Anchor Jhanvi: ಕುದುರೆಗಳ ಜೊತೆ ಬಂದ ಗಿಚ್ಚಿ ಗಿಲಿಗಿಲಿ ಜಾನ್ವಿ, ಆದ್ರೆ ನೆಟ್ಟಿಗರು ಕಂಡಿದ್ದೇ ಬೇರೆ..!

Published : Oct 07, 2023, 08:14 PM IST

ಟಿವಿ ವಾಹಿನಿಯ ನಿರೂಪಕಿಯಾಗಿದ್ದ ಜಾನ್ವಿ ಇಂದು ಸ್ಯಾಂಡಲ್‌ವುಡ್‌ ನಟಿ. ಕಿರುತೆರೆಯಲ್ಲಿ ಗಿಚ್ಚಿ ಗಿಲಿಗಿಲಿ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ರನ್ನರ್‌ಅಪ್‌ ಆಗಿದ್ದ ಜಾನ್ವಿ ಅವರ ಹೊಸ ಫೋಟೋಶೂಟ್‌ ವೈರಲ್‌ ಆಗಿದೆ.

PREV
118
Anchor Jhanvi: ಕುದುರೆಗಳ ಜೊತೆ ಬಂದ ಗಿಚ್ಚಿ ಗಿಲಿಗಿಲಿ ಜಾನ್ವಿ, ಆದ್ರೆ ನೆಟ್ಟಿಗರು ಕಂಡಿದ್ದೇ ಬೇರೆ..!

ನಿರೂಪಕಿಯಾಗಿ ಬಳಿಕ ಕಿರುತೆರೆಗೆ ಕಾಲಿಟ್ಟು ಈಗ ಸ್ಯಾಂಡಲ್‌ವುಡ್‌ ನಟಿಯಾಗುವ ಹಂತಕ್ಕೆ ಬೆಳೆದಿದ್ದಾರೆ ನಟಿ ಜಾನ್ವಿ. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಜಾನ್ವಿ ಕಿರುತರೆಗೆ ಪ್ರವೇಶಿಸಿದ್ದರು.

218

ಇತ್ತೀಚೆಗೆ ಅವರು ಮಾಡಿಸಿಕೊಂಡಿರುವ ಎರಡು ಫೋಟೋಶೂಟ್‌ಗಳು ಭಾರೀ ವೈರಲ್‌ ಆಗಿದೆ. ಅದಕ್ಕೆ ಕಾರಣ ಎರಡೂ ಫೋಟೋಶೂಟ್‌ಗಳಲ್ಲಿ ಜಾನ್ವಿ ಬಹಳ ಮುದ್ದಾಗಿ ಕಂಡಿದ್ದಾರೆ.

318

ಬಿಳಿ ಕುದುರೆ ಹಾಗೂ ಕರಿಕುದುರೆಗಳ ಜೊತೆ ಅವರು ಫೋಟೋ ಶೂಟ್‌ ಮಾಡಿಸಿಕೊಂಡಿದ್ದು, ಇನ್ಸ್‌ಟಾಗ್ರಾಮ್‌ನಲ್ಲಿ ಅವರ ಚಿತ್ರಗಳನ್ನು ಬಹಳ ಮೆಚ್ಚಿಕೊಂಡಿದ್ದಾರೆ.

418

ಕುದುರೆಗಳ ಎದುರು ಬಿಳಿ ಬಣ್ಣದ ಡ್ರೆಸ್‌ ಧರಿಸಿಕೊಂಡು ನಿಂತಿರುವ ಜಾನ್ವಿ ಹಲವು ರೀತಿಯ ಪೋಸ್‌ಗಳನ್ನು ನೀಡಿದ್ದಾರೆ. ಇವುಗಳ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.

518

ಇನ್ನು ನಟಿಯ ಫೋಟೋಶೂಟ್‌ ಚಿತ್ರಗಳನ್ನುಅವರ ಅಭಿಮಾನಿಗಳು ಬಹಳ ಗಹನವಾಗಿ ನೋಡಿದ್ದಾರೆ ಅನ್ನೋದಕ್ಕೆ ಅಲ್ಲಿ ಬಂದಿರುವ ಕೆಲವೊಂದು ಕಾಮೆಂಟ್‌ಗಳೇ ಸಾಕ್ಷಿಯಾಗಿವೆ.

618

ಕರಿ ಕುದುರೆ ಹಾಗೂ ಬಿಳಿ ಕುದುರೆಯ ಜೊತೆ ಫೋಟೋಶೂಟ್‌ಗಾಗಿ ಜಾನ್ವಿ ಎಷ್ಟರ ಮಟ್ಟಿಗೆ ತಯಾರಾಗಿದ್ದರೆಂದರೆ, ಅವರ ಉಗುರುಗಳಿಗೂ ಕಪ್ಪು ಹಾಗೂ ಬಿಳಿ ಬಣ್ಣದ ನೇಲ್‌ ಪಾಲೀಶ್‌ಗಳನ್ನು ಬಳಿದುಕೊಂಡಿದ್ದರು.

718

ಇನ್ನು ನಟಿ ಜಾನ್ವಿ ನೀಡಿರುವ ಪ್ರತಿ ಪೋಸ್‌ಗಳು ಕೂಡ ಆಕರ್ಷವಾಗಿದೆ. ಇನ್ನು ಅವರ ಧರಿಸಿರುವ ಡ್ರೆಸ್‌ನ ಹಲವರ ಗಮನ ಸೆಳೆದಿದೆ. 

818

ಅದಲ್ಲದೆ, ಫೋಟೋಶೂಟ್‌ನ ಚಿತ್ರಗಳಲ್ಲಿ ಹೆಚ್ಚಿನವರು ಜಾನ್ವಿ ಅವರ ಡ್ರೆಸ್‌ನ ಬಗ್ಗೆ ಗಮನ ನೀಡಿದ್ದು, ನಿಮ್ಮ ಟಾಪ್‌ ಸ್ವಲ್ಪ ಮೇಲೆ ಹೋಗಿರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

918

ಬಿಳಿ ಬಣ್ಣದ ಸಿಂಗಲ್‌ ಶೋಲ್ಡರ್‌ ಡ್ರೆಸ್‌ನಲ್ಲಿ ಜಾನ್ವಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿದ್ದಾರೆ. ಹೈ ಸ್ಲಿಟ್‌ ಡ್ರೆಸ್‌ ಆಗಿರುವ ಕಾರಣ ಅವರ ಅಂದ ಇನ್ನಷ್ಟು ಹೆಚ್ಚಾಗಿದೆ.

1018

ಕುದುರೆಯನ್ನು ಹಿಡಿದುಕೊಂಡು, ಹ್ಯಾಟ್‌ಅನ್ನು ಹಿಡಿದುಕೊಂಡು ಶಾರ್ಟ್‌ ಡ್ರೆಸ್‌ನಲ್ಲಿ ಅವರು ನೀಡಿರುವ ಪೋಸ್‌ಗೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

1118

ನನ್ನಮ್ಮ ಸೂಪರ್‌ಸ್ಟಾರ್‌, ಗಿಚ್ಚಿ ಗಿಲಿಗಿಲಿ ಸೀಸನ್‌ 2ನಲ್ಲಿ ಭಾಗವಹಿಸಿದ್ದ ಜಾನ್ವಿ ಈಗ ಹೊಸ ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಸಿನಿಮಾದ ಹೆಸರು ಕೂಡ ಅನೌನ್ಸ್‌ ಆಗಿದೆ.

1218

ವೈಯಕ್ತಿಕ ಜೀವನದಲ್ಲಿ ಕೊಂಚ ಹಿನ್ನಡೆ ಕಂಡು ವಿಚ್ಛೇದನಕ್ಕೆ ಒಳಗಾಗಿರುವ ಜಾನ್ವಿ, ಅಧಿಪತ್ರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬರಲು ಅಣಿಯಾಗಿದ್ದಾರೆ.

1318

ಅಧಿಪತ್ರ ಚಿತ್ರದಲ್ಲಿ ಜಾನ್ವಿ ಅವರು ಬಿಗ್‌ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿ ಅವರಿಗೆ ನಾಯಕಿಯಾಗಲಿದ್ದಾರೆ. ಇತ್ತೀಚೆಗೆ ಚಿತ್ರದ ಮಹೂರ್ತ ಕೂಡ ನೆರವೇರಿದೆ.

1418

ಇತ್ತೀಚೆಗೆ ರೂಪೇಶ್‌ ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಅಧಿಪತ್ರ ಸಿನಿಮಾ ಸೆಟ್ಟೇರಿತ್ತು. ಈ ವೇಳೆ ಹೀರೋಯಿನ್‌ ಆಗಿ ಜಾನ್ವಿ ಹೆಸರು ಘೋಷಿಸಲಾಗಿತ್ತು.

1518

ಕಿರುತೆರೆಯಲ್ಲಿ ತಮ್ಮ ಅಭಿಯನದ ಮೂಲಕ ಸ್ವಲ್ಪ ಮಟ್ಟಿಗೆ ಹೆಸರು ಸಂಪಾದನೆ ಮಾಡಿರುವ ಜಾನ್ವಿ ಈಗ ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲು ಸಜ್ಜಾಗಿದ್ದಾರೆ.

1618

ಕನ್ನಡದ ಕೆಲವು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಚಯನ್ ಶೆಟ್ಟಿ ಎಂಬುವರು ಅಧಿಪತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

1718

ಇದು ಚಯನ್‌ ಶೆಟ್ಟಿ ಅವರ ಮೊದಲ ಮೂವಿ ಆಗಿದ್ದು, ನೈಜ ಘಟನೆಯಿಂದ ಸ್ಫೂರ್ತಿ ಪಡೆದಿರುವ ಚಿತ್ರ ಎನ್ನಲಾಗಿದೆ. ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲು ತೀರ್ಮಾನಿಸಲಾಗಿದೆ.

1818

ಸಿಂಗಲ್‌ ಶೋಲ್ಡರ್‌ ಡ್ರೆಸ್‌ನಲ್ಲಿ ಹಸಿರುವ ಬ್ಯಾಕ್‌ಗ್ರೌಂಡ್‌ನಲ್ಲಿ ಬಂಡೆಯ ಮೇಲೆ ಕುಳಿತಿರುವ ಜಾನ್ವಿ ಅವರ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ಬಂದಿವೆ.

Read more Photos on
click me!

Recommended Stories