ಒಳ್ಳೆಯದು ಮಾಡೋಕೆ ಹೋಗಿ ಕೇಸ್‌ ಹಾಕಿಸಿಕೊಂಡಿದ್ದ ಜೋಡಿ; 3 ವರ್ಷದ ಬಳಿಕ ಲವ್‌ ಮ್ಯಾರೇಜ್‌ ಒಪ್ಪಿದ ಪಾಲಕರು; Hassan Love story

Published : Jan 25, 2026, 03:48 PM IST

tharesh and swathi love story: ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ಹಾಸನ ಮೂಲದ ಜೋಡಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಜನರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಕೆಲಸದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡು, ಕಂಪೆನಿಯಿಂದ ನೋಟೀಸ್‌ ಕೂಡ ಪಡೆದುಕೊಂಡರು.  

PREV
15
ನಿಯಮ ಉಲ್ಲಂಘನೆ ಆಗಿದೆ

ಸೋಶಿಯಲ್‌ ಮೀಡಿಯಾದಲ್ಲಿ, ವಿವಿಧ ರಂಗದಲ್ಲಿರುವ ಉದ್ಯೋಗದ ಬಗ್ಗೆ ತಾರೇಶ್‌ ಅವರು ಮಾಹಿತಿ ಕೊಡುತ್ತಾರೆ. ಹೀಗಾಗಿ ತಾರೇಶ್‌ ಕೆಲಸ ಮಾಡುತ್ತಿದ್ದ ಕಂಪೆನಿಯವರು, ನಮ್ಮ ಕಂಪೆನಿಯಲ್ಲಿದ್ದು, ಬೇರೆ ಕಡೆ ಜಾಬ್‌ ಇದೆ ಅಂತ ಹೇಳಬಾರದು, ಇದು ನಿಯಮದ ವಿರುದ್ಧ” ಎಂದು ಹೇಳಿ ನೋಟಿಸ್‌ ನೀಡಿದ್ದರು.

25
ಕೇಸ್‌ ದಾಖಲಾಗಿತ್ತು

ಕೋಚಿಂಗ್‌ ಕ್ಲಾಸ್‌ಗೆ ಸೇರಿಕೊಂಡಿದ್ದ ತಾರೇಶ್‌ ಅಲ್ಲಿನ ರಿಯಾಲಿಟಿ ಹೇಳಿದ್ದಕ್ಕೆ ಅವರ ವಿರುದ್ಧ ಕೇಸ್‌ ಕೂಡ ದಾಖಲಾಗಿತ್ತು. ತನ್ನಿಂದ ಜಾಬ್‌ ಮಾಹಿತಿ ಸಿಕ್ಕವರಿಗೆ ಜಾಬ್‌ ಸಿಗಲಿ ಎಂದು ಚಾಮುಂಡಿ ಬೆಟ್ಟವನ್ನು ಕೂಡ ಹತ್ತಿದ್ರು, ನೆಲದ ಮೇಲೆ ಕೂಡ ಊಟ ಮಾಡಿದ್ದರು.

35
ದೇವಸ್ಥಾನದಲ್ಲಿ ಮದುವೆ

ಪಿಯುಸಿಯಲ್ಲಿದ್ದಾಗಲೇ ತಾರೇಶ್‌ ಹಾಗೂ ಸ್ವಾತಿ ಪರಿಚಯಸ್ಥರಯ. ಇವರಿಬ್ಬರು ಪ್ರೀತಿ ಮಾಡಿದ್ದರು, ಇವರ ಮದುವೆಗೆ ಸ್ವಾತಿ ಮನೆ ಕಡೆಯಿಂದ ವಿರೋಧ ಇತ್ತು. ಇಷ್ಟಪಟ್ಟವನನ್ನು ಮದುವೆ ಆಗಲೇಬೇಕು ಎಂದು ಸ್ವಾತಿ, ಮನೆಯವರಿಂದ ವಿರೋಧದ ಮಧ್ಯದ ದೇವಸ್ಥಾನದಲ್ಲಿ ಮದುವೆಯಾದರು. ಅಲ್ಲಿಂದ ಇಲ್ಲಿಯವರೆಗೆ ಸ್ವಾತಿ ತವರುಮನೆಯವರು ಮಾತನಾಡುತ್ತಿರಲಿಲ್ಲ.

45
ತವರು ಮನೆಗೆ ಹೋಗಿದ್ದಾರೆ

ಈಗ ಸ್ವಾತಿ ಮನೆಯವರು ಒಪ್ಪಿದ್ದಾರೆ. ಸ್ವಾತಿ ಅವರು ಮೂರು ವರ್ಷದ ಬಳಿಕ ತವರು ಮನೆಗೆ ಹೋಗಿದ್ದಾರೆ. ತಂದೆ-ತಾಯಿಗೆ ಹೊಸ ಬಟ್ಟೆ, ಸ್ವೀಟ್‌ ಎಲ್ಲವನ್ನು ತಗೊಂಡು ಹೋಗಿದ್ದು, ಈ ವಿಡಿಯೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

55
ಏನು ಕೆಲಸ ಮಾಡುತ್ತಿದ್ದಾರೆ?

ಈಗ ತಾರೇಶ್‌ ಓರ್ವ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಅಂದಹಾಗೆ ಇವರು ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇವರದ್ದೇ ಆದ ಬಟ್ಟೆ ಬ್ಯುಸಿನೆಸ್‌ ಕೂಡ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories