ನೀವು ನೋಡಲೇಬೇಕಾದ ಎದೆ ಝಲ್ ಎನಿಸುವ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸೀರೀಸ್

Published : Jul 08, 2023, 06:03 PM IST

ನೀವು ಹಾರರ್ ವೆಬ್ ಸೀರೀಸ್ ನೋಡಲು ಇಷ್ಟಪಟ್ಟರೆ, ಖಂಡಿತವಾಗಿಯೂ ಈ ವೆಬ್ ಸೀರೀಸ್ ವೀಕ್ಷಿಸಿ, ಈ ವೆಬ್ ಸೀರೀಸ್ ನಿಮ್ಮ ಎದೆ ಝಲ್ ಎನ್ನುವಂತೆ ಮಾಡುತ್ತೆ, ಅಷ್ಟೇ ಅಲ್ಲ, ಇವುಗಳನ್ನ ನೋಡ್ತಾ ಇದ್ರೆ, ರೋಮ, ರೋಮಗಳು ಎದ್ದು ನಿಲ್ಲೋದು ಸಹ ಖಚಿತ.   

PREV
16
ನೀವು ನೋಡಲೇಬೇಕಾದ ಎದೆ ಝಲ್ ಎನಿಸುವ ಸಸ್ಪೆನ್ಸ್ ಥ್ರಿಲ್ಲರ್ ವೆಬ್ ಸೀರೀಸ್

ನಿಮ್ಮ ವೀಕೆಂಡ್ ಗಳನ್ನು ಇಂಟ್ರೆಸ್ಟಿಂಗ್ ಆಗಿಸಲು ನೀವೇನು ಮಾಡ್ತೀರಾ? ಹೆಚ್ಚಾಗಿ ಜನ ಇವಾಗ ವೆಬ್ ಸೀರೀಸ್ (web series) ನೋಡ್ತಾರೆ. ಇಲ್ಲಿ ಕೆಲವು ವಿಶೇಷ ಹಾರರ್ ವೆಬ್ ಸೀರೀಸ್ (horror web series) ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಈ ವೆಬ್ ಸೀರೀಸ್‌ಗಳನ್ನ ನೋಡಿ ಎಂಜಾಯ್ ಮಾಡಬಹುದು. ನೀವು ಹಾರರ್, ರೊಮ್ಯಾಂಟಿಕ್ ಸೀರೀಸ್ ನೋಡಲು ಬಯಸೋದಾದ್ರೆ ಇಲ್ಲಿದೆ ಬೆಸ್ಟ್ ಆಯ್ಕೆಗಳು. 
 

26

ಭ್ರಮ್ (Bhram)
'ಭ್ರಮ್' ಹೆಸರಿನ ಈ ವೆಬ್ ಸೀರೀಸ್ ಒಂದು ರೀತಿಯ ಸೈಕಲಾಜಿಕಲ್ ಥ್ರಿಲ್ಲರ್ ಆಗಿದೆ. ಈ ವೆಬ್ ಸೀರೀಸ್ ಯುವತಿಯ ಜೀವನ ಕಥೆಯ ಸುತ್ತ ಸುತ್ತುತ್ತೆ. ನೀವು ಮನೆಯಲ್ಲಿ ಕುಳಿತು ನಡುಕಹುಟ್ಟಿಸುವ ಈ ವೆಬ್ ಸೀರೀಸ್ ಎಂಜಾಯ್ ಮಾಡಬಹುದು. ನೀವು ಈ ವೆಬ್ ಸೀರೀಸ್ ನ್ನು ಝೀ5 ನಲ್ಲಿ ವೀಕ್ಷಿಸಬಹುದು.

36

'ಘೌಲ್' (Ghoul)
ಈ ವೆಬ್ ಸೀರೀಸ್ ನಲ್ಲಿ ಮಾನವ್ ಕೌಲ್ ಮತ್ತು ರಾಧಿಕಾ ಆಪ್ಟೆ ಅಭಿನಯಿಸಿದ್ದಾರೆ. ನೀವು ನೆಟ್ ಫ್ಲಿಕ್ಸ್ ನಲ್ಲಿ ಈ ವೆಬ್ ಸೀರೀಸ್ ಸಹ ವೀಕ್ಷಿಸಬಹುದು. 'ಘೌಲ್' ಮಿಲಿಟರಿ ವಿಚಾರಣೆ ಕೇಂದ್ರವನ್ನು ಆಧರಿಸಿದ ಕಥೆಯಾಗಿದ್ದು, ಅಲ್ಲಿ ಕೆಲವು ಭಯಾನಕ ಭಯೋತ್ಪಾದಕರನ್ನು ಸೆರೆಹಿಡಿಯಲಾಗುತ್ತದೆ. ಈ ಹಾರರ್ ಥ್ರಿಲ್ಲರ್ ಸೀರೀಸ್ ನಿಮ್ಮ ವೀಕೆಂಡ್ ಗೆ ಬೆಸ್ಟ್ ಆಯ್ಕೆ. 
 

46

ಪರ್ ಛಾಯಿ (Parchayee)
ಝೀ5 ನ ಸೂಪರ್ ಹಿಟ್ ಹಾರರ್ ವೆಬ್ ಸರಣಿ ಪರ್ ಛಾಯಿ ನೋಡಲು ಮರೆಯಬೇಡಿ. ಈ ವೆಬ್ ಸರಣಿಯಲ್ಲಿ ಶಕ್ತಿ ಕಪೂರ್ ನಟಿಸಿದ್ದಾರೆ . ಶಕ್ತಿ ಕಪೂರ್ ತನ್ನ ಪೂರ್ವಜರ ಬಂಗಲೆಯನ್ನು ಕಾವಲು ಕಾಯುತ್ತಾನೆ, ಇದನ್ನು ಅವರ ಪೂರ್ವಜರು ನೋಡಿಕೊಳ್ಳುತ್ತಿದ್ದರು, ಇದನ್ನು ಶಕ್ತಿ ಕಪೂರ್ ಮುನ್ನಡೆಸುತ್ತಿದ್ದಾರೆ. ಹೀಗಿರೋವಾಗ ಬಂಗಲೆಯ ಒಂದೊಂದೆ ರಹಸ್ಯಗಳು ಬಯಲಾಗುತ್ತೆ. ಕುತೂಹಲ ಜೊತೆ ಭಯ ಹುಟ್ಟಿಸುವ ಈ ಸೀರೀಸ್ ನೀವು ನೋಡಲೇಬೇಕು.

56

ಗಹರಾಯಿಯಾ (Gehrayia)
ಸಿದ್ಧಾಂತ್ ಸಚ್ದೇವ್ ನಿರ್ದೇಶನದ ಈ ವೆಬ್ ಸೀರಿಸ್ ಸರ್ಜನ್ ನ ಕಥೆಯನ್ನು ಹೇಳುತ್ತೆ. ನೀವು ತುಂಬಾ ಭಯಾನಕ ವೆಬ್ ಸೀರೀಸ್ ನೋಡಲು ಬಯಸಿದರೆ, ಗಹರಾಯಿಯಾ ನಿಮ್ಮ ಎದೆ ಝಲ್ ಅನಿಸುವಂತೆ ಮಾಡುತ್ತೆ. ಈ 10 ಎಪಿಸೋಡ್ಗಳ ಸೀರೀಸ್ ಅನ್ನು ನೀವು ಒಟಿಟಿ ಪ್ಲಾಟ್ಫಾರ್ಮ್ 'ವ್ಯೂ' (Viu) ನಲ್ಲಿ ವೀಕ್ಷಿಸಬಹುದು.

66

ಟೈಪ್ ರೈಟರ್ (Type writer)
ನೆಟ್ ಫ್ಲಿಕ್ಸ್ ನಲ್ಲಿ ನೀವು ಈ ಟೈಪ್ ರೈಟರ್ ಸೀರೀಸ್ ನೋಡಬಹುದು. ನೀವು ಸಹ ಪ್ರೇತ ಕಥೆಗಳನ್ನು ನೋಡಲು ಇಷ್ಟಪಟ್ಟರೆ, ಟೈಪ್ ರೈಟರ್ ಬೆಸ್ಟ್ ಆಯ್ಕೆ.  ಕಥೆಯು ಘೋಸ್ಟ್ ಆಫ್ ಸುಲ್ತಾನ್ಪುರ್ ಎಂಬ ಪುಸ್ತಕ ಮತ್ತು ಟೈಪ್ ರೈಟರ್ ಸುತ್ತ ಸುತ್ತುತ್ತದೆ. ಈ ವೆಬ್ ಸರಣಿಯಲ್ಲಿ, ನಾಲ್ಕು ಮಕ್ಕಳು ಆತ್ಮವನ್ನು ಹಿಡಿಯಲು ಪ್ರಯತ್ನಿಸುವ ಕತೆ ಇದೆ.
 

click me!

Recommended Stories