ವೂಟ್ ಸೆಲೆಕ್ಟ್‌ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಓಟಿಟಿ ಸೀಸನ್ 1ನಲ್ಲಿ 3ನೇ ವಾರದ ಎಲಿಮಿನೇಷನ್ ನಡೆದಿದೆ. ಭಾನುವಾರ ಮನೆಯಿಂದ ಉದಯ್ ಸೂರ್ಯ ಹೊರ ನಡೆದಿದ್ದಾರೆ.
ಸಾಮಾನ್ಯವಾಗಿ ಬಿಗ್ ಬಾಸ್‌ನಲ್ಲಿ ಭಾನುವಾರ ಎಲಿಮಿನೇಷನ್ ನಡೆಯುತ್ತಿದೆ ಆದರೆ ಓಟಿಟಿಯಲ್ಲಿ ಶನಿವಾರವೇ ನಡೆಯುತ್ತಿದೆ. ಉದಯ್ ಹೊರ ಬಂದಿರುವುದು ಎಲ್ಲರಿಗೂ ಶಾಕ್ ತಂದಿದೆ.
ಮೊದಲ ವಾರದಿಂದಲ್ಲೂ ಉದಯ್ ಬಿಬಿ ಮನೆಯಲ್ಲಿರುವ ಪ್ರತಿಯೊಂದು ಸ್ಪರ್ಧಿ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದರು ಆದರೆ ಈ ವಾರ ತುಂಬಾನೇ ಆಕ್ಟಿವ್ ಆಗಿದ್ದರು.
ಉದಯ್ ಎಲಿಮಿನೇಷನ್ ಹಿಂದಿನ ದಿನ ಜೋರಾಗಿ ಜಗಳ ಮಾಡಿಕೊಂಡಿದ್ದಾರೆ. ರೂಪೇಶ್, ಸಾನ್ಯ ಮತ್ತು ಜಶ್ವಂತ್ ನಡುವೆ ಏನೋ ನಡೆಯುತ್ತಿದೆ ಎಂದು ಉದಯ್ ಕಾಮೆಂಟ್ ಮಾಡಿದಕ್ಕೆ ಜಗಳ ಮಾಡಿದ್ದಾರೆ.
ಈ ವಾರ ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ ಮತ್ತು ಸೋಮಣ್ಣ ಈ ವಾರ ನಾಮಿನೇಟ್ ಆಗಿದ್ದರು.
ಉದಯ್ ಹೊರ ಬಂದಂತೆ. ಎಲ್ಲರೂ ಸೇಫ್ ಆಗಿದ್ದಾರೆ. ಈ ವಾರ ಬೆಸ್ಟ್ ಪರ್ಫಾರ್ಮರ್ ಆಗಿ ಆರ್ಯವರ್ಧನ್ ಮತ್ತು ವರ್ಸ್ಟ್ ಪರ್ಫಾರ್ಮರ್ ಆಗಿ ಜಯಶ್ರೀ ಜೈಲು ಸೇರಿಕೊಂಡರು.