ಕನ್ನಡದ ಬಿಗ್ ಬಾಸ್ ವಿನ್ನರ್ಸ್ ಈಗೇನು ಮಾಡುತ್ತಿದ್ದಾರೆ?

Published : Feb 21, 2023, 04:41 PM ISTUpdated : Feb 21, 2023, 04:42 PM IST

ಕನ್ನಡದ ಬಿಗ್ ಬಾಸ್ 9 ಸೀಸನ್ ಗಳನ್ನು ಮುಗಿಸಿದೆ. ಪ್ರತಿ ಸೀಸನ್ ನಲ್ಲೂ ವಿನ್ನರ್ ಆಗೋರು, ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರುವ ಬಗ್ಗೆ ಕನಸು ಕಂಡು ಕೊಂಡಿರುತ್ತಾರೆ. ಕೆಲವರು ಅದರಲ್ಲಿ ಯಶಸ್ಸು ಪಡೆದ್ರೆ, ಇನ್ನೂ ಕೆಲವರು ಅಷ್ಟೇನು ಸದ್ದು ಮಾಡೋದೆ ಇಲ್ಲ. ವಿಷ್ಯ ಏನಂದ್ರೆ ಇಲ್ಲಿವರೆಗಿನ ಕನ್ನಡದ ಬಿಗ್ ಬಾಸ್ ನ ಎಲ್ಲಾ ಸೀಸನ್ ವಿನ್ನರ್ ಗಳು ಈವಾಗ ಏನು ಮಾಡ್ತಿದ್ದಾರೆ? ಬನ್ನಿ ನೋಡೋಣ… 

PREV
19
ಕನ್ನಡದ ಬಿಗ್ ಬಾಸ್ ವಿನ್ನರ್ಸ್ ಈಗೇನು ಮಾಡುತ್ತಿದ್ದಾರೆ?

ಬಿಗ್ ಬಾಸ್ ಸೀಸನ್ 1 : ವಿಜಯ್ ರಾಘವೇಂದ್ರ  (Vijay Raghavendra)
ವಿಜಯ್ ರಾಘವೇಂದ್ರ ಬಿಗ್ ಬಾಸ್ ಕನ್ನಡ ಮೊದಲ ವಿನ್ನರ್ ಆಗಿದ್ದರು. ನಟ ಪ್ರಸ್ತುತ ತಮ್ಮ ಮುಂಬರುವ ಚಿತ್ರವೊಂದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ, ಅಷ್ಟೇ ಅಲ್ಲ. ವಿಜಯ್ ರಾಘವೇಂದ್ರ ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುವ 'ಸೂಪರ್ ಕ್ವೀನ್' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

29

ಬಿಗ್ ಬಾಸ್ ಸೀಸನ್ 2 : ಅಕುಲ್ ಬಾಲಾಜಿ (Akul Balaji)
ಅಕುಲ್ ಬಿಗ್ ಬಾಸ್ ಕನ್ನಡ ಸೀಸನ್ 2 ರ ವಿಜೇತ. ಅಂದಿನಿಂದ, ಅವರು ಕನ್ನಡ ಟಿವಿಯ ಅತ್ಯಂತ ಬೇಡಿಕೆಯ ನಿರೂಪಕರಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಕನ್ನಡ ಕಿರುತೆರೆ ಮಾತ್ರವಲ್ಲದೆ ತೆಲುಗು ರಿಯಾಲಿಟಿ ಶೋ ಒಂದರಲ್ಲೂ ಅಕುಲ್ ನಿರೂಪಕರಾಗಿದ್ದಾರೆ. ಅವರು ಒಂದು ದಶಕದ ನಂತರ ತೆಲುಗು ಟಿವಿ ಸೀರಿಯಲ್ ನಲ್ಲೂ ನಟಿಸುತ್ತಿದ್ದಾರೆ.

39

ಬಿಗ್ ಬಾಸ್ ಸೀಸನ್ 3 : ಶ್ರುತಿ (Shruthi)
'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ವಿನ್ನರ್ ಆಗಿ ಹೊರಹೊಮ್ಮಿದ ಏಕೈಕ ಮಹಿಳಾ ಸ್ಪರ್ಧಿ ಶ್ರುತಿ. ನಟಿ ಸೀಸನ್ 3 ರ ವಿಜೇತರಾಗಿ ಕಿರೀಟ ಧರಿಸಿದರು. ಶ್ರುತಿ ತಮ್ಮ ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದರೂ,ಇದೀಗ ರಿಯಾಲಿಟಿ ಶೋ ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

49

ಬಿಗ್ ಬಾಸ್ ಸೀಸನ್ 4 : ಒಳ್ಳೆ ಹುಡುಗ ಪ್ರಥಮ್ (Olle huduga Pratham)
ಬಿಗ್ ಬಾಸ್ ಕನ್ನಡ ಸೀಸನ್ 4 ರ ವಿಜೇತ ಪ್ರಥಮ್ ಈ ಸೀಸನ್ ನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಮುಂದೊಂದು ದಿನ 'ಬ್ರಾಂಡ್' ಆಗುವ ಆಸೆಯೊಂದಿಗೆ ಪ್ರಥಮ್ ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ. ಸೋಶಿಯಲ್ ಮೀಡೀಯಾದಲ್ಲಿ ಸಖತ್ ಜನಪ್ರಿಯರಾಗಿರುವ ಇವರು ಸದ್ಯ ನಟ ಭಯಂಕರ ಚಿತ್ರದ ಬಿಡುಗಡೆಯಾಗಿದ್ದು, ಅದರ ಸಂಭ್ರಮದಲ್ಲಿದ್ದಾರೆ. 

59

ಬಿಗ್ ಬಾಸ್ ಸೀಸನ್ 5 : ಚಂದನ್ ಶೆಟ್ಟಿ (Chandan Shetty)
ಚಂದನ್ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 5 ಅನ್ನು ಗೆದ್ದಿದ್ದಾರೆ. ಚಂದನ್ ಶೆಟ್ಟಿ ತಮ್ಮ ರ್ಯಾಪ್ ಹಾಡುಗಾರರು ಮಾತ್ರವಲ್ಲದೆ, ಕನ್ನಡ ಚಲನಚಿತ್ರೋದ್ಯಮದಲ್ಲಿ ನಡೆಯುತ್ತಿರುವ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಇವರು ಕೂಡ ಕೆಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಹ ಸ್ಪರ್ಧಿ ನಿವೇದಿತಾ ಗೌಡರನ್ನು ವರಿಸಿದ್ದಾರೆ.

69

ಬಿಗ್ ಬಾಸ್ ಸೀಸನ್ 6 : ಶಶಿ ಕುಮಾರ್ (Shashi Kumar)
ರಿಯಾಲಿಟಿ ಶೋನ ಸೀಸನ್ 6 ರಲ್ಲಿ ಶ್ರೀ ಸಾಮಾನ್ಯನಾಗಿ ಪ್ರವೇಶಿಸಿದ ಶಶಿ ಕುಮಾರ್ ವಿಜೇತರಾಗಿ ಹೊರಹೊಮ್ಮಿದರು. ಇವರು ಕೂಡ ಕನ್ನಡ ಚಿತ್ರಗಳಲ್ಲಿ ನಟಿಸುವ ಬಯಕೆಯೊಂದಿಗೆ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟಿದ್ದು, ಮೊದಲ ಚಿತ್ರದ ಬಿಡುಗಡೆಗೆ ಕಾತುರರಾಗಿದ್ದಾರೆ. ಸಿನಿಮಾ ಕೈ ಹಿಡಿಯುತ್ತಾ ನೋಡಬೇಕು.

79

ಬಿಗ್ ಬಾಸ್ ಸೀಸನ್ 7 : ಶೈನ್ ಶೆಟ್ಟಿ (Shine Shetty)
ಬಿಗ್ ಬಾಸ್ ಕನ್ನಡ ಸೀಸನ್ 7 ರ ವಿನ್ನರ್ ಪಟ್ಟವನ್ನು ಪಡೆದ ನಂತರ, ಶೈನ್ ಶೆಟ್ಟಿ ರಿಯಾಲಿಟಿ ಶೋನಲ್ಲಿ ತಮ್ಮ ಗುಣದಿಂದಾಗಿ ಮತ್ತಷ್ಟು ಜನಪ್ರಿಯರಾದರು. ಅವರು ಇತ್ತೀಚೆಗೆ ತಮ್ಮ ಚಿತ್ರ 'ಕಾಲೇ ನಮಃ' ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದಲ್ಲದೆ, ಶೈನ್ ತನ್ನ ಫೂಡ್ ಟ್ರಕ್ ಬ್ಯುಸಿನೆಸ್‌ನಲ್ಲೂ ಸಹ ಬ್ಯುಸಿಯಾಗಿದ್ದಾರೆ. ತಮ್ಮ ಸಹ ಸ್ಪರ್ಧಿ ದೀಪಿಕಾ ದಾಸ್ ಜೊತೆ ಡೇಟಿಂಗ್ ಮಾಡುತ್ತಿರುವು ಸುದ್ದಿಯೂ ಇದೆ.

89

ಬಿಗ್ ಬಾಸ್ ಸೀಸನ್ 8 : ಮಂಜು ಪಾವಗಡ ( Manju Pavagada)
ಬಿಗ್ ಬಾಸ್ ಕನ್ನಡ ಸೀಸನ್ 8 ರ ವಿಜೇತರು ಕಿರುತೆರೆಯಲ್ಲಿ ಜನಪ್ರಿಯ ಹಾಸ್ಯ ನಟ ಕೂಡ ಹೌದು. ಇದಲ್ಲದೆ, ಮಂಜು ಪಾವಗಡ ಕೆಲವು ಕನ್ನಡ ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ, ಅಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಸದ್ಯ ನಟ ಚಲನಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

99

ಬಿಗ್ ಬಾಸ್ ಸೀಸನ್ 9 : ರೂಪೇಶ್ ಶೆಟ್ಟಿ (Roopesh Shetty)
'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ವಿನ್ನರ್ ಪಟ್ಟವನ್ನು ರೂಪೇಶ್ ತಮ್ಮದಾಗಿಸಿಕೊಂಡಿದ್ದಾರೆ. ಬಹು ಪ್ರತಿಭಾನ್ವಿತ ಕಲಾವಿದ ಕನ್ನಡ ಮನರಂಜನಾ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಲು ಎದುರು ನೋಡುತ್ತಿದ್ದಾರೆ. ಅದಕ್ಕೂ ಮುನ್ನ ಅವರು ಮಂಗಳೂರಿನಲ್ಲಿ ಆರ್ ಜೆ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಜೊತೆಗೆ ತುಳು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. 

Read more Photos on
click me!

Recommended Stories