ಅಮೃತಧಾರೆ ಸೀರಿಯಲ್‌ ಶಾಕುಂತಲ ರೀಲ್ ಮಕ್ಳನ್ನ ನೋಡಿದ್ರಿ ಅಲ್ವಾ? ರಿಯಲ್ ಮಗ ಯಾರ್ ಗೊತ್ತಾ?

First Published | May 27, 2024, 5:40 PM IST

ಅಮೃತಧಾರೆ ಸೀರಿಯಲ್ ನಲ್ಲಿ ಖಡಕ್ ವಿಲ್ಲನ್ ಶಾಕುಂತಲಾ ಪಾತ್ರದಲ್ಲಿ ನಟಿಸುತ್ತಿರುವ ವನಿತಾ ವಾಸು ಅವರ ರಿಯಲ್ ಲೈಫ್ ಮಗ ಇವರೇ ನೋಡಿ. 
 

ಕನ್ನಡ ಚಿತ್ರರಂಗದಲ್ಲಿ 80ರ ದಶಕದಲ್ಲಿ ಮಿಂಚಿದ ಗ್ಲಾಮರಸ್ ನಟಿ ಅಂದ್ರೆ ಅದು ವನಿತಾ ವಾಸು (Vanitha Vasu). ಇವರು ಆ ಕಾಲದ ಕನಸಿನ ಕನ್ಯೆ ಆಗಿದ್ದರು ಅಂದ್ರೆ ತಪ್ಪಲ್ಲ. ಇಂದಿಗೂ ಸಹ ವನಿತಾ ವಾಸು ತಮ್ಮ ಅದ್ಭುತ ನಟನೆ, ಮತ್ತು ಗ್ಲಾಮರ್ ಮೂಲಕ ಮಿಂಚುತ್ತಿದ್ದಾರೆ. 
 

ಝೀಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಅಮೃತಧಾರೆ ಸೀರಿಯಲ್ ನಲ್ಲಿ ಸದಾ ಪ್ಲ್ಯಾನ್ ಮಾಡಿ ಮಟ್ಟ ಹಾಕಲು ಪ್ರಯತ್ನಿಸುತ್ತಿರುವ ಶಕುಂತಲಾ (Shakuntala) ಪಾತ್ರದಲ್ಲಿ ಸದ್ಯ ವನಿತಾ ವಾಸು ಮಿಂಚುತ್ತಿದ್ದಾರೆ. ಈ ಸೀರಿಯಲ್ ನಲ್ಲಿ ಇವರು ಗೌತಮ್ ದಿವಾನ್ ಅವರ ಮಲತಾಯಿ, ಜೊತೆಗೆ ಮಹಿಮಾ, ಅಶ್ವಿನಿ, ಪಾರ್ಥ ಮತ್ತು ಜೈ ದೇವ್ ಅನ್ನೋ ಮತ್ತೊಬ್ಬ ವಿಲನ್ ಗೂ ತಾಯಿ ಇವರು. 
 

Tap to resize

ರೀಲ್ ನಲ್ಲಿ ಇವರ ಮಕ್ಕಳನ್ನು ನೀವು ನೋಡಿಯೇ ಇರುತ್ತೀರಿ, ಆದರೆ ಇವರ ರಿಯಲ್ ಲೈಫ್ ಫ್ಯಾಮಿಲಿ ಮತ್ತು ಮಕ್ಕಳ ಬಗ್ಗೆ ಗೊತ್ತಿದ್ಯಾ? ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ವನಿತಾ ವಾಸು ಅಲ್ಲಿ ಹೆಚ್ಚಾಗಿ ತಮ್ಮ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 
 

ವನಿತಾ ವಾಸು ಅವರಿಗೆ ಒಬ್ಬ ಮಗ ಇದ್ದಾನೆ, ಇತ್ತೀಚೆಗೆ ನಟಿ ತಮ್ಮ ಮಗನೊಂದಿಗೆ ಇರುವ ಫೋಟೋ ವೈರಲ್ ಆಗಿತ್ತು. ಆದರೆ ವನಿತಾ ವಾಸು ತಮ್ಮ ಮಗನ ಜೊತೆಗಿರುವ ಹೆಚ್ಚಿನ ಫೋಟೋಗಳನ್ನು ಕಾಣಬಹುದು. ಅಂದ ಹಾಗೆ ವನಿತಾ ವಾಸು ಅವರ ಏಕೈಕ ಪುತ್ರನ ಹೆಸರು ಕಶೀಸ್ ನಿಸಾಲ್ (Kashish Nisal). 
 

ವನಿತಾ ವಾಸು ಅವರ ಗಂಡನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಇವರ ಪತಿಯ ಹೆಸರು ಸುಂದರ್ ಎಂದು ಹೇಳಲಾಗುತ್ತದೆ. ನಟಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹೆಚ್ಚಾಗಿ ಮಗನ ಫೋಟೋಗಳನ್ನು ಶೇರ್ ಮಾಡುತ್ತಾ, ತಮ್ಮ ಶಕ್ತಿಯೂ ಅವನೇ, ನನ್ನ ವೀಕ್ ನೆಸ್ ಕೂಡ ಅವನೇ ಎಂದು ಹೇಳುತ್ತಿರುತ್ತಾರೆ. 
 

ತಮ್ಮ ಮಗನ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡುವ, ಮಗನ ಜೊತೆ ಶಾಪಿಂಗ್, ಟೂರ್ ಮಾಡುವ ಫ್ರೆಂಡ್ಲಿ ಅಮ್ಮ ಮತ್ತು ಮಗನ ಜೋಡಿ ಇವರದ್ದು, ಹೆಚ್ಚಾಗಿ ಇವರು ತಮ್ಮ ಮಗ, ಅಕ್ಕ, ಅಮ್ಮ, ಅಕ್ಕನ ಮಗನ ಜೊತೆ ಟ್ರಾವೆಲ್ ಮಾಡುತ್ತಾ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. 
 

ಸದ್ಯ ಕಿರುತೆರೆ ಸೀರಿಯಲ್ ಗಳಲ್ಲಿ (Serial) ಮಿಂಚುತ್ತಿರುವ ನಟಿ ವನಿತಾ ವಾಸು ಅವರ ಮಗ ಕಶೀಶ್ ಅವರು ಅಮ್ಮನಂತೆ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿಲ್ಲ, ಇವರು ನಟನೆಯಿಂದ , ಮೀಡಿಯಾದಿಂದ ತುಂಬಾನೆ ದೂರ ಉಳಿದುಕೊಂಡಿದ್ದಾರೆ. ಅಮ್ಮನ ಫೋಟೋ ಕಾಪಿಯಂತಿದ್ದಾರೆ ಕಶೀಶ್.
 

Latest Videos

click me!