ರಾಮಚಾರಿ ಖ್ಯಾತಿ ರಿತ್ವಿಕ್ ಕೃಪಾಕರ್ ಕ್ಯೂಟ್ ಲುಕ್‌‍‌ಗೆ ಹೆಣ್ಮಕ್ಳು ಫಿದಾ!

Published : Apr 29, 2024, 02:17 PM IST

ರಾಮಾಚಾರಿ ಸೀರಿಯಲ್ ಖ್ಯಾತಿಯ ರಿತ್ವಿಕ್ ಕೃಪಾಕರ್ ಹೊಸದಾಗಿ ಫೋಟೋ ಶೂಟ್ ಮಾಡಿಸಿಕೊಂಡು ಶೇರ್ ಮಾಡಿದ್ದು, ಹೆಣ್ಮಕ್ಳು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ.   

PREV
16
ರಾಮಚಾರಿ ಖ್ಯಾತಿ ರಿತ್ವಿಕ್ ಕೃಪಾಕರ್ ಕ್ಯೂಟ್ ಲುಕ್‌‍‌ಗೆ ಹೆಣ್ಮಕ್ಳು ಫಿದಾ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಪಾತ್ರದಲ್ಲಿ ಮಿಂಚುತ್ತಿರುವ ರಿತ್ವಿಕ್ ಕೃಪಾಕರ್ (Rithvik Krupakar) ಇದೀಗ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ರಾಮಾಚಾರಿಯ ಮುದ್ದಾದ ನಗು, ಆಕ್ಷನ್ ನೋಡಿ ಹೆಣ್ಮಕ್ಳು ಖುಶಿಯಾಗಿದ್ದು, ರಿತ್ವಿಕ್ ಕ್ಯೂಟ್ ನೆಸ್ ಗೆ ಫಿದಾ ಆಗಿದ್ದಾರೆ. 
 

26

ಹಸಿರು ಬಿಳಿ ಬಣ್ಣದ ಸ್ಟೈಪ್ ಇರುವಂತಹ ಶರ್ಟ್ ಧರಿಸಿರುವ ರಿತ್ವಿಕ್ ಕೃಪಾಕರ್, ಅದಕ್ಕೆ ಮ್ಯಾಚ್ ಆಗುವ ಹಸಿರು ಬಣ್ಣದ ಪ್ಯಾಂಟ್ ಧರಿಸಿ ವಿವಿಧ ರೀತಿಯಲ್ಲಿ ಫೋಸ್ ಕೊಟ್ಟಿದ್ದಾರೆ.  ಜೊತೆಗೆ ಪುರುಷನ ಹೃದಯ ಅನ್ನೋದು ಒಂದು ಸಮುದ್ರ ಇದ್ದ ಹಾಗೆ, ಇದರಲ್ಲಿ ಚಂಡಮಾರುತಗಳಿರುತ್ತವೆ, ಉಬ್ಬರವಿಳಿತಗಳೂ ಇರುತ್ತವೆ, ಅಷ್ಟೇ ಅಲ್ಲ, ಅದರಲ್ಲಿ ಮುತ್ತುಗಳೂ ಸಹ ಇರುತ್ತವೆ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. 
 

36

ಇನ್ನು ತಮ್ಮ ನೆಚ್ಚಿನ ಹೀರೋನ ಹೊಸ ಲುಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ, ಅದರಾಲ್ಲೂ ಹೆಣ್ಮಕ್ಳು ಆ ಕ್ಯೂಟ್ ನಗು (cute smile), ಸ್ಟೈಲ್ ಗೆ ಫಿದಾ ಆಗಿದ್ದಾರೆ. ತುಂಬಾ ಕ್ಯೂಟ್ ಅಗಿ ಕಾಣುಸುತಿದ್ದೀರಿ ಅಣ್ಣ. ಅದ್ರೆ ಪಕ್ಕದಲ್ಲಿ ಚಾರು ಅಕ್ಕ ಇದ್ದಿದ್ದರೆ ಇನ್ನು ಚಾನಾಗಿರೊದು. ನಿಮ್ಮ ಜೋಡಿ ತುಂಬಾನೆ ಚೆಂದ ಎಂದು ಒಬ್ಬರು ಬರೆದರೆ, ಎಂಥಾ ಸ್ಮೈಲ್ ಈ ಸ್ಮೈಲ್ ನೋಡಿದ್ರೆ ಯಾರ್ ಬೇಕಾದ್ರೂ ಬಿದ್ ಬಿಡ್ತಾರೆ ಎಂದಿದ್ದಾರೆ. 
 

46

ಮತ್ತೊಬ್ಬರು ನಿಮ್ಮ ನಗುನ ಸೀರಿಯಲ್‌ನಲ್ಲಿ ನೋಡೋಕೆ ಖುಷಿ ಆಗುತ್ತೆ, ಈ  ಪೋಸ್ಟ್ ಅಲ್ಲಿ ಕೂಡ ನೋಡೋಕೆ ಖುಷಿ ಆಗುತ್ತೆ ಎಂದಿದ್ದಾರೆ. ನಿಮ್ಮ ಅಂದ ಹೊಗಳಲು ಪದಪುಂಜ ಸಾಲದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಎಲ್ಲಾ ಫೋಟೋ ಚೆನ್ನಾಗಿದೆ, ನೀವು ತುಂಬಾನೆ ಚೆನ್ನಾಗಿ ಕಾಣುತ್ತೀರಿ ಎಂದು ಬರೆದಿದ್ದಾರೆ. 
 

56

ಸದ್ಯ ರಾಮಾಚಾರಿ (Ramachari Serial) ಸೀರಿಯಲ್ ನಲ್ಲಿ ರಿತ್ವಿಕ್ ಕೃಪಾಕರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಣ್ಣ ರಾಮಾಚಾರಿ, ತಮ್ಮ ಕೃಷ್ಣ ಆಲಿಯಾಸ್ ಕಿಟ್ಟಿಯಾಗಿ ರಿತ್ವಿಕ್ ನಟಿಸುತ್ತಿದ್ದಾರೆ. ಎರಡು ಪಾತ್ರಗಳು ಈಗಾಗಲೇ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಕಿಟ್ಟಿಯ ಖಡಕ್ ರೌಡಿ ಲುಕ್, ನಟನೆ ಜನರಿಗೆ ಇಷ್ಟವಾಗಿದೆ. 
 

66

ಇನ್ನು ಧಾರಾವಾಹಿಯಲ್ಲಿ ಎಲ್ಲಾ ಸತ್ಯ ತಿಳಿದಿರುವ ಕಿಟ್ಟಿ ಅಣ್ಣ ಮತ್ತು ಅತ್ತಿಗೆಗೆ ರಾಮಾಚಾರಿಯಾನ್ನು ಜೈಲಿಗೆ ಹಾಕಿರುವ ಹಿಂದೆ ಯಾರ ಕೈವಾಡ ಇದೆ ಎನ್ನುವ ಸತ್ಯ ಬಯಲು ಮಾಡಲು ಹೊರಟ್ಟಿದ್ದಾನೆ. ವೈಶಾಖ, ಮಾನ್ಯತಾ ಮತ್ತು ಪೊಲೀಸ್ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ವೀಕ್ಷಕರು ಕಾಯ್ತಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories