ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಹೌದು ನಟಿ ನಯನಾ ಗರ್ಭಿಣಿ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
26
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ನಯನಾ ಕನ್ನಡಿಗರಿಗೆ ಪರಿಚಿತರಾದರು. ಅದ್ಭುತ ಹಾಸ್ಯದ ಮೂಲಕ ನಯನಾ ಕನ್ನಡಿಗರ ಹೃದಯ ಗೆದ್ದರು.
36
ನಯನಾ ಬೆಂಗಳೂರು ಮೂಲದ ಉದ್ಯಮಿ ಶರತ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಅಂದಹಾಗೆ ಇವರದ್ದು ಲವ್ ಮ್ಯಾರೇಜ್. 9 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು.
46
ತಾಯಿಯಾಗುತ್ತಿರುವ ನಯನಾ ಅವರಿಗೆ ಸ್ಟಾರ್ ಸುವರ್ಣಾ ವಾಹಿನಿಯಲ್ಲಿ ಪ್ರಸಾರವಾಗುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಬಸರಿ ಬಯಕೆ ಈಡೇರಿಸಲಾಗಿದೆ.
56
Nayana
ಸಿಹಿ ಕಹಿ ಚಂದ್ರು ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ನಯನಾ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನಯನಾ ಇಷ್ಟದ ಪಾನಿಪೂರಿ ಮಾಡಿಕೊಡುವ ಮೂಲಕ ಬಯಕೆ ಈಡೇರಿಸಲಾಗಿದೆ.
66
Nayana
ಸದ್ಯ ಸ್ಟಾರ್ ಸುವರ್ಣ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ನಯನಾಗೆ ಸದ್ಯ 6 ತಿಂಗಳು. ಗರ್ಭಿಣಿಯಾಗಿದ್ದರೂ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.