ಕಣ್ಣಣಿ, ಮೌನರಾಗ ಸೇರಿದಂತೆ ಮುಂತಾದ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ರಮ್ಯ ಗೌಡ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತುಂಬ ಸರಳವಾಗಿ ಈ ಮದುವೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ರಮ್ಯಾ ಗೌಡ ಅವರು ಮದುವೆ ಬಗ್ಗೆ ಮಾಹಿತಿ ನೀಡಿದ್ದಾರೆ.
'ನನ್ನ ಖುಷಿಗೆ ಕಾರಣನೇ. ಅವನು ನನ್ನೆಲ್ಲಾ ಭಾವನೆಯ ರೂವಾರಿ ಅವನು ಅವನಿಗಾಗಿ ಮೀಸಲಿಟ್ಟಿರುವೆ ನನ್ನೆಲ್ಲಾ ಕನಸುಗಳನ್ನ... ನಿನ್ನ ಆರಾಧಕಿ... finally mr&mrs ramyabhargav' ಎಂದು ರಮ್ಯ ಗೌಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ರಮ್ಯ ಗೌಡ ಅವರು ಭಾರ್ಗವ್ ಅವರನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ. ಭಾರ್ಗವ್ ಯಾರು? ಇದು ಅರೇಂಜ್ ಮ್ಯಾರೇಜ್? ಲವ್ ಮ್ಯಾರೇಜ್ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ರಮ್ಯ ಗೌಡ, ಭಾರ್ಗವ್ ಮದುವೆಯಲ್ಲಿ ಹಲವಾರು ನಟ-ನಟಿಯರು ಭಾಗಿಯಾಗಿದ್ದು, ನಿಮ್ಮ ವೈವಾಹಿಕ ಜೀವನ ಸುಖಕರವಾಗಿರಲಿ, ನೂರು ವರ್ಷ ಚೆನ್ನಾಗಿ ಬಾಳಿ ಎಂದು ಆಶಿರ್ವಾದಿಸಿದ್ದಾರೆ.
ರಮ್ಯ ಗೌಡ 'ಕಣ್ಮಣಿ' ಧಾರಾವಹಿಯಲ್ಲಿ ನಟಿಸಿದ್ದು, ಹೆಸರೇ ಹೇಳುವಂತೆ ಇದು ಎಲ್ಲರ ಪ್ರೀತಿಗೆ ಪಾತ್ರಳಾಗುವ ನಾಯಕಿ ಕೇಂದ್ರಿತ ಧಾರಾವಾಹಿ. ತನಗೆ ಇರೋ ಸಮಸ್ಯೆಗಳ ನಡುವೆ ಎಲ್ಲರಿಗೂ ಪ್ರೀತಿ ಹಂಚಿ ಅವರ ಪ್ರೀತಿಗೆ ಪಾತ್ರಳಾಗುವ ಒಬ್ಬ ದಿಟ್ಟ ಹುಡುಗಿ ಅಂಜಲಿಯ ಕತೆಯಾಗಿತ್ತು.
ತನ್ನ ಜೀವನದಲ್ಲಿ ನಡೆದ ಅಹಿತಕರ ಘಟನೆಯಿಂದ ನೊಂದ ನಾಯಕಿ ತನ್ನ ಹೊಸ ಬದುಕು ಹೇಗೆ ಕಟ್ಟಿಕೊಳ್ಳುತ್ತಾಳೆ. ಮುಂದೆ ಎದುರಾಗುವ ವ್ಯಕ್ತಿಗಳನ್ನು, ಸವಾಲುಗಳನ್ನ ಹೇಗೆ ಎದುರಿಸುತ್ತಾಳೆ ಅನ್ನುವುದೇ ಈ ಕಣ್ಮಣಿ ಧಾರಾವಾಹಿ ಕಥೆಯ ತಿರುಲಾಗಿತ್ತು.