ರೌಡಿಗಳ ವಿರುದ್ಧ ಪುಟ್ಟಕ್ಕನ ಅಬ್ಬರ.... ನಟನೆ ಬೆಂಕಿ, ಸೀರಿಯಲ್ ಆಕ್ಷನ್‌ ಹೀರೋ ಉಮಾಶ್ರೀ ಮೇಡಂ ಎಂದ ವೀಕ್ಷಕರು

First Published | Oct 1, 2024, 1:25 PM IST

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರೌಡಿಗಳ ವಿರುದ್ಧ ಪುಟ್ಟಕ್ಕನ ಅರ್ಭಟ ನೋಡಿ ವೀಕ್ಷಕರು ಖುಷಿ ಪಟ್ಟಿದ್ದು, ಈ ಧಾರಾವಾಹಿಯ ನಿಜವಾದ ಹೀರೋ ಉಮಾಶ್ರೀ ಮೇಡಂ ಎಂದು ಶ್ಲಾಘಿಸಿದ್ದಾರೆ. 
 

ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ದಿನದಿಂದ ದಿನಕ್ಕೆ ತಿರುವುಗಳನ್ನು ನೀಡುತ್ತಾ ಸಾಗುತ್ತಿದ್ದು, ವೀಕ್ಷಕರಿಗಂತೂ ಫುಲ್ ಥ್ರಿಲ್ಲಿಂಗ್ ಎಪಿಸೋಡ್ ಗಳನ್ನ ನೀಡಿದೆ. ಇವತ್ತಿನ ಪ್ರೊಮೋ ಸಖತ್ ಥ್ರಿಲ್ಲಿಂಗ್ ಆಗಿದ್ದು, ಪುಟ್ಟಕ್ಕನ ನಟನೆ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷ್ ಆಗಿದ್ದಾರೆ. 
 

ಪುಟ್ಟಕ್ಕ ಅಂದ್ರೆ, ಮಾತಲ್ಲೇ ಮನಸ್ಸು ಗೆಲ್ಲೋಕೂ ಸೈ..ಮಾತು ಕೇಳದವರ ಸೊಕ್ಕು ಮುರಿಯೋಕೂ ಸೈ.. ಎನ್ನುವ ಕ್ಯಾಪ್ಶನ್ ನೊಂದಿಗೆ ಪ್ರೊಮೋ ರಿಲೀಸ್ ಮಾಡಿರೋ ವಾಹಿನಿ, ಇಲ್ಲಿವರೆಗೆ ತಾಳ್ಮೆಯ ಮೂರ್ತಿಯಂತೆ ಇದ್ದ ಪುಟ್ಟಕ್ಕ ಇದೀಗ, ತಾಳ್ಮೆ ಕಳೆದುಕೊಂಡು, ತಂಟೆಗೆ ಬಂದ ರೌಡಿಗಳ ವಿರುದ್ಧ ಕತ್ತಿ ಹಿಡಿದು ನಿಂತಿದ್ದಾರೆ. ಪುಟ್ಟಕ್ಕನ ಅವತಾರ ವೀಕ್ಷಕರಿಗೆ ಥ್ರಿಲ್ ನೀಡಿದೆ. 
 

Tap to resize

ಪುಟ್ಟಕ್ಕನ ನೆರವು ಕೇಳಿ ಬಂದಿರುವ ಅಪ್ಪ ಮಗಳನ್ನು ಆಕೆಯ ಮನೆಯಿಂದ ಹೊರ ಓಡಿಸುವ ಪ್ರಯತ್ನದಲ್ಲಿರುವ ಸಿಂಗಾರಮ್ಮ, ರೌಡಿಗಳನ್ನು ಕರೆಯಿಸಿ, ಪುಟ್ಟಕ್ಕನ ಬಳಿ ಅಪ್ಪ ಮಗಳ ಬಗ್ಗೆಇಲ್ಲ ಸಲ್ಲದ ಆರೋಪ ಮಾಡಿ, ಅವರಿಬ್ಬರು ತುಂಬಾ ಕೆಟ್ಟವರು ಈಗ್ಲೇ ಮನೆಯಿಂದ ಹೊರ ಹಾಕು, ಇಲ್ಲಾಂದ್ರೆ ರೌಡಿಗಳು ಬಂದು ನಿಮ್ಮ ಮನೆ ಮೆಸ್ ಎಲ್ಲಾ ಸುಟ್ಟು ಹಾಕ್ತಾರೆ ಎಂದಿದ್ದಾಳೆ. ಜೊತೆಗೆ ಪುಟ್ಟಕ್ಕನ ಮೇಲೆ ದಾಳಿ ಮಾಡೋದಕ್ಕೆ ತನ್ನ ರೌಡಿಗಳಿಗೆ ಸೂಚಿಸಿದ್ದಾಳೆ. 
 

ಇನ್ನೇನು ರೌಡಿಗಳು ಬಂದು ದಾಳಿ ಮಾಡಬೇಕು ಅನ್ನುವಷ್ಟರಲ್ಲಿ ಪುಟ್ಟಕ್ಕ ಕೈಗೆ ಕತ್ತಿ ತೆಗೆದುಕೊಂಡು ಹೊಡೆಯಲು ಬಂದ ರೌಡಿಯ ಕುತ್ತಿಗೆಗೆ ನೇರವಾಗಿ ಕತ್ತಿಯನ್ನು ಇಟ್ಟಿದ್ದಾಳೆ. ಯಾವಾಗ್ಲೂ ತಾಳ್ಮೆಯಿಂದ ಇರುತ್ತಿದ್ದ ಪುಟ್ಟಕ್ಕ ಇದೀಗ ರೌದ್ರ ರೂಪ ತಾಳಿದ್ದು, ನೋಡಿ, ಪುಟ್ಟಕ್ಕ ರಾಕ್ಸ್, ಸಿಂಗಾರಮ್ಮ ಶಾಕ್ಸ್ ಎಂದು ಕಾಮೆಂಟ್ ಮಾಡಿದ್ದಾರೆ. 
 

ಪುಟ್ಟಕ್ಕ.. ಮಮತೆಯ ಮಹಾತಾಯಿ... ಕಟುಕರ ಪಾಲಿಗೆ ಪಕ್ಕಾ ರಾಣಿ ಚನ್ನಮ್ಮ.. ಒನಕೆ ಓಬವ್ವ ಎಂದು ಒಬ್ಬರು ಹೇಳಿದ್ರೆ, ಮತ್ತೊಬ್ಬರು ಪುಟ್ಟಕ್ಕ ಸಾಕ್ಷಾತ್ ನವದುರ್ಗಿ ಅವತಾರ , ಈ ಸೀರಿಯಲ್ ನ ನಿಜವಾದ ಹೀರೋ ಉಮಾಶ್ರೀ ಮೇಡಂ ಎಂದಿದ್ದಾರೆ ಇನ್ನೊಬ್ಬರು. ಮಗದೊಬ್ಬರು ಗಟ್ಟಿಗಿತ್ತಿ ಪುಟ್ಟಕ್ಕ ನಿಮ್ ಆಕ್ಟಿಂಗ್ ಬೆಂಕಿ ಕಾಣಕ್ಕ ಎಂದಿದ್ದಾರೆ. 

ಅಷ್ಟೇ ಅಲ್ಲ ವಾವ್ ಇದು ಚೆನ್ನಾಗಿರೊದು ಸಿಂಗಾರಮ್ಮ ನಿನ್ನ ಕಥೆ ಮುಗಿತು ಇನ್ನ ಪುಟ್ಟಕ್ಕ ಸುಮ್ನೆ ಬಿಡೊಲ್ಲ ಅಂತಾನೂ ಹೇಳಿದ್ದಾರೆ. ಪುಟ್ಟಕ್ಕ ಸುಮ್ಮನಿದ್ದರೆ ನಾರಿ ಮುನಿದರೆ ಮಾರಿ, ಆಕ್ಷನ್ ಬ್ಲಾಕ್ ಬಸ್ಟರ್, ಪುಟ್ಟಕ್ಕನ ಧೈರ್ಯ ನೋಡಿ ಹೆಮ್ಮೆ ಆಗ್ತಿದೆ ಎಂದು ಸಹ ವೀಕ್ಷಕರು ಖುಷಿಯಿಂದ ಹೇಳಿ ಕೊಂಡಿದ್ದಾರೆ. 
 

Latest Videos

click me!