ದಿವ್ಯಾ - ಅರವಿಂದ್ ಪ್ರೀತಿಗೆ 2 ವರ್ಷ: ಇನ್ನೆಷ್ಟು ಕಾಯ್ಬೇಕು ನಿಮ್ ಮದ್ವೆಗೆ ಅಂತ ಕೇಳ್ತಿದ್ದಾರೆ ನೆಟ್ಟಿಗರು!

Published : Mar 01, 2023, 04:10 PM IST

ಸರಿಯಾಗಿ ಎರಡು ವರ್ಷದ ಹಿಂದೆ ಬಿಗ್ ಬಾಸ್ ಮೂಲಕ ಪರಿಚಿತರಾದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಬಳಿಕ ಉತ್ತಮ ಸ್ನೇಹಿತರಾಗಿ, ಸದ್ಯ ಲವ್ ಬರ್ಡ್ಸ್ ಆಗಿ ಮಿಂಚುತ್ತಿರೋದು ಎಲ್ಲರಿಗೂ ಗೊತ್ತು. ಇದೀಗ ತಮ್ಮ ಎರಡನೇ ವರ್ಷದ ಪ್ರೀತಿಯ ಬಗ್ಗೆ ಇಬ್ಬರೂ ಪೋಸ್ಟ್ ಮಾಡಿದ್ದು, ವಿಡಿಯೋ, ಫೋಟೋಸ್ ವೈರಲ್ ಆಗುತ್ತಿದೆ.   

PREV
18
ದಿವ್ಯಾ - ಅರವಿಂದ್ ಪ್ರೀತಿಗೆ 2 ವರ್ಷ: ಇನ್ನೆಷ್ಟು ಕಾಯ್ಬೇಕು ನಿಮ್ ಮದ್ವೆಗೆ ಅಂತ ಕೇಳ್ತಿದ್ದಾರೆ ನೆಟ್ಟಿಗರು!

ಫೆಬ್ರವರಿ 28, 2021 ರಂದು ಅಂದ್ರೆ ಎರಡು ವರ್ಷಗಳ ಹಿಂದೆ ‘ಬಿಗ್ ಬಾಸ್ ಕನ್ನಡ 8’ (Bigg Boss Kannada) ಕಾರ್ಯಕ್ರಮ ಆರಂಭಗೊಂಡಿತ್ತು. ಬೈಕ್ ರೇಸರ್ ಕೆ.ಪಿ.ಅರವಿಂದ್ ಹಾಗೂ ನಟಿ ದಿವ್ಯಾ ಉರುಡುಗ ಸೇರಿ ಇತರೆ ಸ್ಪರ್ಧಿಗಳು ‘ಬಿಗ್ ಬಾಸ್’ ಗೆ ಎಂಟ್ರಿ ನೀಡಿದ್ದರು. ಆದ್ರೆ ಈ ಜೋಡಿಗಳು ಜನಕ್ಕೆ ಎಷ್ಟು ಮೋಡಿ ಮಾಡಿತ್ತೆಂದರೆ, ಈ ಜೋಡಿಗೆ ಲಕ್ಷಾಂತರ ಅಭಿಮಾನಿಗಳೇ ಹುಟ್ಟಿಕೊಂಡಿದ್ದಾರೆ. 

28

ಬಿಗ್ ಬಾಸ್ ಶೋ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಜೋಡಿ ದಿವ್ಯಾ-ಅರವಿಂದ್ ಅವರ ಪ್ರೀತಿಗೆ ಇದೀಗ 2 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳೇ ಇವರಿಬ್ಬರ ಹಲವು ವಿಡಿಯೋಗಳನ್ನು ಜೊತೆ ಸೇರಿಸಿ ಮುದ್ದಾದ ವಿಡೀಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ (socila media) ಹರಿಯಬಿಟ್ಟಿದ್ದಾರೆ. 

38

ಬಿಗ್ ಬಾಸ್ ಮನೆಯ ಲವ್ ಬರ್ಡ್ಸ್ ದಿವ್ಯಾ ಉರುಡುಗ – ಅರವಿಂದ್ ಕೆಪಿ (Divya Uruduga and Aaravind KP) ಜೋಡಿಯ ಜೊತೆಯಾಗಿ ಮಾಡುತ್ತಿದ್ದ ಟಾಸ್ಕ್‌, ಅಡುಗೆ, ಡ್ಯಾನ್ಸ್‌ ಹೀಗೆ ಒಬ್ಬರಿಗೊಬ್ಬರು ಸಾಥ್‌ ನೀಡುತ್ತ ಇರುವ ಪುಟ್ಟ ಪುಟ್ಟ ವಿಡೀಯೋಗಳನ್ನು ತುಣುಕುಗಳನ್ನು ನೋಡಿ, ಖುಷಿಯಾಗಿರೋ ಈ ಜೋಡಿಗಳು ಸ್ಪೆಷಲ್ ವೀಡಿಯೋವನ್ನ ಹಂಚಿಕೊಂಡು ಅಭಿಮಾನಿಗಳಿಗೆ ದಿವ್ಯಾ-ಅರವಿಂದ್‌ ಜೋಡಿ ಧನ್ಯವಾದ ತಿಳಿಸಿದ್ದಾರೆ
 

48

ಈ ವಿಡಿಯೋಗೆ ತನ್ನ ಖಾತೆಯಲ್ಲಿ ಶೇರ್ ಮಾಡಿರುವ ದಿವ್ಯಾ ನಿಮಗೆ ಇದಕ್ಕಿಂತ ಕ್ಯೂಟ್ ಆಗಿರುವುದು ಇನ್ನೊಂದು ಸಿಗದು. ಈ ಕುಟುಂಬ ಪ್ರತಿ ದಿನ ದೊಡ್ಡದಾಗುತ್ತಲೇ ಇದೆ. ಇಂತಹ ಕುಟುಂಬ ಪಡೆದ ನಾವು ನಿಜಕ್ಕೂ ಹೆಮ್ಮೆ ಪಡುತ್ತೇವೆ.. ನಾನು ಈ ಅಭಿಮಾನಿಗಳ ಸೈನ್ಯದ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ಬರೆದಿದ್ದಾರೆ.

58

ಇನ್ನು ಶೇರ್ ಮಾಡಿದ ವೀಡಿಯೋದಲ್ಲಿ ಅವಿ ನಂಗೆ ತುಂಬಾ ಸ್ಪೆಷಲ್. ಅವನು ಲೈಫ್​ಟೈಮ್ ನನ್ನ ಜೊತೆ ಇರಬೇಕು ಎಂದು ದಿವ್ಯಾ ಉರುಡುಗ ಹೇಳಿದ ಮಾತುಗಳು, ಜೊತೆಗೆ ನಾನು ಏನು ಹೇಳಿಲ್ಲಾಂದ್ರೂ ಅವಳಿಗೆ ಎಲ್ಲಾ ಅರ್ಥವಾಗುತ್ತೆ ಎಂದ ಅರವಿಂದ್ ಹೇಳಿದ ಮಾತುಗಳು ಸಹ ಇವೆ. ಇದನ್ನು ಕೇಳಿದ ನೆಟ್ಟಿಗರು ನೀವು ಹೀಗೆ ಯಾವಾಗ್ಲೂ ಜೊತೆಯಾಗಿ ಸಂತೋಷವಾಗಿರಿ(love birds of bigg boss) ಎಂದಿದ್ದಾರೆ. 

68

ದಿವ್ಯಾ ಹಾಗೂ ಅರವಿಂದ್ ಅವರ ವಿಡಿಯೋವನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದು,. ಸದ್ಯ ಈ ರೀಲ್ 389K ವ್ಯೂವ್ಸ್ ಪಡೆದುಕೊಂಡಿದೆ. ಇದರ ಜೊತೆಗೆ ಅರವಿಂದ್ ಮತ್ತು ದಿವ್ಯಾ ಬೇರೆ ಬೇರೆಯಾಗಿ ಸಹ ತಮ್ಮ ಖಾತೆಗಳಿಂದ ಫೋಟೋ ಇಬ್ಬರು ಜೊತೆಯಾಗಿರೋ ಫೋಟೋ ಶೇರ್ ಮಾಡಿ Happy Two ಎಂದು ಬರೆದುಕೊಂಡಿದ್ದಾರೆ.
 

78

ಇನ್ನು ಇವರ ಫೋಟೋ ಮತ್ತು ವಿಡಿಯೋಗೆ ಸಾಕಷ್ಟು ಕಮೇಂಟ್ ಗಳು ಬರುತ್ತಿದ್ದು, ಕೆಲವರು ಇನ್ನು ಎಷ್ಟು ಕಾಯ್ಬೇಕು ನಿಮ್ಮ ಮದ್ವೆಗೆ ಎಂದರೆ, ಇನ್ನೂ ಕೆಲವರು ದೇವರೇ ಇವರಿಬ್ಬರನ್ನು ಹೀಗೆ ಯಾವಾಗಲೂ ಖುಷಿಯಾಗಿ ಇಟ್ಟಿರು ಎಂದು ಬೇಡಿಕೊಂಡಿದ್ದಾರೆ. ಇನ್ನೂ ಕೆಲವರು ಎಂಥಾ ಕ್ಯೂಟ್ ಜೋಡಿ, ಬೇಗ ಮದ್ವೆ ಆಗಿ ಅಂತಾನೂ ಹೇಳಿದ್ದಾರೆ. ಯಾವಾಗ ಮದ್ವೆ ಆಗ್ತಾರೆ ಕಾದು ನೋಡಬೇಕು.

88

ಇನ್ನು ಜನವರಿಯಲ್ಲಿ ದಿವ್ಯಾ ಅವರ ಬರ್ತ್​ಡೇಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿ ಅರವಿಂದ್ ಸಂಭ್ರಮಿಸಿದ್ದರು. ಇವರಿಬ್ಬರೂ ಜೊತೆಯಾಗಿ ಸಿನಿಮಾ ಕೂಡಾ ಮಾಡುತ್ತಿದ್ದಾರೆ. ಅರ್ಧಂಬರ್ಧ ಪ್ರೇಮಕಥೆ ಎನ್ನುವ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ (Sandalwood) ಮಿಂಚಲು ಈ ಮುದ್ದಾದ ಜೋಡಿ ರೆಡಿಯಾಗುತ್ತಿದೆ. ಕಿರುತೆರೆಯಲ್ಲಿ ಮೋಡಿ ಮಾಡಿದ ಈ ಜೋಡಿ ಹಿರಿತೆರೆಯಲ್ಲಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾ? ಕಾದು ನೋಡಬೇಕಾಗಿದೆ. 
 

Read more Photos on
click me!

Recommended Stories