ಬಿ-ಟೌನ್‌ ಮಂದಿಗೆ ಶಾಕ್ ಕೊಟ್ಟ ತೇಜಸ್ವಿ; ಕಾಂತಾರ ಚಿತ್ರಕ್ಕೆ ಮತ್ತೊಂದು ಧ್ವನಿ

Published : Mar 02, 2023, 03:03 PM ISTUpdated : Mar 02, 2023, 03:06 PM IST

ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟಿ, ಕಳೆದ ಬಾರಿಯ ಬಿಗ್ ಬಾಸ್ ಹಿಂದಿ ವಿನ್ನರ್ ಆಗಿರುವ ತೇಜಸ್ವಿ ಪ್ರಕಾಶ್. ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಅವರು ಸುದ್ದಿಯಾಗಿರೋದು ಕನ್ನಡ ಹಾಡೊಂದನ್ನು ಹಾಡಿ. 

PREV
17
ಬಿ-ಟೌನ್‌ ಮಂದಿಗೆ ಶಾಕ್ ಕೊಟ್ಟ ತೇಜಸ್ವಿ; ಕಾಂತಾರ ಚಿತ್ರಕ್ಕೆ ಮತ್ತೊಂದು ಧ್ವನಿ

ಹಿಂದಿ ಕಿರುತೆರೆಯಲ್ಲಿನ ಬಿಗ್ ಬಾಸ್ ಸೀಸನ್ 15 ವಿನ್ನರ್ (Bigg Boss season 15 winner) ಆಗಿರುವ ತೇಜಸ್ವಿ ಪ್ರಕಾಶ್ ತನ್ನ ಸ್ಟೈಲ್, ಡ್ರೆಸ್ಸಿಂಗ್, ಲವ್ ಲೈಫ್‌ನಿಂದ ಸದಾ ಸುದ್ದಿಯಲ್ಲಿರುತ್ತಾರೆ. ಹಿಂದಿ ಕಿರುತೆರೆ ಮತ್ತು ಫ್ಯಾಷನ್ ಜಗತ್ತಿನಲ್ಲಿ ತೇಜಸ್ವಿನಿ ಎಷ್ಟೊಂದು ಬ್ಯುಸಿಯಾಗಿದ್ದಾರೆ ಎಂದರೆ, ಪ್ರತಿದಿನವೂ ಅವರು ಸುದ್ದಿಯಾಗುತ್ತಿರುತ್ತಾರೆ. 

27

ಬಿಗ್ ಬಾಸ್ ಗೆ ಬರೋದಕ್ಕೂ ಮುನ್ನವೇ ತೇಜಸ್ವಿ (Tejasswi Prakash) ಸೀರಿಯಲ್, ಕತ್ರೋಂಕಿ ಖಿಲಾಡಿ, ಮತ್ತಿತರ ರಿಯಾಲಿಟಿ ಶೋ ಮೂಲಕ ಹೆಸರು ಪಡೆದುಕೊಂಡಿದ್ದರು. ಆದರೆ ಅವರು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದು ಮಾತ್ರ ಬಿಗ್ ಬಾಸ್ ನಲ್ಲಿ ವಿನ್ನರ್ ಆದ ಬಳಿಕ. ಇವರಿಗೆ ಒಂದರ ಹಿಂದೆ ಒಂದು ಎಂಬಂತೆ ಹಲವಾರು ಆಫರ್ಸ್ ಅರಸಿಕೊಂಡು ಬಂದಿವೆ. 

37

ತೇಜಸ್ವಿ ಪ್ರಕಾಶ್ ಹಲವಾರು ಜನಪ್ರಿಯ ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ, ನಾಗಿನ್ 6 ರಲ್ಲಿ (Nagin 6) ದ್ವಿಪಾತ್ರದಲ್ಲಿ ನಟಿಸಿದ್ದಾರೆ, ಮರಾಠಿ ಚಲನಚಿತ್ರಕ್ಕೂ ಸಹಿ ಮಾಡಿದ್ದಾರೆ ಮತ್ತು ಅಷ್ಟೇ ಅಲ್ಲ ಇವರು ಐಷಾರಾಮಿ ಕಾರು ಆಡಿ ಮತ್ತು ಗೋವಾದಲ್ಲಿ ಕನಸಿನ ಮನೆ ಸಹ ಖರೀದಿಸಿದ್ದಾರೆ. 
 

47

ಇನ್ನು ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಲು ಬಯಸುವ ಇವರು, ನಾವು ಸೆಲೆಬ್ರಿಟಿಗಳು, ನಾವು ಜನರಿಗೋಸ್ಕರವೇ ಬದುಕುತ್ತೇವೆ, ಅಂದಮೇಲೆ ಪ್ರೈವೆಸಿ ಯಾಕೆ ಎಂದು ಕೇಳುತ್ತಾರೆ. ಅದಕ್ಕಾಗಿಯೇ ಸೋಶಿಯಲ್ ಮೀಡಿಯಾದಲ್ಲಿ, (social media) ವಿಡಿಯೋ, ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಾರೆ.

57

ಸದ್ಯ ಇವರು ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕನ್ನಡದ ಜನಪ್ರಿಯ ಚಿತ್ರ ‘ಕಾಂತಾರ’ದ ಕರ್ಮದ ಕಲ್ಲನು ಹಾಡನ್ನು ಕನ್ನಡದಲ್ಲೇ ಹಾಡುವ ಮೂಲಕ ಅಭಿಮಾನಿಗಳಿಗೆ ತನ್ನೊಳಗಿನ ಗಾಯಕಿಯನ್ನು ಸಹ ಅನಾವರಣ ಮಾಡಿದ್ದಾರೆ. ಇವರು ಕನ್ನಡದಲ್ಲಿ ಎಷ್ಟು ಸ್ಪಷ್ಟವಾಗಿ ಪ್ರತಿ ಪದದ ಉಚ್ಚಾರಣೆ ಮಾಡಿದ್ದಾರೆ ಅಂದ್ರೆ ಕನ್ನಡಿಗರು ಇವರ ಹಾಡಿಗೆ ತಲೆದೂಗಿದ್ದಾರೆ. 

67

ಕರ್ಮದ ಕಲ್ಲನು ಎಡವಿದ ಮನುಜನ
ಬೆರಳಿನ ಗಾಯವು ಮಾಯದು
ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ
ಗುಡಿಯಲಿ ದೈವವು ಕಾಯದು
ಕತ್ತಲನು ಮಣಿಸೋಕೆ ಹಚ್ಚಿ ಇಟ್ಟ ದೀಪ
ಊರನ್ನೇ ಸುಡುವಂತ ಜ್ವಾಲೆ ಆಯಿತೇನೋ..’
ಎನ್ನುವ ವೆಂಕಟೇಶ್ ಡಿಸಿ ಹಾಡಿದ, ತ್ರಿಲೋಕ್ ತ್ರಿವಿಕ್ರಮ್ ಬರೆದ ಹಾಡುಗಳ ಸಾಲುಗಳನ್ನು ಅಷ್ಟೇ ಮುದ್ದಾಗಿ, ಒಂದು ಅಕ್ಷರವೂ ತಪ್ಪದಂತೆ, ಅದೇ ರಾಗದಲ್ಲಿ ಹಾಡಿದ್ದು, ಅಭಿಮಾನಿಗಳು ಅವರ ಹಾಡಿನ್ನು ಕೇಳಿ ವಾವ್ ಎಂದಿದ್ದಾರೆ. 

77

ಈ ಹಾಡಿನ ಜೊತೆಗೆ ಅದರ ಸಾಲುಗಳನ್ನೇ ಇಂಗ್ಲಿಷ್ ನಲ್ಲಿ ಕ್ಯಾಪ್ಶನ್ ಹಾಕಿ“The stone of karma is a man who stumbles...The finger wound will not disappear...God will not wait...The darkness was filled with a lamp...Is it a flame that burns the city?” ಎಂದು ಬರೆದುಕೊಂಡಿದ್ದಾರೆ. ನೀವು ಈ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ : ಕರ್ಮ ಹಾಡು - ತೇಜಸ್ವಿ ಪ್ರಕಾಶ್

click me!

Recommended Stories