ಕೈ ಮೇಲಿನ ಹಚ್ಚೆ ತೋರಿಸಿ ಅಕುಲ್ ಬಾಲಾಜಿ ಭಾವುಕ ; ಆಂಧ್ರ ಹುಡುಗ ಕನ್ನಡಿಗನಾಗಿದ್ದೇಗೆ?

Published : Aug 05, 2026, 09:21 AM IST

ಕನ್ನಡ ಕಿರುತೆರೆ ನಿರೂಪಕ ಅಕುಲ್ ಬಾಲಾಜಿ, ತಮ್ಮ ಕೈ ಮೇಲಿರುವ  ಎಂಬ ಹಚ್ಚೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜನ್ಮ ಕೊಟ್ಟಿದ್ದು ತಂದೆ-ತಾಯಿ, ಆದರೆ ಬದುಕು ಕೊಟ್ಟಿದ್ದು ಕನ್ನಡ ನಾಡು ಮತ್ತು ಕನ್ನಡಿಗರು ಎಂದು ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ.

PREV
15
ಅಕುಲ್ ಬಾಲಾಜಿ

ಕನ್ನಡ ಕಿರುತೆರೆಯ ಖ್ಯಾತ ನಿರೂಪಕರಲ್ಲಿ ಒಬ್ಬರಾಗಿರುವ ಅಕುಲ್ ಬಾಲಾಜಿ ಸದ್ಯ ಜೀ ಕನ್ನಡ ವಾಹಿನಿಯ ಹಳ್ಳಿ ಪವರ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. Keerthi ENT Clinic ಯುಟ್ಯೂಬ್ ವಾಹಿನಿಗೆ ವಿಶೇಷ ಸಂದರ್ಶನ ನೀಡಿರುವ ಅಕುಲ್ ಬಾಲಾಜಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ತಮ್ಮ ಕೈ ಮೇಲಿರುವ ವಿಶೇಷ ಟ್ಯಾಟೂ ಸಹ ತೋರಿಸಿದ್ದಾರೆ.

25
ಕನ್ನಡ ಹೆಸರಿನ ಹಚ್ಚೆ

ಮೂಲತಃ ಆಂಧ್ರ ಪ್ರದೇಶದವರಾದ ಅಕುಲ್ ಬಾಲಾಜಿ, ಕನ್ನಡ ನೆಲೆದಲ್ಲಿ ಬದುಕು ಕಟ್ಟಿಕೊಂಡಿರುವ ಕಲಾವಿದೆ. ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ಅಕುಲ್ ಬಾಲಾಜಿ ತಮ್ಮ ನಿರೂಪಣೆಯಿಂದಲೇ ಗಮನ ಸೆಳೆದಿರುವ ಬಹುಮುಖ ಪ್ರತಿಭೆ. ತನಗೆಲ್ಲವನ್ನು ನೀಡಿದ್ದು ಕರ್ನಾಟಕ. ಹಾಗಾಗಿ ಕೈ ಮೇಲೆ 'ಕನ್ನಡ' ಎಂದು ಬರೆಸಿಕೊಂಡಿದ್ದೇನೆ ಎಂದು ಅಕುಲ್ ಬಾಲಾಜಿ ಹೇಳಿಕೊಂಡಿದ್ದಾರೆ.

35
ಕನ್ನಡ ತಾಯಿ

ಆಂಧ್ರದಿಂದ ಬಂದಂತಹ ಹುಡುಗನನ್ನು ಬೆಳೆಸಿದ್ದು ಕನ್ನಡಿಗರು. ಅಕುಲ್ ಏನೇ ಸಂಪಾದಾನೆ ಮಾಡಿದ್ರೂ, ಎಷ್ಟೇ ಹೆಸರು ಮಾಡಿದ್ರೂ ಅದೆಲ್ಲವೂ ಕನ್ನಡಿಗರು ನೀಡಿದ ಭಿಕ್ಷೆ. ಏನೂ ಇಲ್ಲದೇ ಬಂದವನ ಸಹಾಯಕ್ಕೆ ಬಂದಿದ್ದು ನಮ್ಮ ಕನ್ನಡ ತಾಯಿ. ನನ್ನನ್ನು ತನ್ನ ಮಡಿಲೊಳಗೆ ತೆಗೆದುಕೊಂಡಿದ್ದರಿಂದಲೇ ನಾನಿಲ್ಲಿದ್ದೇನೆ. ಈ ಕಾರಣಕ್ಕಾಗಿಯೇ ನನಗೆ ಕನ್ನಡ ಅಂದ್ರೆ ಅಷ್ಟು ಪ್ರೀತಿ ಎಂದು ಕೈ ಮೇಲಿರುವ ಟ್ಯಾಟೂ ತೋರಿಸಿದರು.

45
ಬದುಕು ನೀಡಿದ್ದು ಕನ್ನಡ

ಕನ್ನಡಿಗರು ನನಗೆ ವಿಶೇಷವಾದ ಪ್ರೀತಿಯಿದೆ. ಜೀವನದಲ್ಲಿ ಏನು ಇರುತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ ಯಾವಾಗಲೂ ನನ್ನ ಜೊತೆಯಲ್ಲಿ ಕನ್ನಡ ಇರಲಿ ಎಂಬ ಉದ್ದೇಶದಿಂದ ಈ ಹಚ್ಚೆ ಹಾಕಿಸಿಕೊಂಡಿದ್ದೇನೆ. ತುಂಬಾ ಜನರು ಅಮ್ಮಾ ಅಥವಾ ಅಮ್ಮಾ ಎಂದು ಹಾಕಿಸಬಹುದಿತ್ತು ಎಂದು ಹೇಳಿದ್ದರು. ಆದ್ರೆ ನನಗೆ ಜನ್ಮಕೊಟ್ಟಿದ್ದು ಅಪ್ಪ-ಅಮ್ಮ, ಬದುಕು ಕೊಟ್ಟಿದ್ದು ಈ ಕನ್ನಡ ಎಂದು ಅಕುಲ್ ಬಾಲಾಜಿ ಹೇಳಿದರು.

55
ಕನ್ನಡ ಕಲಿತಿದ್ದು ಹೇಗೆ?

ಇದೇ ವೇಳೆ ರೈಟರ್ ನೀಡಿದ ಸ್ಕ್ರಿಪ್ಟ್‌ಗಳಿಂದಲೇ ನಾನು ಮಾತನಾಡುತ್ತಿದ್ದೆ. ಇಂದು ಅವರಿಂದಲೇ ಇಷ್ಟು ಕನ್ನಡ ಮಾತನಾಡುತ್ತಿದ್ದೇನೆ. ಪತ್ನಿ ಜ್ಯೋತಿ ಅವರಿಗೆ ಕನ್ನಡವೇ ಗೊತ್ತಿರಲಿಲ್ಲ. ಇದು ಅವರು ಸಹ ಕನ್ನಡ ಮಾತನಾಡುತ್ತಾರೆ ಎಂದು ಸಂತೋಷ ವ್ಯಕ್ತಪಡಿಸಿದರು. ಅಕುಲ್ ಬಾಲಾಜಿ ಅವರು ಕನ್ನಡ ಬಿಗ್‌ಬಾಸ್ ಸೀಸನ್ 2ರ ವಿನ್ನರ್ ಸಹ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories