ಕನ್ನಡ ಯುಟ್ಯೂಬರ್ Dr Bro ಈ ಬಾರಿ Bigg Boss Kannada 12 ಶೋಗೆ ಹೋದರೆ ಈ ಘಟನೆ ನಡೆಯೋದು ಪಕ್ಕಾ!

Published : Aug 12, 2025, 06:07 PM IST

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಡಾ ಬ್ರೋ ಅವರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ 2 ಸೀನಸ್‌ಗಳಿಂದ ಡಾ ಬ್ರೋ ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದ್ರೂ ಕೂಡ, ಬಂದಿರಲಿಲ್ಲ. ಡಾ ಬ್ರೋ ಬಿಗ್‌ ಬಾಸ್‌ಗೆ ಬಂದರೆ ಏನಾಗಬಹುದು? ಶೋನಲ್ಲಿ ಯಾವ ವಿಷಯಗಳು ಹೈಲೈಟ್‌ ಆಗಬಹುದು? 

PREV
15
ಭರ್ಜರಿ ಕಾಮಿಡಿ

ಡಾ. ಬ್ರೋ ಅವರ ಮಾತಿನ ಶೈಲಿಯು ಹಾಸ್ಯದಿಂದಲೇ ಕೂಡಿದೆ. ಇಡೀ ಬಿಗ್‌ ಬಾಸ್‌ ಮನೆಯಲ್ಲಿ ಅವರ ಮಾತುಗಳು ನಗೆಚಟಾಕಿ ಸಿಡಿಸೋ ಸಾಧ್ಯತೆ ಇದೆ. ಅವರ ಹಾಸ್ಯಪ್ರಜ್ಞೆಯಿಂದ ಬಿಗ್‌ ಬಾಸ್‌ ಮನೆಯಲ್ಲಿರುವ ಒತ್ತಡ ಕಡಿಮೆ ಆದರೂ ಆಗಬಹುದು. 

25
ನೇರ, ದಿಟ್ಟ ಉತ್ತರಗಳು

ಯೂಟ್ಯೂಬ್ ವೀಕ್ಷಕರಿಗೆ ಗೊತ್ತಿರುವ ಹಾಗೆ, ಡಾ. ಬ್ರೋ ಯಾವುದೇ ವಿಷಯವನ್ನು ಕೇಳಿದರೂ ಕೂಡ ಹೆಚ್ಚು ಸಮಯ ತಗೊಳ್ಳದೆ ಅವರ ಅಭಿಪ್ರಾಯಗಳನ್ನು ಹಂಚಿಕೊಳ್ತಾರೆ. ಕೆಲವೊಮ್ಮೆ ಇಂಥ ನಿಖರ ಮಾತುಗಳು ಶೋನಲ್ಲಿ ವಿವಾದಕ್ಕೂ ಕಾರಣವಾಗಬಹುದು, ಜೊತೆಗೆ ಅವರ ಪ್ರಾಮಾಣಿಕತೆಗೂ ಗುರುತಾಗಬಹುದು.

35
ವಿವಾದ ಆದರೂ ಆಶ್ಚರ್ಯವಿಲ್ಲ

ಡಾ. ಬ್ರೋ ಅವರು ನೇರ ನಿಲುವಿನಿಂದ ಕೆಲವೊಮ್ಮೆ ವಿವಾದ ಸೃಷ್ಟಿಸಬಹುದು. ಟಿಆರ್‌ಪಿ ವಿಚಾರವಾಗಿ ಹೇಳೋದಾದರೆ ಟಿಆರ್‌ಪಿ ಹೆಚ್ಚು ತರುವಲ್ಲಿ ಸಹಾಯಕವಾಗಬಹುದು.

45
ಫ್ಯಾನ್ಸ್ ಬೆಂಬಲ

ಡಾ. ಬ್ರೋ ಅವರಿಗೆ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಡಾ ಬ್ರೋ ಅವರಿಂದ ಬಿಗ್‌ ಬಾಸ್‌ ಶೋ ನೋಡುವವರ ಸಂಖ್ಯೆ ಹೆಚ್ಚಾಗಬಹುದು.

55
ಸಾಮಾಜಿಕ ಹಾಗೂ ರಾಜಕೀಯ ಚರ್ಚೆಗಳು

ಯೂಟ್ಯೂಬ್‌ನಲ್ಲಿ ಡಾ. ಬ್ರೋ ಹಲವಾರು ಬಾರಿ ಸಾಮಾಜಿಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ಹೌಸ್‌ನಲ್ಲೂ ಇಂಥ ಚರ್ಚೆಗಳ ಬಗ್ಗೆ ಮಾತನಾಡಲೂಬಹುದು. ಈಗಾಗಲೇ ಸಾಕಷ್ಟು ದೇಶಗಳನ್ನು ಸುತ್ತಿ ಅಲ್ಲಿನ ವಿಷಯಗಳ ಬಗ್ಗೆ ಮಾತನಾಡಿರೋ ಡಾ. ಬ್ರೋ ಈ ಬಾರಿ ಬಿಗ್ ಬಾಸ್ ಕನ್ನಡದಲ್ಲಿ ಭಾಗವಹಿಸಿದರೆ, ಶೋಗೆ ಹೊಸ ಆಯಾಮ ಸಿಗಲಿದೆ.

Read more Photos on
click me!

Recommended Stories