳೆ, ಸಿಹಿ ತಿನಿಸು, ಹಣ್ಣು ಕಾಯಿಗಳನ್ನು ನೀಡಿ ಆರತಿ ಬೆಳಗಿ ಪ್ರೀತಿಯಿಂದ ಹರಸಿದ್ದಾರೆ. ವೇದಿಕೆಯಲ್ಲಿ ನಂದಿನಿ ಜೊತೆ ಮಗಳು ಸಹ ಹಾಜರಿದ್ದರು. 
 

89

ಸೀಮಂತ (Baby shower) ಸಂಭ್ರಮದಲ್ಲಿ ಕಣ್ತುಂಬಿಕೊಂಡ ನಂದಿನಿ ಮೂರ್ತಿ ಯಾವುದೇ ಹೆಣ್ಣಿಗೆ ತುಂಬಾ ಮುಖ್ಯವಾಗಿರೋ ಸಂದರ್ಭ ಇದು. ಮನಸು ತುಂಬಿ ಬಂದಿದೆ. ನನ್ನ ಲೈಫಲ್ಲಿ ನಾನು ಮರೆಯಲ್ಲ. ಎಲ್ಲರಿಗೂ ನಾನು ಚಿರಋಣಿ ಎಂದಿದ್ದಾರೆ. 
 

99

ಸೀಮಂತದ ಪ್ರೋಮೋ ವೈರಲ್ ಆಗುತ್ತಿದ್ದಂತೆ, ಹಿಟ್ಲರ್ ಕಲ್ಯಾಣ ಪ್ರೇಕ್ಷಕರು ಖುಷಿಯೂ ಆಗಿದ್ದಾರೆ, ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ನೀವು ಇಲ್ಲದೇ ಸೀರಿಯಲ್ (serial) ಮೊದಲಿನಂತೆ ಇರೋದಿಲ್ಲ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಬೇಗನೆ ಸೀರಿಯಲ್ ಗೆ ಬಂದು ಲೀಲಾ ಎಜೆ ಜೋಡಿಗೆ ಒಳ್ಳೆಯದು ಮಾಡಿ ಎಂದು ಇನ್ನು ಕೆಲವರು ಹೇಳಿದ್ದಾರೆ. 
 

Read more Photos on
click me!

Recommended Stories