ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್ ಸೂರ್ಯವಂಶಿ ಪಾತ್ರದಲ್ಲಿ ಮಿಂಚುತ್ತಿರುವ ಸುದರ್ಶನ್ ರಂಗಪ್ರಸಾದ್.
ಸುದರ್ಶನ್ ರಂಗಪ್ರಸಾದ್ ರಿಯಲ್ ಲೈಫ್ ಪತ್ನಿ ಹೆಸರು ಸಂಗೀತಾ ಭಟ್. ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಂಗೀತಾ ಭಟ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಸಂಗೀತಾ ಭಟ್. ತಲೆ ಕೆಡಿಸಿಕೊಳ್ಳಬೇಡ ನಾನು ಯಾರಿಗೂ ನಿನ್ನ ವಯಸ್ಸು 31 ಅಂತ ಹೇಳುವುದಿಲ್ಲ' ಎಂದು ತಾಂಡವ್ ಬರೆದುಕೊಂಡಿದ್ದಾರೆ.
ಜೊತೆಗೆ 'ನಿನಗೆ ಒಂದು ವರ್ಷ ಆಂಟಿ ಆಗಿರುವ ಅನುಭವ ಪಡೆದಿರುವೆ. ಲೈಫ್ ಎಂಜಾಯ್ ಮಾಡು' ಎಂದು ಸುದರ್ಶನ್ (Sudarshan Rangaprasad) ಹೇಳಿದ್ದಾರೆ.
'ವಿಶ್ ಮಾಡಿದಕ್ಕೆ ಥ್ಯಾಂಕ್ಸ್. ವಯಸ್ಸು ಹೇಳಿರುವುದಕ್ಕೆ ಸುದರ್ಶನ್ ನಿಮ್ಮ ವಯಸ್ಸು ರಿವೀಲ್ ಮಾಡ್ಲಾ?' ಎಂದು ಕಾಮೆಂಟ್ ಮಾಡಿದ್ದಾರೆ.
ಎರಡನೇ ಸಲ, ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ದಯವಿಟ್ಟು ಗಮನಿಸಿ ಸಿನಿಮಾಗಳಲ್ಲಿ ನಟಿಸಿ, ಜನರಿಂದ ಮೆಚ್ಚುಗೆ ಗಳಿಸಿದ್ದಾರೆ ಸಂಗೀತಾ ಭಟ್.
ಸಂಗೀತಾ ಮತ್ತು ಸುದರ್ಶನ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಮದ್ವೆಗೂ ಮುಂಚೆ ಮೂರು ವರ್ಷ ಪ್ರೀತಿಸಿದ್ದ ಈ ಜೋಡಿ ಮದ್ವೆ ಆಗಿ 7 ವರ್ಷ ಕೂಡ ಆಗಿದೆ.