ನಿರ್ದೇಶಕರು- ನಿರ್ಮಾಪಕರು ಕರೆಯುತ್ತಾರೆ, ಲಾಡ್ಜ್‌ ರೂಮ್‌ ನೋಡಿ ಹೆದರಿಬಿಟ್ಟಿ: ಗಿಚ್ಚಿ ಗಿಲಿಗಿಲಿ ಸುಶ್ಮಿತಾ

Published : Apr 18, 2024, 03:14 PM ISTUpdated : Apr 18, 2024, 03:24 PM IST

ಸಿನಿಮಾ ಮಾಡಬೇಕು ಅನ್ನೋ ಆಸೆಯಲ್ಲಿದ್ದ ಸುಶ್ಮಿತಾಗೆ ಆಫರ್‌ ಬಂದಾಗ ಖುಷಿ ಆಯ್ತು ಆದರೆ ಆಡಿಷನ್ ಕೊಡುವ ಸ್ಥಳ ನೋಡಿ ಶಾಕ್ ಆಗಿಬಿಟ್ಟಿದ್ದಾರೆ.

PREV
18
ನಿರ್ದೇಶಕರು- ನಿರ್ಮಾಪಕರು ಕರೆಯುತ್ತಾರೆ, ಲಾಡ್ಜ್‌ ರೂಮ್‌ ನೋಡಿ ಹೆದರಿಬಿಟ್ಟಿ: ಗಿಚ್ಚಿ ಗಿಲಿಗಿಲಿ ಸುಶ್ಮಿತಾ

ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಹಾಸ್ಯ ಕಾರ್ಯಕ್ರಮ ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿಯಲ್ಲಿ ಸ್ಪರ್ಧಿಸಿರುವ ಸುಶ್ಮಿತಾ ತಮ್ಮ ಜೀವನದ ಮರೆಯಲಾಗದ ಘಟನೆಯನ್ನು ಹಂಚಿಕೊಂಡಿದ್ದಾರೆ. 

28

ಸಿನಿಮಾ ಮಾಡಬೇಕು ಅನ್ನೋ ಕನಸು ಕಂಡಾಗ ಆಡಿಷನ್‌ಗೆ ಕರೆ ಬಂದಿದೆ. ಆಡಿಷನ್‌ಗೆ ಹೋದ ಜಾಗ ಹೇಗಿತ್ತು? ಏನೆಲ್ಲಾ ಆಯ್ತು ಎಂದು ಹಂಚಿಕೊಂಡಿದ್ದಾರೆ. 

38

ಒಂದು ಸಲ ನಾನು ಆಡಿಷನ್ ಕೊಟ್ಟಿದ್ದೆ..ನಿಜ ಹೇಳಬೇಕು ಅಂದ್ರೆ ನಾನು ಆಡಿಷನ್ ಕೊಟ್ಟ ಸ್ಥಳವೇ ಆ ತರ ಇತ್ತು. ಆ ಘಟನೆ ನೆನಪಿಸಿಕೊಂಡೆ ಆಗುವುದಿಲ್ಲ. 

48

 ಸಾಮಾನ್ಯವಾಗಿ ನಾನು ಆಡಿಷನ್ ಕೊಡುವ ದಿನ ಒಟ್ಟಿಗೆ ಯಾರನ್ನಾದರೂ ಕರೆದುಕೊಂಡು ಹೋಗುವೆ ಆದರೆ ಅಂದು ನಾನು ಹೋಗಿದ್ದು ಹೋಟೆಲ್‌ ರೂಮ್‌ (ಲಾಡ್ಜ್‌) ಆದರೆ ಅವತ್ತು ನನ್ನ ಪರಿಸ್ಥಿತಿ ಸರಿಯಾಗಿರಲಿಲ್ಲ ಹೀಗಾಗಿ ನನ್ನ ಜೊತೆ ಯಾರೂ ಬರಲಿಲ್ಲ. 

58

ಅವತ್ತು ಹೋಟೆಲ್‌ ಮುಂದೆ ನಿಂತುಕೊಂಡಿದ್ದಾಗ ಆ ಹೋಟೆಲ್ ಹೆಸರಿನ ಪಕ್ಕ ಲಾಡ್ಜ್‌ ಅನ್ನೋ ಪದ ಬರೆದಿದ್ದರು...ಯಾರು ಲಾಡ್ಜ್‌ನಲ್ಲಿ ಆಡಿಷನ್ ಮಾಡುತ್ತಾರೆ ಅಂತ ಅವತ್ತು ಅಂದುಕೊಂಡೆ. 

68

ಧೈರ್ಯ ಮಾಡಿಕೊಂಡು ವಾಚ್‌ಮೆಸ್ ಸಹಾಯದಿಂದ ನಾನು ಮೆಟ್ಟಿಲು ಹತ್ತಿ ಮೂರನೇ ಮಹಡಿ ಕಡೆ ನಡೆದುಕೊಂಡು ಹೋದೆ ಆದರೆ ನನ್ನ ಮನಸ್ಸು ಬೇಡ ಈ ಕೆಲಸ ಒಪ್ಪಿಕೊಳ್ಳಬೇಡ ಆಡಿಷನ್ ಕೊಡಬೇಡ ಎನ್ನುತ್ತಿತ್ತು ತಕ್ಷಣವೇ ನಾನು ಕೆಳಗೆ ಇಳಿದು ಬಂದೆ. 

78

ಅವತ್ತೇ ನಿರ್ಧಾರ ಮಾಡಿಕೊಂಡೆ ಆಡಿಷನ್‌ಗೆ ಜೊತೆಯಲ್ಲಿ ಒಬ್ಬರನ್ನು ಕರೆದುಕೊಂಡು ಹೋಗಬೇಕು ಇಲ್ಲ ಅಂದ್ರೆ ಯಾವುದಾದರೂ ದಾರಿ ಹುಡುಕಿ ಕೆಲಸ ಮಾಡೋಣ ಅಂತ ಮನಸ್ಸು ಮಾಡಿದೆ' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಸುಶ್ಮಿತಾ ಮಾತನಾಡಿದ್ದಾರೆ.

88

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿಗೆ ಕಾಣಿಸಿಕೊಂಡಾಗ ನಿರ್ದೇಶಕರು ಅಥವಾ ನಿರ್ಮಾಪಕರು ನನ್ನನ್ನು ಕರೆಯುತ್ತಾರೆಂದು ಅದಕ್ಕೂ ಟ್ರೈ ಮಾಡಿದೆ ಆದರೆ ಅದೂ ಸರಿ ಹೋಗಲ್ಲ ಎಂದು ಸುಮ್ಮನಿದೆ.

Read more Photos on
click me!

Recommended Stories