ಬ್ರಹ್ಮಗಂಟು ಧಾರಾವಾಹಿ ನಂತರ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಗೀತಾ ಭಾರತಿ ಭಟ್ ಕಾಣಿಸಿಕೊಂಡಿದ್ದರು. ಈಗ ರವಿಕೆ ಪ್ರಸಂಗ ಸಿನಿಮಾದಲ್ಲಿ ಸಾನ್ವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
27
ಫಿಟ್ನೆಸ್ ಜರ್ನಿ ಆರಂಭಿಸಿರುವುದು ನನಗೋಸ್ಕರ. ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿದೆ. ಅಲ್ಲಿಂದ ಎಲಿಮಿನೇಟ್ ಆಗಿ ಹೊರ ಬಂದ ಮೇಲೆ ಕಿಚ್ಚ ಸುದೀಪ್ ಸರ್ ಮುಂದೆ ಹೇಳಿದ್ದೆ.
37
ಬಿಗ್ ಬಾಸ್‌ನಿಂದ ಹೊರ ಹೋಗುತ್ತಿದ್ದಂತೆ ನಾನು ಫಿಟ್ನೆಸ್ ಮೇಲೆ ಗಮನ ಹರಿಸುವುದಾಗಿ ಹೇಳಿದೆ. ಅದನ್ನು ಗಮನಿಸಿದ ಫಿಟ್ನೆ ಕೋಚ್ ಸಂಪರ್ಕ ಮಾಡುತ್ತಾರೆ ಎಂದು ಖಾಸಗಿ ಟಿವಿ ಸಂದರ್ಶದಲ್ಲಿ ಮಾತನಾಡಿದ್ದಾರೆ.
47
ಫಿಟ್ನೆಸ್ ಕೋಚ್ ಕಿರಣ್ ಸಾಗರ್ ನನ್ನನ್ನು ಸಂಪರ್ಕ ಮಾಡಿ ವರ್ಕೌಟ್ ಮಾಡುವುದಕ್ಕೆ ಮೋಟಿವೇಷನ್ ಕೊಟ್ಟರು. ನಾನು ನನ್ನನ್ನು ಇಂಪ್ರೆಸ್ ಮಾಡಿಕೊಳ್ಳಲು ವರ್ಕೌಟ್ ಶುರು ಮಾಡಿದೆ.
57
ನಾನು ದಪ್ಪ ಇದ್ದೀನಿ ಅನ್ನೋ ಕಾರಣಕ್ಕೆ ರಿಜೆಕ್ಟ್ ಮಾಡಿದ್ದರೂ ಮಾಡಿರಬಹುದು ತಪ್ಪಿಲ್ಲ. ನನ್ನನ್ನು ರಿಜೆಕ್ಟ್ ಮಾಡಿದರೆ ಅದು ಅವರ ಲಾಸ್, ನನ್ನ ಲಾಸ್ ಅಲ್ಲ.
67
ನನ್ನನ್ನು ರಿಜೆಕ್ಟ್ ಮಾಡುವ ಮನಸ್ಥಿತಿ ಇರುವವರ ಜೊತೆ ಕೆಲಸ ಮಾಡುವುದಕ್ಕಿಂತ ದೂರು ಇರುವುದೇ ಬೆಸ್ಟ್. ಅನೇಕರು ಹುಡುಗಿಯರು ಗುಂಡು ಗುಂಡಕ್ಕೆ ಇರಬೇಕು ಎಂದು ಇಷ್ಟ ಪಡುತ್ತಾರೆ.
77
ಮೈತುಂಬಿಕೊಂಡಿರುವ ಹುಡುಗಿಯರನ್ನು ಹುಡುಕಿ ಮದುವೆ ಆಗುತ್ತಾರೆ. ಹೀಗಾಗಿ ಆ ತರ ಒಳ್ಳೆ ವಿಚಾರಗಳ ಮೇಲೆ ಗಮನ ಕೊಡುತ್ತೀನಿ ಎಂದು ಗೀತಾ ಭಾರತಿ ಭಟ್ ಹೇಳಿದ್ದಾರೆ.