ಕೆನ್ನೆಗೆ ಹೂಮುತ್ತು ನೀಡೋ ಫೋಟೋ ಹಂಚಿಕೊಂಡ ಕಮಲಿ ಸೀರಿಯಲ್ ಅನಿಕಾ- ಶಂಭು ಜೋಡಿ

First Published | Apr 29, 2024, 5:42 PM IST

ಕಮಲಿ ಸೀರಿಯಲ್ ನಲ್ಲಿ ವಿಲನ್ ಅನಿಕಾ ಆಗಿ ನಟಿಸುತ್ತಿದ್ದ ಗೇಬ್ರಿಯೆಲಾ ಸ್ಮಿತ್ ಮತ್ತು ಅದೇ ಸೀರಿಯಲ್ ನಲ್ಲಿ ಕಮಲಿ ಸ್ನೇಹಿತ ಶಂಭು ಪಾತ್ರದಲ್ಲಿ ನಟಿಸುತ್ತಿದ್ದ ಸುಹಾಸ್ ಅತ್ರೇಯಾಸ್ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. 
 

ಹಿಂದೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಸೀರಿಯಲ್ ನಲ್ಲಿ (Kamali serial) ವಿಲನ್ ಅನಿಕಾ ಪಾತ್ರ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿತ್ತು. ಈ ಪಾತ್ರದಲ್ಲಿ ಗೇಬ್ರಿಯೆಲಾ ಸ್ಮಿತ್ ನಟಿಸಿದ್ದರು. ಇನ್ನು ಇದೇ ಸೀರಿಯಲ್ ನಲ್ಲಿ ಕಮಲಿ ಸ್ನೇಹಿತ ಪೆದ್ದು ಪೆದ್ದು ಶಂಭು ಪಾತ್ರದಲ್ಲಿ ಸುಹಾಸ್ ಅತ್ರೇಯಾಸ್ ನಟಿಸಿದ್ದರು. 
 

ಇಬ್ಬರದ್ದೂ ಸೀರಿಯಲ್‌ನಲ್ಲಿ ವಿಭಿನ್ನ ಪಾತ್ರ, ಆದರೆ ಸೀರಿಯಲ್‌ನಲ್ಲಿ ದುಶ್ಮನ್‌ಗಳಾಗಿದ್ದ ಇವರು, ಸೀರಿಯಲ್ ಸೆಟ್ ನಲ್ಲಿ ಲವ್ ಮಾಡಿ, ತಮ್ಮ ಪ್ರೀತಿಯನ್ನು ಮನೆಯವರಿಗೆ ತಿಳಿಸಿ, ಅವರ ಒಪ್ಪಿಗೆ ಪಡೆದು 2022 ರ ಅಕ್ಟೋಬರ್ ತಿಂಗಳಲ್ಲಿ ಹಸೆಮಣೆ ಏರಿದ್ದರು. 
 

Tap to resize

ಗೇಬ್ರಿಯೆಲಾ (Gabriella Smith) ಕ್ರಿಶ್ಚಿಯನ್ ಧರ್ಮದವರಾಗಿದ್ದು, ಸುಹಾಸ್ (Suhas Athreyas) ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ, ಇಬ್ಬರೂ ಮನೆಯವರನ್ನು ಒಪ್ಪಿಸಿ ಮದುವೆಯಾಗುವಲ್ಲಿ ಯಶಸ್ವಿಯಾಗಿದ್ದರು. ಈ ಜೋಡಿ ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಜೊತೆಯಾಗಿ ಕಾಣ ಸಿಗುತ್ತಾರೆ. 
 

ಕಮಲಿ ಸೀರಿಯಲ್ (Kamali serial) ಬಳಿಕ ಸುಹಾಸ್ ಮತ್ತು ಗೆಬ್ರಿಯೆಲ್ ರಾಜಾ ರಾಣಿ ಶೋನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ನಂತರ ಗೇಬ್ರಿಯೆಲ್ ಪಾರು ಸೀರಿಯಲ್ ನಲ್ಲಿ ಕೆಲವು ದಿನಗಳ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದರು.  ಸುಹಾಸ್ ಮರಳಿ ಮನಸಾಗಿದೆ ಧಾರಾವಾಹಿಯಲ್ಲಿ ನಟಿಸಿದ್ದರು.
 

ಟ್ರಾವೆಲ್ ಪ್ರಿಯರಾಗಿರುವ ಈ ಜೋಡಿ ಹೆಚ್ಚಾಗಿ ದೇಶ ವಿದೇಶ ಸುತ್ತುತ್ತಿರುತ್ತಾರೆ. ಜೊತೆಗೆ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಕಪಲ್ ಗೋಲ್ಸ್ ಬಗ್ಗೆ ತಿಳಿಸಿಕೊಡುತ್ತಾರೆ. 
 

ಇಬ್ಬರದ್ದು ಆಚರಣೆ, ಸಂಪ್ರದಾಯ ತುಂಬಾನೆ ವಿಭಿನ್ನವಾದರೂ ಇಬ್ಬರು ಜೊತೆಯಾಗಿ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ, ಜೊತೆಗೆ ಫ್ರೀ ಟೈಮಲ್ಲಿ ಜೊತೆಯಾಗಿ ಜಿಮ್ ಮಾಡೋದು, ಗೇಮ್ಸ್ ಆಡುವ ಮೂಲಕ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಾರೆ. 
 

ಇನ್ನು ಗೇಬ್ರಿಯಲ್ ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ (Comedy Khiladi premier League)ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಆನಂದ್ ಅವರ ಟೀಂ ನಲ್ಲಿ ಗೇಬ್ರಿಯಲ್ ಸ್ಪರ್ಧಿಯಾಗಿ ಸೇರಿಕೊಂಡಿದ್ದಾರೆ. ಇನ್ನು ಮುಂದೆ ನಕ್ಕು ನಗಿಸುವ ಗೇಬ್ರಿಯಲ್ ಅವರನ್ನು ನೀವು ನೋಡಬಹುದು.  
 

Latest Videos

click me!