ಸೀತಾ -ರಾಮರನ್ನು ಬೇರೆ ಮಾಡೋಕೆ ಹಳೆ ಲವರ್ ಚಾಂದಿನಿ ಎಂಟ್ರಿ…. ಪ್ರೇಕ್ಷಕರು ಏನಂತಾರೆ ಗೊತ್ತಾ?

First Published | Feb 19, 2024, 12:27 PM IST

ಕಳೆದೆರಡು ದಿನಗಳಿಂದ ಸೀತಾ ರಾಮ ಸೀರಿಯಲ್ ನ ಪ್ರೀತಿಯ ಪ್ರೋಮೋ ಸಾಂಗ್ ನೋಡಿ ಖುಷಿ ಪಟ್ಟಿದ್ದ ಪ್ರೇಕ್ಷಕರಿಗೆ ಇದೀಗ ಶಾಕ್ ಒಂದು ಕಾದಿದೆ, ಸೀತಾ ರಾಮರನ್ನು ಬೇರೆ ಮಾಡೋಕ್ಕೆ ಹಳೆ ಲವರ್ ಚಾಂದಿನಿ ಎಂಟ್ರಿಯಾಗಿದೆ. 
 

ತನ್ನ ವಿಭಿನ್ನ ಕಥೆಯ ಮೂಲಕ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್ (Seeta Rama Serial) ಕಡಿಮೆ ಅವಧಿಯಲ್ಲಿಯೇ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಇದೀಗ ಸೀರಿಯಲ್ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟಿದ್ದಾರೆ. 
 

ಸೀರಿಯಲ್ ತಂಡ ಎರಡು ದಿನದ ಹಿಂದೆ ಸೀತಾ ರಾಮರ ಪ್ರೇಮೋತ್ಸವ ಎಂದು ಹೇಳುತ್ತಾ, ರಾಮ್ ಸೀತಾಗೆ ಪ್ರಪೋಸ್ ಮಾಡೋ,  ಇಬ್ಬರು ಜೊತೆ, ಜೊತೆಯಾಗಿ ತಿರುಗಾಡೋ, ಕೊನೆಗೆ ರಾಮ ಸೀತೆಗೆ ಉಂಗುರ ಹಾಕೋ ವಿಡಿಯೋ ಸಾಂಗ್ (video song) ಒಂದನ್ನು ಹಂಚಿಕೊಂಡಿತ್ತು.
 

Tap to resize

ಯಾರ ಜೀವ ಯಾರಿಗೋ… ಎನ್ನುವ ಟೈಟಲ್ ಹಾಡಿನ ಜೊತೆ ಸೀತಾ ರಾಮರ ಪ್ರೇಮ ಕಾವ್ಯ ಅದ್ಭುತವಾಗಿ ಮೂಡಿ ಬಂದಿತ್ತು, ಕೊನೆಗೂ ಸೀತಾ ರಾಮ ಒಂದಾದ್ರೂ ಎನ್ನುವ ಖುಷಿಯಲ್ಲಿದ್ದ ಪ್ರೇಕ್ಷಕರಿಗೆ ಸೀರಿಯಲ್ ತಂಡ ಶಾಕಿಂಗ್ ಟ್ವಿಸ್ಟ್ (twist) ನೀಡಿದೆ. 
 

ಸೀತೆಗೆ ಉಂಗುರ ಹಾಕಿ, ಸಿಹಿ ಹಿಂದೆ ರಾಮ್ ಹೋಗುತ್ತಿದ್ದರೆ, ರಾಮನ ಹಳೆಯ ಪ್ರೇಯಸಿ ಚಾಂದಿನಿ ಮತ್ತೆ ಸೀತಾ ಎದುರು ಬಂದು, ಹೆಸರು ಸೀತಾ ಅಂದ ಮಾತ್ರಕ್ಕೆ ರಾಮ್ ನಿನ್ನೋನು ಆಗಲ್ಲ. ನಾನು ಚಾಂದಿನಿ ರಾಮ್ ಗರ್ಲ್ ಫ್ರೆಂಡ್, ಅವನ ಫಾಸ್ಟ್ ನಾನೇ, ಫ್ಯೂಚರ್ ಕೂಡ ನಾನೇ, ನೀನು ಅವನಿಂದ ದೂರ ಇರು ಎಂದು ಹೇಳಿ ಹೋಗ್ತಾಳೆ. 
 

ರಾಮ್ ಹಳೆ ಪ್ರೀತಿ ಚಾಂದಿನಿಯಾಗಿ ಕನ್ನಡತಿ ಖ್ಯಾತಿಯ ರಮೋಲ (Ramola) ಕಾಣಿಸಿಕೊಂಡಿದ್ದಾರೆ. ಹೊಸ ಪ್ರೀತಿ ಶುರುವಾಗೋ ಹೊತ್ತಿಗೆ, ಹಳೆ ಪ್ರೀತಿಯ ಟ್ವಿಸ್ಟ್ ನೋಡಿದ ಅಭಿಮಾನಿಗಳು ಕನ್ನಡತಿಯಲ್ಲಿ ಭುವಿಗೆ ಹಿಂಸೆ ಕೊಟ್ಟೆ ಸಾನಿಯಾ ಆಗಿ, ಇಲ್ಲಿ ಚಾಂದಿನಿಯಾಗಿ ಸೀತೆಗೆ ಹಿಂಸೆ ಕೊಡ್ತ್ಯಾ ಎಂದಿದ್ದಾರೆ. 
 

ಇನ್ನು ಕೆಲವರು ಅಭಿಮಾನಿಗಳು ಸೀತಾ ರಾಮ ಹೆಸರೇ ಬೇರೆ ಮಾಡೋಕೆ ಆಗಲ್ಲಾ.. ಇನ್ನು ಜೋಡಿ ಜೀವಗಳು ಬೇರೆ ಆಗ್ತಾರ... ನೋ ವೆ ಚಾನ್ಸೇ ಇಲ್ಲ, ಚಾಂದಿನಿ ಅಲ್ಲ, ನೂರು ಚಾಂದಿನಿ ಅಂತವ್ರು ಬಂದ್ರು ಸೀತಾ ರಾಮರನ್ನು ಯಾರು ದೂರ ಮಾಡೋಕೆ ಆಗಲ್ಲ, ಯಾಕೆಂದರೆ ಸಿಹಿಯೂ ಸನಿಹ ಮಾಡುವಳು ಎಂದು ಬರೆದಿದ್ದಾರೆ. 
 

ಮತ್ತೊಬ್ಬರು ಅಯ್ಯೋ ಎಷ್ಟೊಂದು ವಿಲನ್ ಗಳು ಈ ಸೀರಿಯಲ್ ನಲ್ಲಿ. ಪ್ಲೀಸ್ ಇದ್ದ ವಿಲನ್ ಗಳು ಸಾಕು ಮತ್ತೆ ಚಾಂದಿನಿ ಬರೋದು ಬೇಡ ಸೀರಿಯಲ್ ಬೋರಾಗುತ್ತೆ. ಪ್ಲೀಸ್. ನೀವು ರುದ್ರ ಪ್ರತಾಪ್ ಮತ್ತು ಚಾಂದಿನಿಗೆ ಮದ್ವೆ ಮಾಡ್ಸಿ ಎಂದು ಮತ್ತೆ ಕೆಲವರು ಹೇಳಿದ್ದಾರೆ. 
 

ಮತ್ತೊಬ್ಬರು ಕಾಮೆಂಟ್ ಮಾಡಿ ರಾಮ್ ಸೀತಾಗೆ ಪ್ರಮೋಸ್ ಮಾಡೋ ವಿಡಿಯೋ ನೋಡಿ ಫುಲ್ ಖುಷಿಯಾಗಿದ್ವಿ. ಈ ಎಪಿಸೋಡ್ ಯಾವಾಗ ಟೆಲಿಕಾಸ್ಟ್ ಆಗುತ್ತೆ ಅಂತ ಕಾಯ್ತ ಇದ್ವಿ. ಆದ್ರೆ ಅಷ್ಟ್ರಲ್ಲಿ ಇವತ್ತಿನ ವಿಡಿಯೋದಲ್ಲಿ ಚಾಂದಿನಿನ ನೋಡಿ ಎಲ್ಲಾ ಖುಷಿ ಹೋಯ್ತು ಎಂದಿದ್ದಾರೆ. 
 

Latest Videos

click me!