ಬಿಗ್ ಬಾಸ್ ಕನ್ನಡ : ಬುದ್ಧಿವಂತನಾದರೂ ಪೆದ್ದನಂತೆ ಆಡ್ತಿರೋ ಹನುಮಂತನ ಮೇಲೆ ವೀಕ್ಷಕರ ಆಕ್ರೋಶ!

First Published | Oct 22, 2024, 8:26 PM IST

ಬಿಗ್ ಬಾಸ್ ಸೀಸನ್ 11 ಬರಿ ಗಲಾಟೆಗಳಿಂದಲೇ ಸದ್ದು ಮಾಡುತ್ತಿದ್ದು, ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಆಗಿರುವ ಹನುಮಂತ, ಈ ಗಲಾಟೆಗಳ ಮಧ್ಯೆ ಸಿಲುಕಿ ನಲುಗಿ ಹೋಗಿದ್ದಾರೆ. ವೀಕ್ಷಕರು ಮಾತ್ರ ಈತ ಜಾಣ ಪೆದ್ದನಂತೆ ವರ್ತಿಸ್ತಿದ್ದಾನೆ ಎನ್ನುತ್ತಿದ್ದಾರೆ. 
 

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss 11) ಸದ್ದು ಮಾಡುತ್ತಿರುವುದೇ ಗಲಾಟೆಗಳಿಂದ. ಮಾತು ಕತೆ, ಆಟಗಳಿಗಿಂತ ಹೆಚ್ಚಾಗಿ ಗಲಾಟೆಗಳೆ ದೊಡ್ಮನೆಯಲ್ಲಿ ತುಂಬಿದೆ. ಈಗಾಗಲೇ ಇಬ್ಬರು ಕಂಟೆಸ್ಟಂಟ್ ಗಳಾದ ಜಗದೀಶ್ ಮತ್ತು ರಂಜಿತ್ ಮನೆಯಿಂದ ಹೊರ ಹೋಗಿಯಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಿದೆ. 
 

ಬಿಗ್ ಬಾಸ್ ಸೀಸನ್ 11 ರಲ್ಲಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿದ್ದು, ಸರಿಗಮಪ 15 ಸಿಂಗಿಂಗ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದು, ನಂತರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲೂ ಭಾಗವಹಿಸಿದ್ದ ಹನುಮಂತ ಲಾಮಾಣಿ (Hanumantha), ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು, ಬಂದ ದಿನವೇ ಕ್ಯಾಪ್ಟನ್ ಆಗಿ ಅಧಿಕಾರವನ್ನೂ ಕೂಡ ಪಡೆದುಕೊಂಡಿದ್ದಾರೆ. 
 

Tap to resize

ಒಂದೆಡೆ ಬಂದ ಆರಂಭದಲ್ಲಿ ಉಳಿದ ಸ್ಪರ್ಧಿಗಳ ಮಾತಿನಿಂದ ಕಂಗೆಟ್ಟು ಹೋಗಿದ್ದಾರೆ ಹನುಮಂತ. ಬಿಗ್ ಬಾಸ್ ಸೂಚಿಸಿದಂತೆ ಪ್ರತಿಯೊಬ್ಬ ಸ್ಪರ್ಧಿಗಳಿಗೂ ಅವರ ಸಾಮರ್ಥ್ಯದ ಮೇಲೆ 1 ರಿಂದ 14 ನಂಬರ್ ಕೊಡಬೇಕು ಎಂದಿದ್ದು, ಅದರಂತೆ ಹನುಮಂತ ತನಗೆ ಅನಿಸಿದಂತೆ ನಂಬರ್ ಕೊಟ್ಟಿದ್ದಾರೆ, ಈ ವಿಚಾರಕ್ಕೆ ಕೋಲಾಹಲ ಎದ್ದು, ಗಲಾಟೆ ನಡೆದು ಹನುಮಂತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. 
 

ಇದ್ದೆಲ್ಲದರ ನಡುವೆ ಹನುಮಂತ ಮಾಡುತ್ತಿರುವ ಕೆಲವೊಂದು ವಿಷ್ಯಗಳು ವೀಕ್ಷಕರಲ್ಲಿ ಆಕ್ರೋಶದ ಜೊತೆಗೆ, ಸಂಶಯವನ್ನೂ ಮೂಡಿಸಿದೆ. ಕಳೆದ 5- 6 ವರ್ಷಗಳಿಂದ ನಿರಂತರವಾಗಿ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ ಹನುಮಂತ ನಿಜವಾಗ್ಲೂ ಮುಗ್ದನೋ ಅಥವಾ ಜಾಣ ಪೆದ್ದ ನಂತೆ ನಟಿಸುತ್ತಿದ್ದಾನೋ ಎನ್ನುವ ಸಂಶಯ ಜನರಲ್ಲಿ ಕಾಡುತ್ತಿದೆ. 
 

ಕ್ಯಾಪ್ಟನ್ ರೂಮಿನಲ್ಲಿದ್ದ ಹನುಮಂತನಿಗೆ ಧನರಾಜ್(Dhanraj) ಬಂದು ವೆಸ್ಟರ್ನ್ ಟಾಯ್ಲೆಟ್ ಹೇಗೆ ಬಳಕೆ ಮಾಡೋದು ಗೊತ್ತಾ ಅಂದಿದ್ದಕ್ಕೆ, ಹನುಮಂತ, ಅದ್ರ ಮೇಲೆ ಕಾಲಿಟ್ಟು ಕೂತ್ಕೊಳ್ತೀನಿ ಅಂದಿದ್ದಾನೆ, ಅಷ್ಟೇ ಅಲ್ಲದೇ ನನಗೇನು ಅರ್ಥ ಆಗಲ್ಲ ಅಂತಾನೂ ಹೇಳಿದ್ದಾರೆ. ಇನ್ನೊಂದು ಕಡೆ ಸ್ವಿಮ್ಮಿಂಗ್ ಪೂಲ್ ಹತ್ರ ಬಂದು ಅಲ್ಲೂ ಮುಗ್ಧತನ ತೊರಿಸಿದ್ದಾರೆ. 
 

ಬರ್ಮುಡಾ ಶಾರ್ಟ್ಸ್ ಧರಿಸಿ ಪೂಲ್ ಹತ್ರ ಬರುವ ಹನುಮಂತ, ಮೋಕ್ಷಿತಾ ಮತ್ತು ಗೌತಮಿಗೆ ನೀವಿಬ್ರು ಒಳಗೆ ಹೋಗಿ ನಾನು ಇಲ್ಲಿ ಜಳಕ ಮಾಡ್ಬೇಕು ಅಂದಿದ್ದಾನೆ. ಅದ್ಕೆ ಮೋಕ್ಷಿತಾ, ನೀವು ಮಾಡಿ ನಾವು ನೋಡಲ್ಲ, ನೀರಿಗೆ ಇಳಿದ್ರೆ ಏನೂ ಕಾಣ್ಸಲ್ಲ ಪರ್ವಾಗಿಲ್ಲ ಎಂದಿದ್ದಾರೆ. ಅದಕ್ಕೆ ಹನುಮಂತ ಸೋಪು, ಶಾಂಪೂ ಹಾಕಿ ಸ್ನಾನ ಮಾಡ್ಬೇಕು ಅಂತಾನೆ. 
 

ಇದನ್ನ ಕೇಳಿದ ಮಂಜು ಶಾಕ್ ಆಗಿ, ಇಲ್ಲಿ ಸೋಪು ಶಾಂಪೂ ಹಾಕಿ ಸ್ನಾನ ಮಾಡೋ ಹಾಗಿಲ್ಲ, ಇಲ್ಲಿ ನೀರಲ್ಲಿ ಈಜಿ, ಸ್ವಲ್ಪ ಹೊತ್ತು ಆಡಿ, ಆಮೇಲೆ ಹಾಗೆ ಬಾತ್ ರೂಮ್ ಗೆ ಹೋಗಿ ಸ್ನಾನ ಮಾಡ್ಕೊಂಡು ಬನ್ನಿ ಎಂದಿದ್ದಾರೆ. ಹನುಮಂತ ಈ ರೀತಿಯಾಗಿ ಮಾಡ್ತಿರೋದು ನೋಡಿ ಜನ ಆಕ್ರೋಶಗೊಂಡಿದ್ದಾರೆ. 
 

ಹನುಮಂತ ಕಳೆದ ಐದು ವರ್ಷಗಳಿಂದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಇದೆಲ್ಲಾ ಗೊತ್ತಿಲ್ಲ ಅಂದ್ರೆ, ಅದನ್ನ ನಂಬಬೇಕಾ? ಹನುಮಂತ ಮುಗ್ಧ ಅಲ್ಲ, ಮುಗ್ಧನಂತೆ ವರ್ತಿಸುತ್ತಿದ್ದಾನೆ ಎಂದಿದ್ದಾರೆ. ಹನುಮಂತು ನಿಜವಾಗ್ಲೂ ಮುಗ್ಧನಾ ಎಷ್ಟೊಂದು ರಿಯಾಲಿಟಿ ಶೋ ಅಟೆಂಡ್ ಮಾಡಿದ್ದಾರೆ ಕಾಮನ್ ಸೆನ್ಸ್ ಇರಲ್ವಾ ಅಂತಾನೂ ಕೇಳಿದ್ದಾರೆ. 
 

ಇನ್ನು ಹೆಚ್ಚಿನ ಜನರು ಹನುಮಂತ ಮುಗ್ಧ ಅಂತ ಹೇಳಿದ್ರೆ, ಮತ್ತೆ ಕೆಲವರು ಇಲ್ಲ ಹನುಮಂತ ಸ್ಮಾರ್ಟ್ ಆಗಿ ಆಡ್ತಾ ಇದ್ದಾರೆ ಎಂದಿದ್ದಾರೆ. ಮತ್ತೆ ಕೆಲವರು, ಹನುಮಂತನಿಗೆ ಬಿಗ್ ಬಾಸ್ ಸಹವಾಸ ಬೇಕಿತ್ತಾ? ಅಷ್ಟೊಂದು ಮುಗ್ಧರಿಗೆ ಇದು ಜಾಗ ಅಲ್ಲ ಅಂದಿದ್ದಾರೆ. ಒಟ್ಟಲ್ಲಿ ಹನುಮಂತನ ನಿಜವಾದ ಗುಣ ಹೇಗಿದೆ ನೋಡೋದಕ್ಕೆ ಇನ್ನೊಂದಿಷ್ಟು ದಿನ ಕಾಯಬೇಕು. 
 

Latest Videos

click me!