ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ನಲ್ಲಿ ಕೊನೆಗೂ ವೈಷ್ಣವ್ ಮತ್ತು ಕೀರ್ತಿ ಪ್ರೀತಿಯ ಸತ್ಯ ಲಕ್ಷ್ಮೀ ಮುಂದೆ ಬಯಲಾಗೋ ಸಮಯ ಬಂದಿದೆ. ಆದರೆ ಜನ ಮಾತ್ರ ಪ್ಲೀಸ್ ಇನ್ನು ಜಾಸ್ತಿ ಎಳಿಬೇಡಿ, ಈ ಸೀನ್ ತುಂಬಾ ಸಲ ರಿಪೀಟ್ ಆಗೋಗಿದೆ, ಇನ್ನು ಎಳೆದು ಬೋರ್ ಹೊಡೆಸಬೇಡಿ ಅಂತಿದ್ದಾರೆ.
ಕೀರ್ತಿಯ ಹುಚ್ಚು ಪ್ರೀತಿಯನ್ನು ನೋಡಿದ ವೈಷ್ಣವ್, ಅವರಿಬ್ಬರ ಹಳೆಯ ಮಧುರ ನೆನಪಿನ ಕೆಲವು ವಸ್ತುಗಳನ್ನು ಹಿಡಿದುಕೊಂಡು ಕೀರ್ತಿ ಮನೆಗೆ ಬಂದು, ನನ್ನನ್ನು ಇಷ್ಟೊಂದು ಇಷ್ಟಪಡುವ ನೀನು ಮದುವೆಯಾಗೋದಕ್ಕೆ ಯಾಕೆ ಒಪ್ಪಿಗೆ ಕೊಡಲಿಲ್ಲ, ಯಾಕೆ ಹೀಗೆಲ್ಲಾ ಮಾಡಿದೆ ಎಂದು ಪ್ರಶ್ನಿಸುತ್ತಾನೆ, ಕೀರ್ತಿ ಮಾತ್ರ ವೈಷ್ಣವ್ ತಂದಿರುವ ವಸ್ತುಗಳನ್ನೆಲ್ಲಾ ನೋಡಿ ವೈಷ್ ಇವತ್ತಿಗೂ ನನ್ನನ್ನಷ್ಟೇ ಲವ್ ಮಾಡ್ತಿದ್ದಾನೆ ಅನ್ನೋದನ್ನೆ ನೆನೆದು ಭಾರಿ ಖುಷಿ ಪಡ್ತಾಳೆ.
ಇನ್ನೊಂದೆಡೆ ಲಕ್ಷ್ಮೀ ಕೈಗೆ ಕೀರ್ತಿ ಮತ್ತು ವೈಷ್ಣವ್ ಇಂಟಿಮೆಟ್ ಫೋಟೋ ಸಿಗುತ್ತದೆ. ಆಗ ಆಕೆಗೆ ಹಾಗಿದ್ರೆ ವೈಷ್ಣವ್ ಹಳೆ ಹುಡುಗಿ, ಹಳೆ ಪ್ರೀತಿ ಕೀರ್ತಿ (ex love), ವೈಷ್ಣವ್ ನನ್ನವರಲ್ಲ ಅನ್ನೋದು ಅರಿವಾಗುತ್ತದೆ, ಜೊತೆಗೆ ಈ ಹಿಂದೆ ಎಲ್ಲರೂ ಕೀರ್ತಿ ಮತ್ತು ವೈಷ್ಣವ್ ಲವ್ ಬಗ್ಗೆ ಹೇಳಿದ್ದು, ಅದನ್ನು ತಾನು ಕಡೆಗಣಿಸಿ, ವೈಷ್ಣವ್ ಹೇಳಿರೋದನ್ನು ನಂಬಿದ್ದು ನೆನೆದು ಕಣ್ಣಿರಿಡುತ್ತಾಳೆ ಲಕ್ಷ್ಮೀ.
ಇದೆಲ್ಲಾ ನೋಡಿ ನೋಡಿ ವೀಕ್ಷಕರು ಮಾತ್ರ ರೋಸಿ ಹೋಗಿದ್ದಾರೆ, ಯಾಕಂದ್ರೆ ಈ ಹಿಂದೆ ಸಹ ಹಲವಾರು ಸಲ ಲಕ್ಷ್ಮೀ ಮುಂದೆ ಕೀರ್ತಿ ಮತ್ತು ವೈಷ್ಣವ್ ಲವರ್ಸ್ ಅನ್ನೋದು ಸಾಬೀತಾಗಿದೆ, ಆದರೆ ಎಲ್ಲಾ ಸಲವು ಆಕೆ ತನ್ನ ಅತ್ತೆ, ತನ್ನ ಗಂಡ ಹೇಳಿದ್ದನ್ನೇ ನಂಬಿ ಗಂಡ ಸುಳ್ಳು ಹೇಳೋಕೆ ಸಾಧ್ಯನೆ ಇಲ್ಲ ಎನ್ನುವ ಹುಚ್ಚು ನಂಬಿಕೆಯಲ್ಲೇ ಕಾಲ ಕಳೆದಿದ್ದಾಳೆ. ಈ ಬಾರಿ ಅದೇ ರೀತಿಯಾಗಿ, ಮತ್ತೆ ಕಥೆಯನ್ನು ಎಳೆದುಕೊಂಡು ಹೋಗಬೇಡಿ, ನಮಗೂ ನೋಡಿ ನೋಡಿ ಸಾಕಾಗಿದೆ ಎಂತಿದ್ದಾರೆ ವೀಕ್ಷಕರು.
ಒಬ್ರು ಕಾಮೆಂಟ್ ಮಾಡಿ, ಈ ಲಕ್ಷ್ಮಿ ಶತದಡ್ಡಿ ಪೆದ್ದಿ ಎಲ್ಲಾ ಹೌದು. ಆದ್ರೆ ಅವಳು ಕೀರ್ತಿ ಮತ್ತು ಕಾವೇರಿ ತರ ಸ್ವಾರ್ಥಿ ಅಲ್ಲ. ಕೆಲವರ ತಲೆಯಲ್ಲಿ ಮೆದುಳು ಇದ್ಯೋ ಇಲ್ವೋ ಗೊತ್ತಾಗಲ್ಲ. ಕೀರ್ತಿ ಲಕ್ಷ್ಮಿ ಬದುಕಿನ ಸಮಾಧಿಯ ಮೇಲೆ ತನ್ನ ಪ್ರೀತಿಯನ್ನು ಉಳಿಸೋ ಪ್ರಯತ್ನ ಪಟ್ಟಳು. ಆದ್ರೂ ಅವಳು ಕೆಲವರಿಗೆ ದೇವತೆ. ಇಲ್ಲಿ ವಿಷಯ ಇಷ್ಟೇ ಕಾವೇರಿ ತನ್ನ ಮಗನನ್ನು ಉಳಿಸಲು ಕೀರ್ತಿಯನ್ನು ಉಪಯೋಗಿಸಿದ್ಲು. ಅದೆ ತರ ಕೀರ್ತಿ ತನ್ನ ವೈಷ್ಣವ್ ನನ್ನ ಉಳಿಸಲು ಲಕ್ಷ್ಮಿಯನ್ನು ಉಪಯೋಗಿಸಿದಳು... ಇಲ್ಲಿ ನಿಜವಾಗಿಯೂ ತಪ್ಪೇ ಮಾಡದೇ ನೋವುಪಡ್ತಾ ಇರೋದು ಲಕ್ಷ್ಮಿ ವೈಷ್ಣವ್ ಮಾತ್ರ ಇದೆ ಕಹಿ ಸತ್ಯ ಎಂದಿದ್ದಾರೆ.
ಇನ್ನೊಬ್ರು ಥೂ ಏನಪ್ಪಾ ಈ ವೈಷ್ಣವದ್ದು ಹರಿಕಥೆ, ಕೀರ್ತಿ ಬಿದ್ದಾಗ ಹೋಗಿ ಸಮಾಧಾನ ಮಾಡುತ್ತಾನೆ. ಇಲ್ಲಿ ಬಂದು ಅವಳಿಗೆ ಬೈತಾನೆ. ಈ ಸೀರಿಯಲ್ನಲ್ಲಿ ಕೀರ್ತಿಯದ್ದು ಏನು ತಪ್ಪಿಲ್ಲ ಎಲ್ಲಾ ವೈಷ್ಣವದ್ದು ತಪ್ಪು. ಕಥೆ ಇದೇ ರೀತಿ ಮುಂದುವರೆದುಕೊಂಡು ಹೋದ್ರೆ ಮತ್ತೆ ನೋಡುವವರು ಹುಚ್ಚರು ಆಗುತ್ತಿದ್ದಾರೆ ಎಂದಿದ್ದಾರೆ. ಈ ಸೀರಿಯಲ್ ಮುಗಿಯೋ ಅಷ್ಟರಲ್ಲಿ ಗ್ಯಾರಂಟಿ ಒಬ್ಬರಿಗಾದರೂ ತಲೆ ಕೆಡುವುದು ಪಕ್ಕ ಎಂದಿದ್ದಾರೆ.
ಇನ್ನೊಬ್ಬರು ಕೀರ್ತಿ ಮತ್ತು ವೈಷ್ಣವ್ ಇಬ್ಬರನ್ನು ಒಂದಾಗ್ತಾರೆ ಅನಿಸುತ್ತೆ. ಒಂದಾಗ್ಲೇ ಬೇಕು. ಸುಳ್ಳು ಮದುವೆ ಮುರಿಯಲೇ ಬೇಕು, ಲಕ್ಷ್ಮೀ ನೀನು ನಿಮ್ಮನೆಗೆ ಹೋಗು, ವೈಷ್ಣವ್ ಕೀರ್ತಿ ಜೊತೆ ಚೆನ್ನಾಗಿರಲಿ ಎಂದಿದ್ದರೆ, ಮತ್ತೊಬ್ರು ಕೂಡ ಕೀರ್ತಿ ಮತ್ತು ವೈಷ್ಣವ್ ಒಂದಾಗಿ, ಎಲ್ಲಾ ನಿಜಾ ಗೊತ್ತಾಗಬೇಕು, ಆವಾಗ್ಲೇ ಕಥೆ ಚೆನ್ನಾಗಿರೋದು ಅಂದಿದ್ದಾರೆ.