ಲಂಡನ್ ಬೀದಿಯಲ್ಲಿ ಬ್ಯಾಕ್ಲೆಸ್ ಡ್ರೆಸ್ನಲ್ಲಿ Hina Khan ಹಾಟ್ ಫೋಟೋ ಶೂಟ್
ಟಿವಿ ನಟಿ ಹಿನಾ ಖಾನ್ (Hina Khan) ಕೂಡ 2022ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ (Cannes Film Festival 2022)ಭಾಗವಹಿಸಲು ಮುಂಬೈಯಿಂದ ತೆರಳಿದ್ದಾರೆ. ಆದಾಗ್ಯೂ, ಅವರು ಈಗಾಗಲೇ ಕೇನ್ಸ್ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಮೊದಲೇ ಸದ್ದು ಮಾಡಲು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಅವರು ಲಂಡನ್ನಲ್ಲಿ ನಡೆದ ಯುಕೆ ಏಷ್ಯನ್ ಚಲನಚಿತ್ರೋತ್ಸವವನ್ನು ತಲುಪಿದರು. ಅಲ್ಲಿ ಅವರನ್ನು ಗೌರವಿಸಲಾಯಿತು. ಕೈಯಲ್ಲಿ ಟ್ರೋಫಿಯೊಂದಿಗೆ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಈ ಫೋಟೋಗಳಲ್ಲಿ, ಅವರು ಬಿಳಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ, ಅದನ್ನು ಅವರು ಗೌನ್ನಂತೆ ಕ್ಯಾರಿ ಮಾಡಿದ್ದಾರೆ. ಈ ಸಮಯದಲ್ಲಿ ಅವರು ಸೀರೆ ಮತ್ತು ಶೀರ್ ಬ್ಲೌಸ್ನಲ್ಲಿ ತುಂಬಾ ಸೆಕ್ಸಿ ಮತ್ತು ಬೋಲ್ಡ್ ಆಗಿ ಕಾಣುತ್ತಿದ್ದರು.
ಅವರು ಫ್ಯಾಷನ್ ಡಿಸೈನರ್ ತರುಣ್ ತಹಿಲಿಯಾನಿ ಅವರ ಕಲೆಕ್ಷನ್ನಿಂದ ಔಟ್ಫಿಟ್ ಆಯ್ಕೆ ಮಾಡಿಕೊಂಡಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಲಂಡನ್ ಬೀದಿಗಳಿಗೆ ಬೆಂಕಿ ಹಂಚಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕೇನ್ಸ್ನ ರೆಡ್ ಕಾರ್ಪೆಟ್ನಲ್ಲಿ ಹಿನಾ ಖಾನ್ ಸೊಗಸಾದ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ ಈ ಬಾರಿಯೂ ವಿಶೇಷ ರೀತಿಯಲ್ಲಿ ಪ್ರೆಸೆಂಟ್ ಮಾಡಲಿದ್ದಾರೆ. ಅದಕ್ಕೂ ಮೊದಲು ಹಿನಾ ಖಾನ್ ಲಂಡನ್ನ ಬೀದಿಗಳಲ್ಲಿ ಸುಂದರವಾದ ಫೋಟೋಶೂಟ್ ಅನ್ನು ಮಾಡಿದ್ದಾರೆ.
ಹಿನಾ ಖಾನ್ ಅವರ ಫೋಟೋಗಳಿಗೆ ಅಭಿಮಾನಿಗಳು ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅವರ ಸ್ಟೈಲ್ ನೋಡಿ ಬಹುತೇಕ ಅಭಿಮಾನಿಗಳ ಎದೆಬಡಿತ ಹೆಚ್ಚಿದೆ. ಹಿನಾ ಖಾನ್ ಅವರ ಫೋಟೋಗಳನ್ನು ನೋಡಿ, ಫ್ಯಾಬುಲಸ್, ಸೂಪರ್,ತುಂಬಾ ಸುಂದರವಾಗಿದೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಅಂತೆಯೇ, ಅನೇಕರು ಹೃದಯ ಮತ್ತು ಬೆಂಕಿಯಿಡುವ ಎಮೋಜಿಯನ್ನು ಹಂಚಿಕೊಂಡಿದ್ದಾರೆ.
ಹಿನಾ ಖಾನ್ ತನ್ನ ಸ್ಟೈಲ್ ಸ್ಟೇಟ್ಮೆಂಟ್ಗೆ ಪ್ರಸಿದ್ಧರಾಗಿದ್ದಾರೆ. ಅವರ ಲುಕ್ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಇಷ್ಟಪಡುತ್ತಾರೆ. ಯೆ ರಿಶ್ತಾ ಕ್ಯಾ ಕೆಹ್ಲಾತಾ ಹೈ ಎಂಬ ಟಿವಿ ಧಾರಾವಾಹಿಯಲ್ಲಿ ಹಿನಾ ಖಾನ್ ಅಕ್ಷರಾ ಪಾತ್ರವನ್ನು ನಿರ್ವಹಿಸಿದ್ದಾರೆ.