ಕನ್ನಡತಿ ಧಾರವಾಹಿಯಲ್ಲಿ (Kannadathi Serial) ಮುಗಿದು ಹೋದ್ರೂ ಅದರಲ್ಲಿ ಈ ಮೊದಲು ನಟಿಸಿದ ಸಾನ್ಯಾ ಪಾತ್ರದಾರಿ ರಮೋಲ ಈಗಲೂ ಸಹ ಕನ್ನಡತಿಯ ಸಾನ್ಯಾ ಆಗಿಯೇ ಗುರುತಿಸಿಕೊಂಡಿದ್ದಾರೆ. ಅದ್ರಿಂದನೇ ತಿಳಿಯುತ್ತೆ, ಈ ನಟಿ ತಮ್ಮ ನಟನೆಯಿಂದ ಜನರ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆ ಅನ್ನೋದು.
ರಿಲಯನ್ಸ್ ಜ್ಯುವೆಲ್ಸ್ ಮಿಸ್ ಇಂಡಿಯಾದಲ್ಲಿ ಫಸ್ಟ್ ರನ್ನರ್ ಅಪ್ ಆಗಿರುವ ಈಕೆ (Ramola) ಬ್ಯೂಟಿಫುಲ್ ನಟಿ, ಕನ್ನಡತಿ ಬಳಿಕ ಬೇರೆಲ್ಲೋ ಕಾಣಿಸಿಕೊಂಡಿಲ್ಲ, ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದು ಬಿಟ್ರೆ, ಇವರು ಬೇರೆ ಯಾವುದೇ ಸೀರಿಯಲ್ ಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ರು.
ಕನ್ನಡತಿ ಧಾರವಾಹಿಯಲ್ಲಿ ಖಡಕ್ ವಿಲನ್ ರಮೋಲಾ ಸೋಷಿಯಲ್ ಮೀಡಿಯಾದಲ್ಲಿ (Social Media) ಫುಲ್ ಆಕ್ಟಿವ್. ಇವರು ನಿರಂತರವಾಗಿ ಫೋಟೊ, ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಯುಗಾದಿ ದಿನ ಮತ್ತು ನಂತರ ಶೇರ್ ಮಾಡಿದ ಸೀರೆಯ ಫೋಟೋ ಸಖತ್ ವೈರಲ್ ಆಗಿದೆ.
ರಮೋಲಾ ಮಾಡರ್ನ್ ಆಗಿ ಕಾಣಿಸಿಕೊಳ್ಳುವುದೇ ಹೆಚ್ಚು. ಆದರೆ ಈ ಬಾರಿ ಯುಗಾದಿ ಪ್ರಯುಕ್ತ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದು, ರಮೋಲ ಸಖತ್ ಮುದ್ದಾಗಿ ಕಾಣಿಸುತ್ತಿದ್ದಾರೆ. ಹಸಿರು ಬಣ್ಣದ ಪ್ಲೋರಲ್ ಪ್ರಿಂಟ್ ಕಾಟನ್ ಸೀರೆ ಜೊತೆಗೆ ಗುಲಾಬಿ ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದು, ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ.
ರಮೋಲ ಸೀರೆ ಫೋಟೋ ಗಳ ಸರಣಿ (Photo series) ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಸೀರೆಯಲ್ಲಿ ನಿಮ್ಮ ಸೌಂದರ್ಯ ಡಬ್ಬಲ್ ಆಗಿದೆ . ಸೀರೆಲಿ ನಿಮ್ಮನ್ನ ನೋಡಿ ಹಬ್ಬಕ್ಕೆ ಮಹಾಲಕ್ಷ್ಮಿಯನ್ನು ನೋಡಿದ ಹಾಗಾಗಿದೆ ಎಂದು ಕೆಲವರು ಕಮೇಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಸಾವಿರ ಕಲಾವಿದರು, ಸಾವಿರ ವರ್ಷ ಚಿತ್ರ ಬಿಡಿಸಿದ್ರೂ, ನಿಮ್ಮಂತಹ ಸುಂದರ ಚಿತ್ರವನ್ನು ಬಿಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರೆ, ಮತ್ತೊಬ್ಬರು ಮತ್ತೊಮ್ಮೆ ಹರೆಯದ ಹುಡುಗರ ಹೃದಯದ ಮೇಲೆ ಬಾಂಬ್ ಬೀಳೋ ಸಾದ್ಯತೆ ಇದೆ...ಹುಷಾರ್. ಎಂದು ಬರೆದುಕೊಂಡಿದ್ದಾರೆ.