ತಾಕತ್ತು ಮಾತಿನಲ್ಲಿರಬೇಕೆಂದು ಸ್ಲೀವ್‌ಲೆಸ್‌ ಬ್ಲೌಸ್‌ನಲ್ಲಿ ಮಿಂಚಿದ ಹಿಟ್ಲರ್ ಕಲ್ಯಾಣ ನಟಿ: ಏನಾಯ್ತು ಅಂತರಾಗೆ?

First Published | Feb 18, 2024, 12:30 AM IST

ನಟಿ ರಜನಿ ಯಾರಿಗೆ ತಾನೇ ಗೊತ್ತಿಲ್ಲ. ಅಮೃತವರ್ಷಿಣಿ ಧಾರಾವಾಹಿಯ ಮೂಲಕ ಎಲ್ಲರ ಮನ ಗೆದ್ದವರು. ಕನ್ನಡ ಕಿರುತೆರೆ ನಟಿ, ಸಿನಿಮಾಗಳಲ್ಲೂ ನಟಿಸಿರುವ ಇವರು, ಕನ್ನಡದ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್‌ನಲ್ಲಿ ಸ್ಪರ್ಧಿಯಾಗಿದ್ದರು.

ಅಮೃತವರ್ಷಿಣಿ ಸೀರಿಯಲ್ ಮೂಲಕ ಫೇಮಸ್ ಆದ ನಟಿ ರಜನಿ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ತಮ್ಮ ಸುಂದರ ಫೋಟೋಗಳನ್ನು ಶೇರ್ ಮಾಡಿ ಏನಾದರು ಬರೆದುಕೊಂಡಿರುತ್ತಾರೆ. ಅವರು ಈಗ ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ವೈರಲ್ ಆಗಿದೆ.

ಸ್ಟಾರ್ ಸುವರ್ಣದಲ್ಲಿ ಬರುತ್ತಿದ್ದ ಅಮೃತವರ್ಷಿಣಿ ಸೀರಿಯಲ್‌ನಲ್ಲಿ ಅಮೃತನ ಪಾತ್ರಧಾರಿಯಾಗಿ ಮಿಂಚುತ್ತಿದ್ದ ನಟಿ ರಜನಿ ಸೋಶಿಯಲ್ ಮೀಡಿಯದಲ್ಲಿ ತುಂಬಾ ಆಕ್ಟಿವ್ ಆಗಿದ್ದು, ಇದೀಗ ಪಿಂಕ್ ಸೀರೆಯಲ್ಲಿ ಮಿಂಚಿದ್ದಾರೆ.

Tap to resize

ಕಲರ್‌ಫುಲ್ ಎಲೆಗಳಿಂದ ಕೂಡಿರುವ ಸೀರೆ ಹಾಗೂ ಸ್ಲೀವ್‌ಲೆಸ್‌ ಬ್ಲೌಸ್‌ನಲ್ಲಿ ಮಿಂಚಿರುವ ರಜನಿ, ತಾಕತ್ತು ಮಾತಿನಲ್ಲಿರಬೇಕೇ ವಿನಃ ಮಾತನಾಡುವ ಧ್ವನಿಯಲ್ಲಲ್ಲ. ಮಳೆಯಿಂದ ಹೂವರುಳತ್ತದೆಯೇ ಹೊರತು ಪ್ರವಾಹದಿಂದಲ್ಲ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಉತ್ತಮ ಗಾಯಕಿಯೂ ಆಗಿರುವ ನಟಿ ರಜನಿ ಅವರು ಹಲವು ಸಾರ್ವಜನಿಕ ವೇದಿಕೆಯಲ್ಲಿ ಸಾಕಷ್ಟು ಬಾರಿ ಹಾಡು ಹಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ. 

ತುಮಕೂರು ಮೂಲದವರಾದ ರಜನಿ ಈ ಅಮೃತವರ್ಷಿಣಿ ಸೀರಿಯಲ್‌ನಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ಬಹಳ ಸೊಗಸಾಗಿ ನಟಿಸಿದ್ದರು, ಅವರಿಗೆ ಈ ಸೀರಿಯಲ್ ಒಳ್ಳೆ ಬ್ರೇಕ್ ನೀಡಿತ್ತು. 

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ರಜನಿ ಕಾಣಿಸಿಕೊಂಡಿದ್ದು, ಬೇರೆ ಯಾವುದೇ ಧಾರಾವಾಹಿ ಒಪ್ಪಿಕೊಂಡಿಲ್ಲ. ಆದರೆ ರಜನಿಗೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುವ ಆಸೆ ಇದೆಯಂತೆ.

ಒಟ್ಟಾರೆಯಾಗಿ ರಜನಿ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದು, ಅಭಿಮಾನಿಗಳು ಸಹ ಅವರನ್ನು ತೆರೆಯ ಮೇಲೆ ನೋಡಲು ಕಾತುರರಾಗಿದ್ದಾರೆ. ರೀಲ್ಸ್ ಮೂಲಕ ಮನರಂಜನೆ ನೀಡುತ್ತಿರುವ ರಜನಿ ಮತ್ತೆ ಬಣ್ಣ ಹಚ್ಚುವುದು ಯಾವಾಗ ಎಂಬುದು ಕುತೂಹಲ ಮೂಡಿಸಿದೆ.

Latest Videos

click me!