ಸೋನಾಲಿ ಫೋಗಟ್ 23 ಆಗಸ್ಟ್ 2022 ರಂದು ಗೋವಾದಲ್ಲಿ ನಿಧನರಾದರು. 41 ವರ್ಷದ ಸೋನಾಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಸೋನಾಲಿಯ ಪಿಎ ಸುಧೀರ್ ಸಂಗ್ವಾನ್ ಮತ್ತು ಆತನ ಸ್ನೇಹಿತ ಸುಖ್ವಿಂದರ್ ಆಕೆಗೆ ಬಲವಂತವಾಗಿ ಡ್ರಗ್ಸ್ ನೀಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ . ಪೊಲೀಸರು ಕೊಲೆ ತನಿಖೆ ನಡೆಸುತ್ತಿದ್ದಾರೆ.
'ಬಾಲಿಕಾ ವಧು'ದಂತಹ ಧಾರಾವಾಹಿಗಳ ಮೂಲಕ ಛಾಪು ಮೂಡಿಸಿದ್ದ ಸಿದ್ಧಾರ್ಥ್ ಶುಕ್ಲಾ 'ಬಿಗ್ ಬಾಸ್' 13ನೇ ಸೀಸನ್ ನಲ್ಲಿ ಭಾಗವಹಿಸಿದ್ದಲ್ಲದೆ ಅದರ ವಿಜೇತರೂ ಆದರು. ಅವರು 2 ಸೆಪ್ಟೆಂಬರ್ 2021 ರಂದು ಹೃದಯ ಸ್ತಂಭನದಿಂದ ನಿಧನರಾದಾಗ ಅವರಿಗೆ ಕೇವಲ 40 ವರ್ಷ. ಅವರ ಹಠಾತ್ ನಿಧನದ ಸುದ್ದಿ ಜನರನ್ನು ಬೆಚ್ಚಿಬೀಳಿಸಿತ್ತು.
'ಬಿಗ್ ಬಾಸ್' 10ನೇ ಸೀಸನ್ ನಲ್ಲಿ ಸ್ವಾಮಿ ಓಂ ಸ್ಪರ್ಧಿಯಾಗಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದ್ದರು. ಅವರು 3 ಫೆಬ್ರವರಿ 2021 ರಂದು ಇಹಲೋಕ ತ್ಯಜಿಸಿದರು. ಆ ಸಮಯದಲ್ಲಿ ಅವರು 63 ವರ್ಷ ವಯಸ್ಸಿನವರಾಗಿದ್ದರು ಮತ್ತು ಅವರ ಮರಣದ ಸ್ವಲ್ಪ ಮೊದಲು ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು.
'
ಬಾಲಿಕಾ ವಧು' ಖ್ಯಾತಿಯ ಪ್ರತ್ಯೂಷಾ ಬ್ಯಾನರ್ಜಿ 1 ಏಪ್ರಿಲ್ 2016 ರಂದು ನಿಧನರಾದಾಗ, ಎಲ್ಲರೂ ಆಘಾತಕ್ಕೊಳಗಾಗಿದ್ದರು, ಏಕೆಂದರೆ ಆ ಸಮಯದಲ್ಲಿ ಅವರಿಗೆ ಕೇವಲ 24 ವರ್ಷ. 'ಬಿಗ್ ಬಾಸ್' 7ನೇ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದ ಪ್ರತ್ಯೂಷಾ ಆತ್ಮಹತ್ಯೆ ಮಾಡಿಕೊಂಡರು. ಪ್ರತ್ಯೂಷಾಳ ಸ್ನೇಹಿತೆ ಕಾಮ್ಯಾ ಪಂಜಾಬಿ ತನ್ನ ಗೆಳೆಯ ರಾಹುಲ್ ರಾಜ್ ಸಿಂಗ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಹಲವಾರು ವರದಿಗಳಲ್ಲಿ ಹೇಳಿವೆ.
ಜೇಡ್ ಗೂಡಿ 'ಬಿಗ್ ಬಾಸ್' ಎರಡನೇ ಸೀಸನ್‌ನಲ್ಲಿ ಕಾಣಿಸಿಕೊಂಡ ಇಂಗ್ಲಿಷ್ ಟಿವಿ ಪರ್ಸನ್ 2009ರಲ್ಲಿ ಆಕೆ ತೀರಿಕೊಂಡಾಗ ಆಕೆಗೆ ಕೇವಲ 27 ವರ್ಷ. ಜೇಡ್ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾರಣ 'ಬಿಗ್ ಬಾಸ್' ಎಂಟ್ರಿ ಪಡೆದ 5 ದಿನಗಳ ನಂತರ ಕಾರ್ಯಕ್ರಮವನ್ನು ತೊರೆಯಬೇಕಾಯಿತು.
'ಬಿಗ್ ಬಾಸ್' ಕನ್ನಡ ಆವೃತ್ತಿಯ ಮೂರನೇ ಸೀಸನ್‌ನಲ್ಲಿ ಕಾಣಿಸಿಕೊಂಡ ನಟಿ ಜಯಶ್ರೀ ರಾಮಯ್ಯ ಅವರು 25 ಜನವರಿ 2021 ರಂದು ನಿಧನರಾದರು. ಬೆಂಗಳೂರು ಹೊರವಲಯದಲ್ಲಿರುವ ಸಂಧ್ಯಾ ಕಿರಣ್ ವೃದ್ಧಾಶ್ರಮ ಮತ್ತು ಪುನರ್ವಸತಿ ಕೇಂದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಸಮಯದಲ್ಲಿ ಆಕೆಗೆ ಕೇವಲ 30 ವರ್ಷ.
'ಬಿಗ್ ಬಾಸ್' ಮಲಯಾಳಂ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡ ಗಾಯಕ ಸೋಮದಾಸ್ ಚೈತನೂರ್ 31 ಜನವರಿ 2021 ರಂದು ನಿಧನರಾದರು. ಆಗ ಅವರಿಗೆ 42 ವರ್ಷ. ಕೇರಳದ ಕೊಲ್ಲಂ ಜಿಲ್ಲೆಯ ಪಾರ್ಪಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೋಮದಾಸ್ ಹೃದಯಾಘಾತಕ್ಕೆ ಒಳಗಾದರು.
ಮಾಜಿ ಸ್ಪರ್ಧಿಗಳಲ್ಲದೆ, 'ಬಿಗ್ ಬಾಸ್ 14' ರ ಟ್ಯಾಲೆಂಟ್ ಮ್ಯಾನೇಜರ್ ಆಗಿದ್ದ ಪಿಸ್ತಾ ಧಕಡ್ ಜಗತ್ತಿಗೆ ವಿದಾಯ ಹೇಳಿದ್ದಾರೆ. ಸಾಯುವ ಸಮಯದಲ್ಲಿ ಆಕೆಗೆ ಕೇವಲ 24 ವರ್ಷ. 15 ಜನವರಿ 2021 ರಂದು, ಅವರು ಸಲ್ಮಾನ್ ಖಾನ್ ಅವರೊಂದಿಗೆ 'ವೀಕೆಂಡ್ ಕಾ ವಾರ್' ವಿಶೇಷ ಸಂಚಿಕೆಯನ್ನು ಚಿತ್ರೀಕರಿಸಿ, ಮನೆಗೆ ಮರಳಿದ್ದರು. ಆದರೆ ದಾರಿಯಲ್ಲಿ ಆಕೆಯ ಸ್ಕೂಟಿ ಹೊಂಡದಲ್ಲಿ ಬಿದ್ದು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಅಪಘಾತ ಅವರ ಪ್ರಾಣವನ್ನೇ ತೆಗೆದುಕೊಂಡಿತು.