ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ (Amruthadhare seial) ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾಗಿದೆ. ಕಥೆಯಲ್ಲಿ ಹಲವು ಟ್ವಿಸ್ಟ್ ಗಳು ಬಂದು ವೀಕ್ಷಕರಲ್ಲಿ ಕುತೂಹಲ ಮೂಡಿಸುವಂತಹ ಧಾರಾವಾಹಿ ಇದಾಗಿದ್ದು, ಕಥೆ ಎಲ್ಲೂ ನಿಲ್ಲದೇ ಮುಂದೆ ಸಾಗುತ್ತಲೇ ಇರೋದು ಜನರಿಗೆ ತುಂಬಾನೆ ಇಷ್ಟವಾಗಿದೆ. ಇದೀಗ ಕಥೆಗೆ ಹೊಸ ಪಾತ್ರಧಾರಿಯ ಎಂಟ್ರಿಯಾಗಿದೆ.
ಹೌದು, ಅಪರ್ಣ ರೋಡ್ ಕ್ರಾಸ್ ಮಾಡಿ ಬರುತ್ತಿರೋವಾಗ ಇನ್ನೇನು ಕಾರು ಗುದ್ದಿಕೊಂಡು ಹೋಗುತ್ತೆ, ಅನ್ನುವಷ್ಟರಲ್ಲಿ ಒಬ್ಬಳು ಹೆಂಗಸು ಬಂದು ಅಪರ್ಣಾಳನ್ನು ಆಕ್ಸಿಡೆಂಟ್ ಆಗೋದ್ರಿಂದ ರಕ್ಷಿಸಿ, ಅಪರ್ಣಳಿಗೆ ಉಪಚರಿಸಿ, ಆಕೆಯ ಮನೆಗೂ ಕರೆದುಕೊಂಡು ಹೋಗಿ, ಕಾಫಿನೂ ಮಾಡಿಕೊಟ್ಟಿದ್ದಾಳೆ ಸುಧಾ.
ಅಷ್ಟೇ ಅಲ್ಲ ಇಷ್ಟೆಲ್ಲ ಸಹಾಯ ಮಾಡಿರೋದಕ್ಕೆ ಸಹಾಯ ಅಂತ ಆನಂದ್ ಹಣ ಕೊಡೋದಕ್ಕೆ ಬಂದ್ರೆ ಅದನ್ನೂ ತೆಗೆದುಕೊಳ್ಳದೇ, ನನಗೆ ಬೇಕಾದಷ್ಟು ನಾನು ದುಡಿತಿದ್ದೀನಿ, ಆರಾಮವಾಗಿದ್ದೀನಿ, ಈ ಹಣ ನನಗೆ ಬೇಡ ಅಂತಾಳೆ, ಜೊತೆಗೆ ತಮ್ಮ ಮನೆಯಲ್ಲಿ ಮಗಳು ಮತ್ತು ಅಮ್ಮ ಇಬ್ರೆ ಇರೋದು, ಮನೆಯನ್ನು ನಿಭಾಯಿಸೋದು ನಾನು ಅಂತಾನೂ ಹೇಳಿದ್ದಾಳೆ. ಸದ್ಯ ಆನಂದ್ ಮನೆ ಕೆಲಸಕ್ಕೂ ಸೇರ್ಕೊಂಡಿದ್ದಾಳೆ.
ಸುಧಾ ಒಳ್ಳೆ ಗುಣ, ಮನಸನ್ನು ನೋಡಿ, ಆನಂದ್ ಮತ್ತು ಅಪರ್ಣಾ ಇಬ್ಬರೂ ಕೂಡ ಮೆಚ್ಚಿಕೊಂಡಿದ್ದು, ಇಂತಹ ವ್ಯಕ್ತಿಗಳು ಸಿಗೋದೆ ಕಡಿಮೆ ಎಂದಿದ್ದಾರೆ. ಅಷ್ಟೇ ಅಲ್ಲ ಇವರ ಗೆಳೆಯನ ಫೀಮೇಲ್ ವರ್ಶನ್ ಅಂತ ಆನಂದ್ ಬಿರುದು ಬೇರೆ ಕೊಟ್ಟಿದ್ದಾರೆ. ಹಾಗಾಗಿ ವೀಕ್ಷಕರು ಇದು ಗೌತಮ್ ದಿವಾನ್ ತಂಗಿ ಅಂತ ಖಡಾಖಂಡಿತವಾಗಿ ಹೇಳ್ತಿದ್ದಾರೆ. ಹಾಗಿದ್ರೆ ಇಲ್ಲಿವರೆಗೂ ಗೌತಮ್ ಹುಡುಕುತ್ತಿದ್ದ ಅಮ್ಮ ಮತ್ತು ತಂಗಿ ಇವರೇನಾ ಕಾದು ನೋಡಬೇಕು.
ಅದಕ್ಕೂ ಮುನ್ನ ನಾವು ಸುಧಾ ಪಾತ್ರದಲ್ಲಿ ನಟಿಸುತ್ತಿರೋ ನಟಿ ಬಗ್ಗೆ ಒಂದಷ್ಟು ತಿಳಿಯೋಣ. ಸುಧಾ ಕೆಲವೇ ನಿಮಿಷ ತೆರೆ ಮೇಲೆ ಕಾಣಿಸಿಕೊಂಡರೂ ಸಹ ,ತಮ್ಮ ಪ್ರಭುದ್ಧ ಪಾತ್ರದ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಸುಧಾ ಪಾತ್ರದಲ್ಲಿ ನಟಿಸುತ್ತಿರೋ ನಟಿ ಹೆಸರು ಮೇಘಾ ಶೆಣೈ (Meghaa Shenoy). ಮೇಘಾ ಕಿರುತೆರೆಗೆ ಹೊಸಬರಲ್ಲ, ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ, ವಿಲನ್ ಆಗಿ ಹೀಗೆ ಹಲವು ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ರಕ್ಷಾಬಂಧನ (Rakshabandhana), ಆರತಿಗೊಬ್ಬ ಕೀರ್ತಿಗೊಬ್ಬ, ಬ್ರಾಹ್ಮಿನ್ಸ್ ಕೆಫೆ ಧಾರಾವಾಹಿಗಳಲ್ಲಿ ಇವರು ನಟಿಸಿದ್ದರು.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಂದರಿ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿದ್ದ ಮೇಘಾ ಶೆಣೈ, ನಂತರ ಕಾವೇರಿ, ಜನುಮದ ಜೋಡಿ, ಮಹಾದೇವಿ ಸೀರಿಯಲ್ ಗಳಲ್ಲಿ ನಟಿಸಿದ್ದರು. ಇನ್ನು ರಕ್ಷಾಬಂಧನ ಮತ್ತು ಆರತಿಗೊಬ್ಬ ಕೀರ್ತಿಗೊಬ್ಬ ಸೀರಿಯಲ್ ಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಜೊತೆಗೆ ಸ್ಟಾರ್ ಸುವರ್ಣ (Star Suvarna) ವಾಹಿನಿಯ ಜೀವ ಹೂವಾಗಿದೆ ಧಾರಾವಾಹಿಗಳಲ್ಲೂ ನಟಿಸಿದ್ದರು.
ಇದೀಗ ಇದೇ ಮೊದಲ ಬಾರಿಗೆ ಮೇಘಾ ಶೆಣೈ, ಇಲ್ಲಿವರೆಗೂ ನಟಿಸಿರೋದಕ್ಕಿಂತ ವಿಭಿನ್ನವಾದ ಪಾತ್ರದಲ್ಲಿ ನಟಿಸುತ್ತಿದ್ದು, ಬಡವರ ಮನೆಯ ಮುಗ್ಧ ಮಹಿಳೆಯಾಗಿ, ತನ್ನ ಕುಟುಂಬವನ್ನ ಸಲಹಲು ಕೆಲಸದವಳಾಗಿ ದುಡಿಯುವ ಮಹಿಳೆ ಸುಧಾ ಪಾತ್ರದಲ್ಲಿ ಮೇಘಾ ಕಾಣಿಸಿಕೊಂಡಿದ್ದಾರೆ. ಆದರೆ ಸದ್ಯದಲ್ಲೇ ಟ್ವಿಸ್ಟ್ ಸಿಗಲಿದ್ದು, ಇವರೇ ಗೌತಮ್ ದಿವಾನ್ ಸಾಮ್ರಾಜ್ಯದ ನಿಜವಾದ ಕುಡಿ ಅನ್ನೋದು ರೀವೀಲ್ ಆಗುತ್ತೆ ಅನ್ನೋದು ಎಲ್ಲರ ಅನಿಸಿಕೆ. ಕಾದು ನೋಡೋಣ.