ತ್ರಿಪುರ ಸುಂದರಿ ಸೀರಿಯಲ್ ನಲ್ಲಿ ಕಾಣಿಸಿಕೊಂಡ ಕನ್ನಡತಿ ಹರ್ಷ, ರಾಶಿ

Published : May 16, 2023, 05:35 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ತ್ರಿಪುರ ಸುಂದರಿ ಸೀರಿಯಲ್ ಹೊಸ ಹೊಸ ಟ್ವಿಸ್ಟ್ ನೊಂದಿಗೆ ಪ್ರಸಾರವಾಗುತ್ತಿದೆ. ಇದೀಗ ಸೀರಿಯಲ್ ನಲ್ಲಿ ಕನ್ನಡತಿಯ ಹರ್ಷ ಮತ್ತು ಮಿಥುನ ರಾಶಿಯ ರಾಶಿ ಕಾಣಿಸಿಕೊಂಡಿದ್ದಾರೆ. 

PREV
18
ತ್ರಿಪುರ ಸುಂದರಿ ಸೀರಿಯಲ್ ನಲ್ಲಿ ಕಾಣಿಸಿಕೊಂಡ ಕನ್ನಡತಿ ಹರ್ಷ, ರಾಶಿ

ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ ಪ್ರಸಾರವಾಗುತ್ತಿರುವ ವಿಭಿನ್ನ ಕಥಾ ಹಂದರದ ಧಾರಾವಾಹಿ ತ್ರಿಪುರ ಸುಂದರಿ ಭೂಲೋಕಕ್ಕೆ ಗಂಧರ್ವ ರಾಜಕುಮಾರನನ್ನು ಹುಡುಕಿಕೊಂಡು ಬಂದ ತ್ರಿಪುರ ಸುಂದರಿಯ ಕತೆ.

28

ಭೂಲೋಕಕ್ಕೆ ರಾಜಕುಮಾರನನ್ನು ಹುಡುಕಿಕೊಂಡು ಬಂದ ಆಮ್ರಪಾಲಿ ಬಳಿ ಇದ್ದ, ರಾಜಕುಮಾರನನ್ನು ತಲುಪಬಹುದಾದ ಏಕೈಕ ದಾರಿಯಾಗಿದ್ದ ಪದಕ ಮಿಸ್ ಆಗುತ್ತದೆ. ಇದೀಗ ಹತ್ತಿರವೇ ಇದ್ದರೂ ರಾಜಕುಮಾರನನ್ನು ಹುಡುಕಲು ಆಮ್ರಪಾಲಿ ಪರದಾಡುತ್ತಿದ್ದಾಳೆ. 

38

ಇಷ್ಟೇಲ್ಲಾ ಟ್ವಿಸ್ಟ್ ಇರೋ ತ್ರಿಪುರ ಸುಂದರಿ ಧಾರಾವಾಹಿಗೆ ಕನ್ನಡತಿ ಧಾರಾವಾಹಿಯ ಹರ್ಷನ (Harsha of Kannadathi) ಎಂಟ್ರಿ ಆಗಿದೆ. ಇದ್ದಕ್ಕಿಂದ ಹಾಗೇ ಧಾರಾವಾಹಿಗೆ ಹರ್ಷ ಯಾಕೆ ಬಂದಿದ್ದಾರೆ ಎಂದು ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ.

48

ಕನ್ನಡತಿ ಸೀರಿಯಲ್ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. ಈ ಸೀರಿಯಲ್ ನ ನಾಯಕ ಹರ್ಷ ಕೂಡ, ತಮ್ಮ ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಇದೀಗ ಅವರನ್ನು ತೆರೆ ಮೇಲೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. 

58

ಹರ್ಷನನ್ನು ನೋಡಿಯೇ ಖುಷಿಯಾದ ಅಭಿಮಾನಿಗಳಿಗೆ ಮತ್ತೊಂದು ಪ್ರೊಮೋ ಮೂಲಕ ತ್ರಿಪುರ ಸುಂದರಿ (Tripura Sundari) ತಂಡ ಮತ್ತೆ ಸಪ್ರೈಸ್ ನೀಡಿತ್ತು. ಅದೇನೆಂದರೆ ಮಿಥುನ ರಾಶಿಯ ಮೂಲಕ ಮನೆಮಗಳಾಗಿ ಜನಪ್ರಿಯತೆ ಪಡೆದ ರಾಶಿ ಒಂದು ವರ್ಷದ ಬಳಿಕ ಮತ್ತೆ ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದಾರೆ. 

68

ಆಟೋ ರಾಣಿ ರಾಶಿ ರಸ್ತೆಯಲ್ಲಿ ತಲೆ ತಿರುಗಿ ಬಿದ್ದ ಆಮ್ರಪಾಲಿಯನ್ನು ರಕ್ಷಿಸಿ, ಆಕೆಗೆ ನೀರು ಕೊಟ್ಟು, ಮಾತನಾಡಿಸುತ್ತಾಳೆ. ಆಮ್ರಪಾಲಿ ತಾನು ರಾಜಕುಮಾರನನ್ನು ಹುಡುಕುತ್ತಿರುವುದಾಗಿ, ಜೊತೆಗೆ ಮಾಯಾನದಿಯನ್ನು ಹುಡುಕುತ್ತಾ ಹೊರಟಿರುವುದಾಗಿ ತಿಳಿಸಿದ್ದಾಳೆ. 

78

ಆಮ್ರಪಾಲಿಯನ್ನು ತನ್ನ ಆಟೊದಲ್ಲಿ ಕುಳಿತುಕೊಳ್ಳುವಂತೆ ಹೇಳಿ, ತಾನು ಆಮ್ರಪಾಲಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುವುದಾಗಿ, ಯಾವುದೇ ಹಣದ ಅವಶ್ಯಕತೆ ಇಲ್ಲ ಎಂದು ರಾಶಿ ಹೇಳಿ, ಮಾಯಾನದಿ ಹುಡುಕಲು ಆಮ್ರಪಾಲಿ ಜೊತೆ ಹೊರಟಿದ್ದಾಳೆ. 

88

ತ್ರಿಪುರ ಸುಂದರಿ ಸೀರಿಯಲ್‌ನಲ್ಲಿ ಜೊತೆ ಜೊತೆಗೆ ಡಬಲ್ ಧಮಾಕವಾಗಿ ರಾಶಿ ಮತ್ತು ಹರ್ಷನನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಲ್ಲದೇ ಇಬ್ಬರೂ ಈ ಸೀರಿಯಲ್‌ನಲ್ಲಿ ಎಷ್ಟು ಸಮಯ ಇರಬಹುದು, ಯಾವ ರೀತಿ ಆಮ್ರಪಾಲಿ ಮತ್ತು ಪ್ರದ್ಯುಮ್ನನಿಗೆ ಸಹಾಯ ಮಾಡ್ತಾರೆ ಕಾದು ನೋಡಬೇಕು. 

Read more Photos on
click me!

Recommended Stories