ಬಿಗ್ ಬಾಸ್ ಮನೆಯಲ್ಲಿ ಆರಂಭವಾದ ಲವ್ ಹೆಚ್ಚು ಸಮಯ ಉಳಿಯಲ್ಲ ಎನ್ನುವ ಮಾತನ್ನು ದೂರ ಮಾಡಿ, ಬೆಸ್ಟ್ ಜೋಡಿಯಾಗಿ, ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಬದುಕುತ್ತಿದ್ದಾರೆ, ಈ ಬಿಗ್ ಬಾಸ್ ಜೋಡಿ.
ಬಿಗ್ ಬಾಸ್ ರಿಯಾಲಿಟಿ ಶೋ ಎಂದ ಕೂಡಲೇ ನೆನಪಾಗೋದು, ಆಲ್ಲಿನ ಜೊತೆಯಾಗುವ ಜೋಡಿಗಳು. ಅದೆಷ್ಟೋ ಸೀಸನ್ ಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಲವ್ ಆಗಿರೋದನ್ನು ನೋಡಿದ್ದೇವೆ. ಕೆಲವರು ಮದುವೆಯಾಗಿರೋದನ್ನು ಕೂಡ ನೋಡಿದ್ದೇವೆ. ಆದರೆ ಎಷ್ಟು ಸಂಬಂಧ ಉಳಿದಿದೆ? ಬೆರಣೆಣಿಕೆಯಷ್ಟೂ ಇಲ್ಲ ತುಂಬಾ ಕಡಿಮೆ. ಬಿಗ್ ಬಾಸ್ ಮನೆಯಲ್ಲಿ ಲವ್ ಆದ ಜೋಡಿಗಳು ತುಂಬಾ ಸಮಯ ಒಟ್ಟಿಗೆ ಇರೋದಿಲ್ಲ ಎನ್ನುವ ಮಾತಿಗೆ ತದ್ವಿರುದ್ಧ ಜೋಡಿಗಳು ಅಂದರೆ ಇವರು.
29
ಪರ್ಲ್ ಮಾನಿ ಮತ್ತು ಶ್ರೀನೀಶ್ ಅರವಿಂದ್
ಇವರು ಬಿಗ್ ಬಾಸ್ ಮಲಯಾಳಂ ಮೊದಲ ಸೀಸನ್ ಜೋಡಿಗಳು. ಬಿಗ್ ಬಾಸ್ ಮನೆಯ ರೊಮ್ಯಾಂಟಿಕ್ ಜೋಡಿ ಅಂದ್ರೆ ಅದು, ಪರ್ಲ್ ಮಾನಿ ಮತ್ತು ಶ್ರೀನೀಶ್ ಅರವಿಂದ್ . ಈ ಜೋಡಿ ಬಿಗ್ ಬಾಸ್ ಮೂಲಕ ಖ್ಯಾತಿಯನ್ನು ಮಾತ್ರವಲ್ಲದೆ ಪ್ರೀತಿಯನ್ನೂ ಕಂಡುಕೊಂಡರು. ರಿಯಾಲಿಟಿ ಶೋನಲ್ಲಿ ಪ್ರೀತಿಯನ್ನು ಪಡೆಯುವುದರಿಂದ ಹಿಡಿದು, ಇಬ್ಬರು ಮಕ್ಕಳ ಪೋಷಕರಾಗಿ, ತಮ್ಮ ಕನಸಿನ ಮನೆಯನ್ನು ರೂಪಿಸುವವರೆಗೂ ಈ ಜೋಡಿ ಪ್ರೀತಿ ಅಂದ್ರೆ ಹೀಗಿರಬೇಕು ಎಂದು ತೋರಿಸಿ ಕೊಟ್ಟರು.
39
ಬಿಗ್ ಬಾಸ್ ಮನೆಯಲ್ಲಿ ಪ್ರಪೋಸ್
ಬಿಗ್ ಬಾಸ್ ಮಲಯಾಳಂ ಮನೆಯೊಳಗೆ, ನಟ ಶ್ರೀನಿಶ್ ಅರವಿಂದ್ ಮತ್ತು ನಿರೂಪಕಿ ಪರ್ಲ್ ಮಾನೆ ಪರಸ್ಪರ ಪ್ರೀತಿಯನ್ನು ಬಹಿರಂಗವಾಗಿ ಘೋಷಿಸಿದ್ದರು. ಅವರ ಪ್ರೇಮಕಥೆಯು ಒಂದು ಗೇಮ್ ಗೆಲ್ಲೋದಕ್ಕೆ ಒಂದು ಟ್ರಿಕ್ಸ್ ಅಷ್ಟೇ ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ಆದರೆ ಈ ಜೋಡಿ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ವಲ್ಪ ಸಮಯದ ನಂತರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಮೂಲಕ ಈ ಊಹೆಗಳನ್ನು ತಳ್ಳಿಹಾಕಿದರು.
"ಇಡೀ ಜಗತ್ತು ನಮ್ಮ ಪ್ರಪೋಸಲ್ ದೃಶ್ಯವನ್ನು ನೋಡಿತ್ತು. ಬಿಗ್ ಬಾಸ್ ಮನೆಯೊಳಗೆ ಅದು 50 ನೇ ದಿನದಂದು ನಡೆದಿತ್ತು. ನಾನು ಅವರ ಬಳಿಗೆ ಹೋಗಿ, 'ನನಗೆ ನೀನು ತುಂಬಾ ಇಷ್ಟ. ನನಗೆ ಡೇಟಿಂಗ್ ಮಾಡೋದು ಇಷ್ಟವಿಲ್ಲ. ನಾನು ಮದುವೆಯಾಗಲು ಬಯಸುತ್ತೇನೆ. ನೀನು ಅದಕ್ಕೆ ರೆಡೀನಾ?" ಎಂದು ಕೇಳಿದೆ , ಅದಕ್ಕೆ ಶ್ರೀನಿ ಯೆಸ್ ಎಂದಿದ್ದರು. ಅದೊಂದು ಕನಸಿನಂತಿತ್ತು ಎಂದು ಪರ್ಲ್ ಸಂದರ್ಶನವೊಂದರಲ್ಲಿ ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದರು.
59
ಹಿಂದೂ ಕ್ರಿಶ್ಚಿಯನ್ ವೆಡ್ಡಿಂಗ್
ಈ ಜೋಡಿ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರೂ, ಎರಡೂ ಪದ್ದತಿ ಪ್ರಕಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಾಂಪ್ರದಾಯಿಕ ವಿವಾಹ ಸಮಾರಂಭಗಳನ್ನು ಅವರು ನಡೆಸಿದ್ದರು. ನಿಸ್ಸಂದೇಹವಾಗಿ, ಇದು ಮಲಯಾಳಂ ಟಿವಿಯಲ್ಲಿ ಹೆಚ್ಚು ಸೆಲೆಬ್ರೇಟ್ ಮಾಡಿದ ವಿವಾಹಗಳಲ್ಲಿ ಒಂದಾಗಿದೆ.
69
ಮೊದಲ ಮಗುವಿನ ಜನನ
ಈ ದಂಪತಿಗಳು 2021 ರಲ್ಲಿ ತಮ್ಮ ಮೊದಲ ಮಗು ನೀಲಾಳನ್ನು ಬರಮಾಡಿಕೊಂಡಿದ್ದರು. ಅಂದಿನಿಂದ, ಆ ಮಗು ಟೆಲಿ ಪ್ರೇಕ್ಷಕರಿಗೆ ತುಂಬಾ ಪ್ರೀತಿಯ ಮಗು ಕೂಡ ಆಗಿತ್ತು. ಶ್ರೀನಿಶ್ ಮತ್ತು ಪರ್ಲ್ ಇಬ್ಬರೂ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೀಲಾ ಬಗ್ಗೆ ಅಪ್‌ಡೇಟ್ ಮಾಡುವುದನ್ನು ಯಾವತ್ತೂ ಮಿಸ್ ಮಾಡೋದೇ ಇಲ್ಲ.
79
ಕನಸಿನ ಮನೆ ಖರೀದಿಸಿದ ಜೋಡಿ
ಈ ದಂಪತಿಗಳು ಕೆಲ ವರ್ಷಗಳ ಹಿಂದೆ ಮತ್ತೊಂದು ಕನಸನ್ನು ಸಹ ಜೊತೆಯಾಗಿ ನನಸಾಗಿಸಿದ್ದರು. ತಮ್ಮ ಸ್ಟ್ರೀಮಿಂಗ್ ಚಾನೆಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಈ ಜೋಡಿ ದ್ವೀಪವೊಂದರಲ್ಲಿ ತಮ್ಮ ಕನಸಿನ ಮನೆಯನ್ನು ಖರೀದಿಸಿರುವುದಾಗಿ ಘೋಷಿಸಿದರು.
89
ಎರಡನೇ ಮಗುವಿನ ಜನನ
ಒಂದು ವರ್ಷ ಮುನ್ನ ಈ ಜೋಡಿ ತಮ್ಮ ಎರಡನೇ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದರು. ಒಂಬತ್ತು ತಿಂಗಳ ಸವಾಲಿನ ನಂತರ ಮೊದಲ ಬಾರಿಗೆ ತನ್ನ ಮಗುವನ್ನು ಎತ್ತಿಕೊಳ್ಳುವ ಅಗಾಧ ಭಾವನೆಗಳನ್ನು ಪರ್ಲೆ ಭಾವನಾತ್ಮಕ ಪೋಸ್ಟ್‌ನಲ್ಲಿ ವ್ಯಕ್ತಪಡಿಸಿದ್ದರು.
99
ಪರ್ಲ್ ಮಾನಿ ಶೋ
ಸದ್ಯಕ್ಕಂತೂ ಪರ್ಲ್ ಮಲಯಾಳಂನ ಜನಪ್ರಿಯ ನಿರೂಪಕಿಯಾಗಿದ್ದಾರೆ. ಪರ್ಲ್ ಮಾನಿ ಶೋನಲ್ಲಿ ವಿವಿಧ ಸೆಲೆಬ್ರಿಟಿಗಳನ್ನು ಇಂಟರ್ವ್ಯೂ ಮಾಡಿ, ಅವರು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡುತ್ತಿದ್ದರು ಪರ್ಲಿ. ಈಕೆ ಸಿಂಪ್ಲಿಸಿಟಿ, ನಗುವಿಗೆ ಲಕ್ಷಾಂತರ ಜನರು ಅಭಿಮಾನಿಗಳು ಸಹ ಹುಟ್ಟಿಕೊಂಡಿದ್ದಾರೆ. ಇವರಿಬ್ಬರ ಜೋಡಿ ನೋಡಿದ್ರೆ ಇದ್ದರೆ ಇವರ ರೀತಿ ಇರಬೇಕು ಎಂದು ಹೇಳುವಂತೆ ಇದ್ದಾರೆ ಈ ಮುದ್ದಾದ ಬಿಗ್ ಬಾಸ್ ಜೋಡಿ.