ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಎಲ್ಲೆಲ್ಲೂ ಗಣೇಶ ಮೂರ್ತಿಗಳು ರಾರಾಜಿಸುತ್ತಿವೆ. ಸುಂದರವಾಗಿ ಅಲಂಕಾರ ಮಾಡಿ ಗಣೇಶನ ಕೂರಿಸಿ ಭಕ್ತಿಯಿಂದ ಪೂಜಿಸಿ ಸಂಭ್ರಮಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲೂ ಗಣೇಶ ಹಬ್ಬ ಜೋರಾಗಿದೆ. ಸ್ಪರ್ಧಿಗಳು ಅದ್ದೂರಿಯಾಗಿಯೇ ಗಣೇಶ ಹಬ್ಬ ಆಚರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದರೂ ಸ್ಪರ್ಧಿಗಳು ಹಬ್ಬವನ್ನು ಮಿಸ್ ಮಾಡಿಕೊಂಡಿಲ್ಲ. ಎಲ್ಲರೂ ಜೊತೆ ಸೇರಿ ಹಬ್ಬ ಸಂಭ್ರಮಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಗಣೇಶ ಕೂರಿಸಲಾಗಿದೆ. ಹಬ್ಬ ಆಚರಣೆ ಮಾಡಲು ಬಿಗ್ ಬಾಸ್ ಅವಕಾಶ ನೀಡಿತ್ತು. ಎಲ್ಲರೂ ಖುಷಿ ಖುಷಿಯಾಗಿ ಹಬ್ಬ ಆಚರಣೆ ಮಾಡಿದ್ದಾರೆ. ಹೆಣ್ಣುಮಕ್ಕಳು ಸೀರೆ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಸುಂದರವಾಗಿ ಗಂಗೊಳಿಸುತ್ತಿದ್ದರು. ಪುರುಷ ಸ್ಪರ್ಧಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿದ್ದಾರೆ.
ಆರ್ಯವರ್ಧನ್ ಗುರೂಜಿ ಗಣಪತಿ ಪೂಜೆ ಮಾಡಿದ್ದಾರೆ. ಸ್ಪರ್ಧಿಗಳು ಇಡೀ ಬಿಗ್ ಬಾಸ್ ಮನೆಯನ್ನು ಹೂವಿನಿಂದ ಅಲಂಕಾರ ಮಾಡಿದ್ದಾರೆ. ಮನೆಯಲ್ಲಿ ರಂಗೋಲಿ ಇಟ್ಟು ಸಂಭ್ರಮಿಸಿದ್ದಾರೆ. ಬಿಗ್ ಬಾಸ್ ಮನೆಯ ಗಣೇ ಸಂಭ್ರಮ ನೋಡುಗರ ಕಣ್ಣುಕುಕ್ಕುವಂತಿದೆ.
ಪ್ರತಿದಿನ ಟಾಸ್ಕ್, ಜಗಳ, ಕಿತ್ತಾಟ, ಅಳುವಿನ ನಡುವೆ ಸ್ಪರ್ಧಿಗಳು ಸಂಭ್ರಮದಿಂದ ಹಬ್ಬ ಆಚರಿಸಿದ್ದರೆ. ಎಲ್ಲವನ್ನು ಮರೆತು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಹಬ್ಬದ ಸಲುವಾಗಿ ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋ ಸ್ಪರ್ಧಿಗಳೆಲ್ಲರೂ ವಿಶೇಷ ಅಡುಗೆ ತಯಾರಿಸಿದ್ದಾರೆ. ಎಲ್ಲರೂ ಹಬ್ಬದೂಟ ಮಾಡಿ ಸಂತಸ ಪಟ್ಟಿದ್ದಾರೆ.
ಬಿಗ್ ಬಾಸ್ ಮನೆಗೆ 16 ಸ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಈಗಾಗಲೇ ಮೂರು ವಾರ ಕಳೆದಿದ್ದು 3 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರ ಹೋದ ಮೊದಲ ಸ್ಪರ್ಧಿ ಮಾಡೆಲ್ ಕಿರಣ್, ಎರಡನೇ ಸ್ಪರ್ಧಿ ಸ್ಫೂರ್ತಿ ಗೌಡ ಮೂರನೇ ಸ್ಪರ್ಧಿ ಉದಯ್. ಇನ್ನು ನಟ ಅರ್ಜುನ್ ಮತ್ತು ಲೋಕೇಶ್ ಏಟು ಮಾಡಿಕೊಂಡು ಮನೆಯಿಂದ ಹೊರಹೋಗಿದ್ದಾರೆ.
ಬಿಗ್ ಬಾಸ್ ಒಟಿಟಿ ಮನೆಗೆ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಅರ್ಜುನ್, ಉದಯ್, ರಾಕೇಶ್ ಅಡಿಗ, ಸ್ಪೂರ್ತಿ ಗೌಡ, ಸಾನಿಯಾ ಐಯ್ಯರ್, ಜಯಶ್ರೀ ಆರಾಧ್ಯ, ಚೈತ್ರ ಹಳ್ಳಿಕೇರಿ, ರೂಪೇಶ್ ಶೆಟ್ಟಿ, ಲೋಕೇಶ್, ಸೋಮಣ್ಣ ಮಾಚಿಮಾಡ, ಕಿರಣ್, ಅಕ್ಷತಾ ಕುಕಿ, ನಂದಿನಿ ಮತ್ತು ಜಶ್ವಂತ್. ಸದ್ಯ ಮನೆಯಲ್ಲಿ 11 ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ.