ಸೈನಿಕನ ಜೊತೆ ಕಾವೇರಿ ಮದುವೆ; ಬ್ಯಾಚುಲರ್ ಪಾರ್ಟಿ ಮಾಡಿದ 'ಗಿಣಿರಾಮ' ನಟಿ!

First Published | Feb 19, 2024, 12:46 PM IST

 ಭಾವಿ ಪತಿ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿಕೊಂಡ ಕಿರುತೆರೆ ನಟಿ. ಜೋಡಿ ಸೂಪರ್ ಎಂದ ನೆಟ್ಟಿಗರು.....

 ಕನ್ನಡ ಕಿರುತೆರೆ ಜನಪ್ರಿಯ ನಟಿ ಕಾವೇರಿ ಬಾಗಲಕೋಟೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿ ಅಪ್‌ಡೇಟ್‌ ಹಂಚಿಕೊಳ್ಳುತ್ತಾರೆ.

ಶೀಘ್ರದಲ್ಲಿ ಸೈನಿಕನ ಜೊತೆ ಕಾವೇರಿ ಬಾಗಲಕೋಟೆ ಮದುವೆ ಆಗುತ್ತಿದ್ದಾರೆ. ಹೀಗಾಗಿ ಸ್ನೇಹಿತರ ಜೊತೆ ಅದ್ಧೂರಿಯಾಗಿ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ.

Tap to resize

ಕಳೆದ 8 ವರ್ಷಗಳಿಂದ ಸೈನಿಕ ವಿಠ್ಠಲ್‌ ಹಿರಣ್ಣನವರ್‌ ಎಂಬುವವರನ್ನು ಪ್ರೀತಿಸುತ್ತಿದ್ದರು. ಪೋಷಕರ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳುತ್ತಿದ್ದಾರೆ.

ಪಿಂಕ್ ಬಣ್ಣದ ಫ್ರಾಕ್‌ನಲ್ಲಿ ಕಾವೇರಿ, ಸಿಂಪಲ್ ಶರ್ಟ್‌ ಪ್ಯಾಂಟ್‌ ಔಟ್‌ಫಿಟ್‌ನಲ್ಲಿ ವಿಠ್ಠಲ್ ಕಾಣಿಸಿಕೊಂಡಿದ್ದಾರೆ. ಪಾರ್ಟಿ ಹೇಗಿತ್ತು ಎಂದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

Bride to Be ಪಾರ್ಟಿ. ಥ್ಯಾಂಕ್ಸ್ ಸ್ನೇಹಿತರೇ ಎಂದು ಕಾವೇರಿ ಬರೆದುಕೊಂಡಿದ್ದಾರೆ. ಪ್ರೇಮಿಗಳ ದಿನದಂದು ಭಾವ ಪತಿ ಫೋಟೋ ಹಾಕಿ ವಿಶ್ ಮಾಡಿದ್ದಾರೆ. 

ಗಿಣಿರಾಮ ಧಾರಾವಾಹಿಯಲ್ಲಿ ಕಾವೇರಿ ಅಭಿನಯಿಸುತ್ತಿದ್ದು ವೈಯಕ್ತಿಕ ಕಾರಣದಿಂದ ಹೊರ ನಡೆದಿದ್ದಾರೆ. ಆನಂತರ ಮೇಕಪ್ ಆರ್ಟಿಸ್ಟ್‌ ಆಗಿ ಕೆಲಸ ಆರಂಭಿಸಿದ್ದರು. 

Latest Videos

click me!