ಗಟ್ಟಿಮೇಳದ ಈ ಚೆಲುವೆ ಡಾಕ್ಟರ್, ಡ್ಯಾನ್ಸರ್, ಮಾಡೆಲ್, ನಟಿ ಎಲ್ಲವೂ ಹೌದು…

First Published | May 16, 2023, 3:47 PM IST

ಕನ್ನಡ ಕಿರುತೆರೆಯಲ್ಲಿ ‘ಗಟ್ಟಿಮೇಳ’ ಸೀರಿಯಲ್ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದೆ. ಅದರಲ್ಲಿರುವ ನಟ- ನಟಿಯರು ಸಹ ಹೆಚ್ಚಿನ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಈ ಸೀರಿಯಲ್ ನಲ್ಲಿ ಸದ್ಯ ಆರತಿ ಪಾತ್ರ ಮಾಡುತ್ತಿರುವ ಆರತಿ ಪಡುಬಿದ್ರಿ ರಿಯಲ್ ಲೈಫ್ ಸ್ಟೋರಿ ಕೇಳಿ.

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಸೀರಿಯಲ್ (Gattimela Serial) ತನ್ನ ವಿಭಿನ್ನ ಕಥಾ ಹಂದರದ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸೀರಿಯಲ್ ಅಕ್ಕ ತಂಗಿಯರ ಕಥೆಯಾಗಿದ್ದು, ಎಲ್ಲಾ ಪಾತ್ರಗಳಿಗೂ ತುಂಬಾನೆ ಇಂಪಾರ್ಟೆನ್ಸ್ ನೀಡಲಾಗಿದೆ. 

ಈ ಸೀರಿಯಲ್ ನಲ್ಲಿ ಹಿರಿಯ ಅಕ್ಕ ಆರತಿಯ ಪಾತ್ರ, ಹಲವಾರು ಬಾರಿ ಬದಲಾವಣೆಯಾಗಿದೆ. ಸದ್ಯ ಆರತಿ ಪಾತ್ರದಲ್ಲಿ ನಟಿ ಆರತಿ ಪಡುಬಿದ್ರೆಯವರು (Arathi Padubidri) ನಟಿಸುತ್ತಿದ್ದಾರೆ. ರಿಯಲ್ ಮತ್ತು ರೀಲ್ ಲೈಫ್ ಆರತಿ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ. 

Tap to resize

ನಟನೆ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಬೆಳೆಸಿರುವ ಆರತಿ ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್ ಅಂದ್ರೆ ವೈದ್ಯೆ. ಜೊತೆಗೆ ಮಾಡೆಲಿಂಗ್ ನಲ್ಲೂ ಅವರು ತಮ್ಮನ್ನು ತೊಡಗಿಸಿಕೊಂಡು ನಟನೆಯಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದರು. 

ವೈದ್ಯೆ ಆಗಿದ್ದ ಇವರಿಗೆ ನಟನೆ ಹುಚ್ಚು ಹೇಗೆ ಹಿಡಿತು ಅಂದ್ರೆ, ಮೊದಲಿಗೆ ಇವರು ತಮ್ಮ ವೃತ್ತಿಯಲ್ಲಿ (Physiotherapy) ಮಾತ್ರ ತೊಡಗಿದ್ದರಂತೆ, ಆದರೆ ನಟಿಯಾಗಬೇಕೆಂದು ಕನಸು ಯಾವಾಗಲೂ ಜೊತೆಗಿತ್ತು, ಇದಾದ ಬಳಿ ಮಾಡೆಲಿಂಗ್ ಮಾಡುತ್ತಿರುವಾಗ ನಟಿಯಾಗುವ ಆಸೆ ಮತ್ತಷ್ಟು ಹೆಚ್ಚಿತಂತೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದ ಹೂಮಳೆ ಚಿತ್ರದಲ್ಲಿ ಆರತಿ ನಾಯಕನ ಅಕ್ಕನಾಗಿ ನಟಿಸಿದ್ದರು. ಮೊದಲ ಸೀರಿಯಲ್ ನಲ್ಲಿ ಅದ್ಭುತ ನಟನೆಯ ಮೂಲಕ ಅಭಿಮಾನಿಗಳನ್ನು ಗೆದ್ದಿದ್ದರು. ಜೊತೆಗೆ ಇವರು ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ (Dance reality show) ಭಾಗವಹಿಸಿದ್ದಾರೆ.

ಮಾಡೆಲ್ (Modeling) ಆಗಿದ್ದವರೆಗೆ, ನಟನೆ ಮಾಡೋದು ಕ್ಯಾಮೆರಾ ಎದುರಿಸೋದು ಅಷ್ಟೇನೂ ಕಷ್ಟವಲ್ಲ ಎಂದು ಅಂದುಕೊಂಡಿದ್ದ ಆರತಿಗೆ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದಾಗ ತುಂಬಾ ಕಷ್ಟವಾಗಿತ್ತಂತೆ. ನಂತರ ನಿಧಾನವಾಗಿ ಸರಿಯಾಯ್ತು ಎನ್ನುತ್ತಾರೆ ನಟಿ. 

ಸದ್ಯ ಗಟ್ಟಿಮೇಳದಲ್ಲಿ ಆರತಿಯಾಗಿ ನಟಿಸುತ್ತಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ಟ್ರೆಡಿಶನಲ್ ಮತ್ತು ವೆಸ್ಟರ್ನ್ ಬಟ್ಟೆಯಲ್ಲಿ ಇವರು ಫೋಟೋ ಶೂಟ್ ಮಾಡಿ ಶೇರ್ ಮಾಡುತ್ತಿರುತ್ತಾರೆ, ಜೊತೆಗೆ ಸಹ ನಟರ ಜೊತೆ ರೀಲ್ಸ್ ಮಾಡುತ್ತಾ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. 

Latest Videos

click me!