ಬಾಲ್ಯದಿಂದಲೇ ಕಾಣದ ತಂದೆಯನ್ನು ಹುಡುಕುತ್ತಾ ಗ್ರಾಮದಿಂದ ಬೆಂಗಳೂರಿಗೆ ಹೊರಟ ಮಗಳಾಗಿ ಗೃಹಪ್ರವೇಶ ಸೀರಿಯಲ್ ಮೂಲಕ ಗ್ರಾಮೀಣ ಪಾತ್ರದಲ್ಲಿ ಮಿಂಚಿದ ನಟಿ ಸ್ಪಂದನಾ ಸೋಮಣ್ಣ (Spandana Somanna).
ಯಾವಾಗಲೂ ಲಂಗ ದಾವಣಿಯಲ್ಲಿ ಮುಗ್ಧೆಯಾಗಿ ಕಾಣಿಸುತ್ತಿದ್ದ ನಟಿ ತಮ್ಮ ಮುಗ್ಧ ನಟನೆಯ ಮೂಲಕ ಜನಮನ ಗೆದ್ದಿದ್ದರು. ಸೀರಿಯಲ್ ಮುಗಿದರೂ ಇಂದಿಗೂ ಜನ ಇವರನ್ನು ಗೃಹಪ್ರವೇಶದ ಪಲ್ಲವಿಯಾಗಿ ಗುರುತಿಸುತ್ತಿದ್ದಾರೆ.
ಇದೀಗ ಸ್ಪಂದನಾ ಇತ್ತೀಚೆಗಷ್ಟೇ ಫೋಟೋ ಶೂಟ್ (Phototshoot) ಮಾಡಿಸಿಕೊಂಡಿದ್ದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ನಟಿಯ ಹೊಸ ಲುಕ್ ಗೆ ಜನ ಫಿದಾ ಆಗಿದ್ದಾರೆ.
ಫೈರ್ ಬ್ಯಾಕ್ ಗೌಂಡ್ ಮುಂದೆ ಬ್ರೌನ್ ಬಣ್ಣದ ಬಾಡಿ ಹಗ್ಗಿಂಗ್ ಗೌನ್ ಧರಿಸಿರುವ ಸ್ಪಂದನಾ ಸೋಮಣ್ಣ, ಸಿಂಪಲ್ ಆಗಿ, ಜೊತೆಗೆ ಸಖತ್ ಕ್ಯೂಟ್ ಆಗಿ ಕಾಣಿಸಿದ್ದು, ಅಭಿಮಾನಿಗಳು ಫೈರ್ ಎನ್ನುತ್ತಿದ್ದಾರೆ.
ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸ್ಪಂದನಾ ಸೋಮಣ್ಣ 'ನಾನು ನನ್ನ ಕನಸು' ಎಂಬ ಕನ್ನಡ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ್ ಇವರು, ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ತೆಲುಗಿನ 'ನಚ್ಚಾವೆ' ವೆಬ್ ಸೀರೀಸ್ ಹಾಗೂ ಹಿಂದಿಯ ಸುನ್ ಲೆ ನಾ ಎಂಬ ಆಲ್ಬಂ ಸಾಂಗ್‌ನಲ್ಲಿ ನಟಿಸಿದ್ದಾರೆ. ಇವರು ದಿಲ್ ಖುಷ್' ಸಿನಿಮಾ ಮೂಲಕ ಕನ್ನಡ ಬೆಳ್ಳೆತೆರೆ ಕಾಲಿಟ್ಟಿದ್ದರು. ಇನ್ನು ಇವರು ವಿಜಯ್ ರಾಘವೇಂದ್ರ ಜೊತೆಗೂ ಸಿನಿಮಾ ಮಾಡಿದ್ದಾರೆ.
ವಿಜಯ್ ರಾಘವೇಂದ್ರ (Vijay Raghavendra) ಮತ್ತು ಸೋನು ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮರೀಚಿ ಸಿನಿಮಾದಲ್ಲಿ ಮತ್ತೋರ್ವ ಹೀರೋ ಅಭಿದಾಸ್ ಗೆ ನಾಯಕಿಯಾಗಿ ಸ್ಪಂದನಾ ನಟಿಸಿದ್ದರು.
ಕನ್ನಡದಲ್ಲಿ ಗೃಹಪ್ರವೇಶ ಸೀರಿಯಲ್ (serial) ಮುಗಿದ ಮೇಲೆ ಸದ್ಯ ಬೇರೆ ಸೀರಿಯಲ್ ಗಳಲ್ಲಿ ಕಾಣಿಸದೇ ಸಿನಿಮಾಗಳತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇವರು ಫೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗಿರ್ತಾರೆ.