Hina Khan ಬೋಲ್ಡ್‌ ಆಂಡ್ ಗ್ಲಾಮರಸ್‌ ಫೋಟೋ ವೈರಲ್‌

Published : May 25, 2022, 06:23 PM IST

ಕಾನ್ಸ್ ಫಿಲ್ಮ್ ಫೆಸ್ಟಿವಲ್ 2022  (Cannes Film Festival 2022)  ರೆಡ್ ಕಾರ್ಪೆಟ್ ಮೇಲೆ  ಬಾಲಿವುಡ್‌ ತಾರೆಯರು ತಮ್ಮ ಸೌಂದರ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಈವೆಂಟ್‌ನ ರೆಡ್ ಕಾರ್ಪೆಟ್‌ನಲ್ಲಿ ತಮ್ಮ ಸೊಗಸಾದ ಮತ್ತು ಬೋಲ್ಡ್‌ ಲುಕ್‌ ತೋರಿಸುವ  ಅವಕಾಶವನ್ನು ಬಿಡುತ್ತಿಲ್ಲ. ಈ ನಡುವೆ, ಕಿರುತೆರೆ ನಟಿ ಹಿನಾ ಖಾನ್ (Hina Khan)  ಅವರ ಕೆಲವು  ಬೋಲ್ಡ್‌ ಮತ್ತು ಮಾದಕ ಫೋಟೋಗಳು ಮುಂಚೂಣಿಗೆ ಬಂದಿವೆ, ಅದರಲ್ಲಿ ಅವರ ಕಿಲ್ಲರ್‌ ಲುಕ್‌ ಸಖತ್‌ ವೈರಲ್‌ ಆಗಿದೆ.

PREV
17
Hina Khan ಬೋಲ್ಡ್‌ ಆಂಡ್ ಗ್ಲಾಮರಸ್‌ ಫೋಟೋ ವೈರಲ್‌

ಹೀನಾ ಖಾನ್‌ ಅವರು  ಸಾಗರ ನೀಲಿ ಬಣ್ಣದ ಉದ್ದನೆಯ ಫ್ರೆಂಟ್‌  ಕಟ್ ಗೌನ್ ಅನ್ನು ಧರಿಸಿದ್ದಾರೆ.  ನ್ಯೂಡ್‌ ಮೇಕಪ್‌ ಜೊತೆ  ಕೂದಲನ್ನು ಬಿಗಿಯಾಗಿ ಕಟ್ಟಿಕೊಂಡಿದ್ದಾರೆ. ಒಟ್ಟಿನಲ್ಲಿ ಅವರ ಲುಕ್ ಗ್ಲಾಮರಸ್ ಆಗಿ ಕಾಣುತ್ತಿದೆ.


 

27

ಕಾನ್ಸ್‌ನ ರೆಡ್ ಕಾರ್ಪೆಟ್‌ಗೆ ಹೋಗುವ ಮೊದಲು, ಅವರು ಫ್ರೆಂಚ್ ರಿವೇರಿಯಾದಲ್ಲಿ ಸೆಕ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ  ಫೋಟೋಗಳನ್ನು ಅವರು ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ.


 

37

ಹಿನಾ ಖಾನ್ ಅವರ ಫೋಟೋಗಳಿಗೆ ಅಭಿಮಾನಿಗಳು  ಕಾಮೆಂಟ್ ಮಾಡುತ್ತಿದ್ದಾರೆ. ಕಿಲ್ಲರ್‌ ಲುಕ್‌ ಎಂದು  ಒಬ್ಬರು ಬರೆದಿದ್ದಾರೆ. ಈ ಹುಡುಗಿ ಬೆಂಕಿ ಹಚ್ಚಿದ್ದಾಳೆ ಎಂದು ಇನ್ನೊಬ್ಬರು  ಬರೆದಿದ್ದಾರೆ. ದೇವರೇ.. ನೀನು ದೇವತೆಯಂತೆ ಕಾಣುತ್ತೀಯ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ

47

ಹಾಗೆಯೇ ಇತರರು ಕೂಡ ಕಾಮೆಂಟ್ ಮಾಡಿದ್ದಾರೆ.  ಸೂಪರ್, ಹಾಟ್‌ ಮತ್ತು ಸುಂದರ ಎಂದು  ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.  ಹಾಟಿ ರಾಣಿ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಅದೇ ಸಮಯದಲ್ಲಿ, ಅನೇಕರು ಹೃದಯ ಮತ್ತು ಬೆಂಕಿಯ ಎಮೋಜಿಯನ್ನು ಹಂಚಿಕೊಂಡಿದ್ದಾರೆ

57

ಹಿನಾ  ಅವರು ವಿಭಿನ್ನ ಭಂಗಿಗಳೊಂದಿಗೆ ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋದಲ್ಲಿ, ಹಿನಾ ಖಾನ್ ಕಾರಿನಿಂದ ಇಳಿಯುವಾಗ ತನ್ನ ಮಾದಕ ಕಾಲುಗಳನ್ನು ತೋರಿಸುತ್ತಿರುವುದನ್ನು ಕಾಣಬಹುದು. ಅಭಿಮಾನಿಗಳು ಅವರ ಫೋಟೋವನ್ನು ತುಂಬಾ ಇಷ್ಟಪಟ್ಟಿದ್ದಾರೆ

67

ಸಮುದ್ರ ತೀರದಲ್ಲಿ  ಕೂಡ ಕೆಲವು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳಲ್ಲಿ ಆಕೆ  ಬೋಲ್ಡ್‌ನೆಸ್‌ ತೋರಿಸುತ್ತಿರುವುದನ್ನು ಕಾಣಬಹುದು. ಇದಕ್ಕೂ ಮುಂಚೆಯೇ, ಹಿನಾ ಖಾನ್ ಲಂಡನ್‌ನ ಬೀದಿಗಳಲ್ಲಿ ಸಹ ಬೋಲ್ಡ್ ಫೋಟೋಶೂಟ್ ಮಾಡಿದ್ದರು, ಅವರ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು.

77

ಟಿವಿಯ ಪ್ರಸಿದ್ಧ ನಟಿಯರಲ್ಲಿ ಹಿನಾ ಖಾನ್ ಒಬ್ಬರು. ಯೆ ರಿಶ್ತಾ ಕ್ಯಾ ಕೆಹ್ಲಾತಾ ಹೈ ಎಂಬ ಟಿವಿ ಧಾರಾವಾಹಿಯ ಮೂಲಕ ಅವರು ಮೊದಲು  ನಟನೆಯನ್ನು ಪ್ರಾರಂಭ ಮಾಡಿದರು.

click me!

Recommended Stories