ಟು ಪೀಸಲ್ಲಿ ತ್ರಿಪುರ ಸುಂದರಿ ದಿವ್ಯಾ ಸುರೇಶ್, ಸಿಕ್ಕಾಪಟ್ಟೆ ಹಾಟ್ ಕಾಣಿಸ್ತೀರಿ ಬಾಲಿವುಡ್‌ನಲ್ಲಿ ನಟಿಸಿ ಎಂದ ಫ್ಯಾನ್ಸ್!

First Published | May 31, 2024, 4:22 PM IST

ಬಿಗ್ ಬಾಸ್ ಸೀಸನ್ 8 ಮತ್ತು ತ್ರಿಪುರ ಸುಂದರಿ ಧಾರಾವಾಹಿ ಮೂಲಕ್ ಮನೆಮಾತಾಗಿದ್ದ ದಿವ್ಯಾ ಸುರೇಶ್ ಇದೀಗ ಸಖತ್ ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 
 

ಮಾಡೆಲ್ ಆಗಿ ವೃತ್ತಿ ಆರಂಭಿಸಿ, ಕನ್ನಡ ಸಿನಿಮಾಗಳಲ್ಲೂ ನಟಿಸಿ, ತೆಲುಗು ಚಿತ್ರರಂಗದಲ್ಲೂ ಲಕ್ ಟ್ರೈ ಮಾಡಿ, ಬಳಿಕ ಕನ್ನಡದ ಬಿಗ್ ಬಾಸ್ ಸೀಸನ್ 8 ರ ಮೂಲಕ ಜನಪ್ರಿಯತೆ ಪಡೆದು, ಕರ್ನಾಟಕದ ಮನೆಮಾತಾಗಿರೋರು ನಟಿ ದಿವ್ಯಾ ಸುರೇಶ್ (Divya Suresh). 
 

ಬಿಗ್ ಬಾಸ್ ಸೀಸನ್ 8ರ (Bigg boss Season 8) ಆರಂಭದಲ್ಲಿ ಆಕ್ಟೀವ್ ಆಗಿರದ ಡಿಎಸ್, ಬಳಿಕ ತಮ್ಮ ಆಟ, ಸ್ಪರ್ಧೆಯ ಮೂಲಕ ಬಿಗ್ ಬಾಸ್ ಕೊನೆಯ ವಾರಗಳವರೆಗೂ ಉಳಿದುಕೊಂಡಿದ್ದರು. ಸದ್ಯ ದಿವ್ಯಾ ಸುರೇಶ್ ತಮ್ಮ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ ಅಷ್ಟೇ. 
 

Tap to resize

2017ರಲ್ಲಿ ಕನ್ನಡದ "#9, ಹಿಲ್ಟನ್ ಕ್ರಾಸ್" ಸಿನಿಮಾದ ಮೂಲಕ ಸಿನಿ ಪಯಣ ಆರಂಭಿಸಿದ ದಿವ್ಯಾ, ಬಳಿಕ ನನ್ನ ಹೆಂಡ್ತಿ ಎಂ.ಬಿ.ಬಿ.ಎಸ್, ಜೋಡಿ ಹಕ್ಕಿ ಎನ್ನುವ ಸಿನಿಮಾಗಳಲ್ಲೂ ನಟಿಸಿದ್ದರು. ಆದರೆ ಯಾವ ಸಿನಿಮಾವೂ ಜನರನ್ನು ತಲುಪಲಿಲ್ಲ, ಬಳಿಕ ತೆಲುಗಿನಲ್ಲಿ ಟೆಮ್ಟ್ ರಾಜ, ಡಿಗ್ರಿ ಕಾಲೇಜು ಎನ್ನುವ ಸಿನಿಮಾದಲ್ಲೂ ನಟಿಸಿ ಅಲ್ಲೂ ಸೋತಿದ್ದರು. 
 

2017ರಲ್ಲಿ ಮಿಸ್ ಇಂಡಿಯಾ ಸೌತ್ ಪ್ರಶಸ್ತಿ ಗೆದ್ದಿದ್ದ ದಿವ್ಯಾ ಸುರೇಶ್‌ಗೆ ಜನಪ್ರಿಯತೆ, ಹೆಸರು ತಂದು ಕೊಟ್ಟಿದ್ದು ಬಿಗ್ ಬಾಸ್, ಅಲ್ಲಿಂದ ಬಂದ ಬಳಿಕ ದಿವ್ಯಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ತ್ರಿಪುರಾ ಸುಂದರಿ (Tripura Sundari) ಧಾರಾವಾಹಿಯಲ್ಲಿ, ಆಮ್ರಪಾಲಿಯಾಗಿ ನಟಿಸಿದ್ದರು. 
 

ಆ ಸೀರಿಯಲ್ ಬಳಿಕ ದಿವ್ಯಾ ಫ್ಯಾಷನ್ (Fashion), ಮಾಡೆಲಿಂಗ್ (Modelling), ಟ್ರಾವೆಲಿಂಗ್ (Travelling), ಫಿಟ್ನೆಸ್ (Fitness) ಎಂದು ತಮ್ಮ ಜಗತ್ತಿನಲ್ಲೇ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ನಟಿ ಗೋವಾಕ್ಕೆ ತೆರಳಿದ್ದು, ಅಲ್ಲಿ ತೆಗೆಸಿಕೊಂಡಂತಹ ಒಂದಷ್ಟು ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡಿದ್ದು, ದಿವ್ಯಾರನ್ನು ನೋಡಿ ವಾರೆ ವಾ ಅಂತಿದ್ದಾರೆ ಹುಡುಗರು. 
 

ಒಂದರಲ್ಲಿ ಡೀಪ್ ನೆಕ್ ಇರುವ ಸ್ಲೀವ್ ಲೆಸ್ ಡ್ರೆಸ್ (Sleevless Dress) ಧರಿಸಿ, ಹ್ಯಾಟ್, ಗಾಗಲ್ಸ್ ಹಾಕಿದ್ರೆ, ಮತ್ತೊಂದರಲ್ಲಿ ಟು ಪೀಸ್ ಧರಿಸಿ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ತುಂಬಾನೆ ಹಾಟ್ ಆಗಿ ಕಾಣಿಸ್ತೀರಿ, ನೀವು ಬಾಲಿವುಡ್ ನಲ್ಲಿ ಟ್ರೈ ಮಾಡಬಹುದು ಅಂದಿದ್ದಾರೆ. ಕನಸಿನ ರಾಣಿ, ಸ್ಟೈಲಿಶ್ ಮತ್ತು ಸೆಕ್ಸಿಯಾಗಿ ಕಾಣಿಸುತ್ತಿದ್ದೀರಿ ಎಂದಿದ್ದಾರೆ. 
 

ಸಖತ್ ಸ್ಲಿಮ್ ಆಗಿರುವ ದಿವ್ಯಾ, ತಮ್ಮ ಫಿಟ್ನೆಸ್ (Fitness) ಕಡೆಗೆ ತುಂಬಾ ಗಮನ ಹರಿಸುತ್ತಾರೆ. ಅದಕ್ಕಾಗಿ ಒಂದು ದಿನವೂ ಮಿಸ್ ಮಾಡದೇ ವರ್ಕ್ ಔಟ್ ಮಾಡ್ತಾರಂತೆ. ಇನ್ನು ಕೆಲ ಸಮಯದ ಹಿಂದೆ ದಿವ್ಯಾ ಜೊತೆ ಮಿಸ್ಟ್ರಿ ಬಾಯ್ ಒಬ್ಬರ ಫೋಟೋ ವೈರಲ್ ಆಗಿ ಭಾರಿ ಚರ್ಚೆಯಾಗಿತ್ತು. ಈ ಬಗ್ಗೆ ದಿವ್ಯಾ ಏನೂ ಹೇಳಿಲ್ಲ. ಇವೆಲ್ಲದರ ಮಧ್ಯೆ ಅಭಿಮಾನಿಗಳು ಮತ್ತೆ ದಿವ್ಯಾ ಸುರೇಶ್ ಅವರನ್ನು ತೆರೆ ಮೇಲೆ ನೋಡೋದಕ್ಕೆ ಕಾಯ್ತಿದ್ದಾರೆ. ಯಾವಾಗ ನಟಿಸ್ತಾರೆ? ಅವರೇ ಹೇಳಬೇಕು… 
 

Latest Videos

click me!