Shooting Set ನಲ್ಲಿ ಊಟ ಹೇಗಿರುತ್ತೆ? ಫ್ರೆಂಡ್ಸ್ ಪ್ರಶ್ನೆಗೆ ವಿಡಿಯೋ ಮೂಲಕ ಉತ್ತರ ನೀಡಿದ Yamuna

Published : Jan 22, 2026, 02:40 PM IST

Actress Yamuna : ಸೀರಿಯಲ್ ಹಾಗೂ ಸಿನಿಮಾ ಸೆಟ್ ನಲ್ಲಿ ಕಲಾವಿದರಿಗೆ ಊಟ, ಉಪಹಾರ ಯಾರು ನೀಡ್ತಾರೆ? ಕಲಾವಿದರೆ ಡಬ್ಬ ಕಟ್ಟಿಕೊಂಡು ಹೋಗ್ಬೇಕಾ? ಈ ಪ್ರಶ್ನೆಗೆ ಈಗ ನಟಿ ಯಮುನಾ ಉತ್ತರ ನೀಡಿದ್ದಾರೆ.

PREV
17
ಬಿಗ್ ಬಾಸ್ ಯಮುನಾ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 11ರಲ್ಲಿ ಎಲ್ಲರ ಗಮನ ಸೆಳೆದಿದ್ದವರು ನಟಿ ಯಮುನಾ. ಮನೆಯಲ್ಲಿ ಸ್ವಲ್ಪ ದಿನವಿದ್ರೂ ಯಮುನಾ ಸ್ವಭಾವ ವೀಕ್ಷಕರಿಗೆ ಇಷ್ಟವಾಗಿತ್ತು. ಬಿಗ್ ಬಾಸ್ ಮುಗಿದ ಮೇಲೆ ಯಮುನಾ ಸಿಕ್ಕಾಪಟ್ಟೆ ಬ್ಯುಸಿ. ಕಲರ್ಸ್ ಕನ್ನಡದಲ್ಲಿ ಎರಡು ಸೀರಿಯಲ್ ಮಾಡ್ತಿರುವ ಯಮುನಾ, ಸಿನಿಮಾ ಕೂಡ ಮಾಡ್ತಿದ್ದಾರೆ.

27
ಶೂಟಿಂಗ್ ಸಿಕ್ರೇಟ್

ಸೆಲೆಬ್ರಿಟಿಗಳ ವೈಯಕ್ತಿಕ ವಿಷ್ಯಗಳನ್ನು ತಿಳಿದುಕೊಳ್ಳುವ ಆಸಕ್ತಿ ವೀಕ್ಷಕರಿಗಿರುತ್ತೆ. ಹಾಗೆಯೇ ಶೂಟಿಂಗ್ ಸ್ಪಾಟ್, ಶೂಟಿಂಗ್ ಹೇಗೆ ನಡೆಯುತ್ತೆ, ಅಲ್ಲಿ ಕಲಾವಿದರು ಹೇಗಿರ್ತಾರೆ ಎಂಬುದನ್ನು ತಿಳಿಯುವ ಆಸಕ್ತಿ ಕೂಡ ಹೆಚ್ಚು. ಸೆಲೆಬ್ರಿಟಿಗಳು ಶೂಟಿಂಗ್ ನಲ್ಲಿ ತಮ್ಮದೇ ಬಟ್ಟೆ ಧರಿಸ್ತಾರಾ ಇಲ್ಲ ಪ್ರೊಡಕ್ಷನ್ ಹೌಸ್ ಅವರಿಗೆ ನೀಡುತ್ತಾ ಎಂಬುದರಿಂದ ಹಿಡಿದು, ಶೂಟಿಂಗ್ ವೇಳೆ ಕಲಾವಿದರಿಗೆ ಊಟ ಯಾರು ಕೊಡ್ತಾರೆ ಎಂಬುದರವರೆಗೆ ಅನೇಕ ಪ್ರಶ್ನೆಗಳು ಕಾಡೋದು ಸಹಜ.

37
ಊಟದ ಬಗ್ಗೆ ಯಮುನಾ ಹೇಳಿದ್ದೇನು?

ನಟಿ ಯಮುನಾ ಅವರಿಗೆ ಅವರ ಅಮೆರಿಕಾ ಸ್ನೇಹಿತೆಯರು ಪ್ರಶ್ನೆ ಕೇಳಿದ್ದರಂತೆ. ಶೂಟಿಂಗ್ ನಲ್ಲಿ ಯಾರು ಊಟ ಕೊಡ್ತಾರೆ? ನೀವೇ ಮನೆಯಿಂದ ಡಬ್ಬಿ ತೆಗೆದುಕೊಂಡು ಹೋಗ್ಬೇಕಾ ಅಂತ. ಅದಕ್ಕೆ ಯಮುನಾ ಈಗ ಉತ್ತರ ನೀಡಿದ್ದಾರೆ. ಶೂಟಿಂಗ್ ವೇಳೆ ಊಟದ ವ್ಯವಸ್ಥೆ ಹೇಗಾಗುತ್ತೆ ಎಂಬುದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.

47
ಭರ್ಜರಿ ಉಪಹಾರ ಸವಿದ ಯಮುನಾ

ಸದ್ಯ ಯಮುನಾ ಸಿನಿಮಾ ಒಂದರ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಶೂಟಿಂಗ್ ಸ್ಥಳದಲ್ಲಿ ಅವರಿಗೆ ನೀಡಲಾದ ಬ್ರೇಕ್ ಫಾಸ್ಟ್ ಏನು ಎಂಬುದನ್ನು ಯಮುನಾ ತೋರಿಸಿದ್ದಾರೆ. ಕಡಬು, ಪುಳಿಯೊಗರೆ, ಇಡ್ಲಿ, ಚಿತ್ರಾನ್ನ ಹೀಗೆ ನಾನಾ ಬಗೆಯ ತಿಂಡಿಗಳನ್ನು ಶೂಟಿಂಗ್ ವೇಳೆ ಯಮುನಾ ತಿಂದಿದ್ದಾರೆ. ಪ್ರತಿಯೊಂದನ್ನು ಬಾಯಿ ಚಪ್ಪರಿಸಿ ತಿಂದಿರುವ ಯಮುನಾ, ಅದ್ರ ರುಚಿಯನ್ನು ಹೊಗಳಿದ್ದಾರೆ.

57
ಒಂದೇ ದಿನ ಅಲ್ಲ

ನನ್ನ ಸ್ನೇಹಿತೆಯರು ನನಗೆ ಊಟದ ವ್ಯವಸ್ಥೆ ಏನು ಅಂತ ಕೇಳಿದ್ರು. ಅದಕ್ಕೆ ಈಗ ಉತ್ತರ ನೀಡ್ತಿದ್ದೇನೆ. ಶೂಟಿಂಗ್ ಸ್ಥಳದಲ್ಲಿಯೇ ಉಪಹಾರ, ತಿಂಡಿ ನೀಡಲಾಗುತ್ತೆ. ಒಂದೇ ದಿನ ಅಲ್ಲ, ಪ್ರತಿ ದಿನ ಇಲ್ಲಿಯೇ ವೆರೈಟಿ ಆಹಾರ ನಮಗೆ ಸಿಗುತ್ತೆ. ಬರೀ ರುಚಿ, ಶುಚಿ ಮಾತ್ರವಲ್ಲ ಊಟ ನೀಡುವ ಸಿಬ್ಬಂದಿ ಕೂಡ ತುಂಬ ಪ್ರೀತಿಯಿಂದ ಊಟ ನೀಡ್ತಾರೆ ಅಂತ ಯಮುನಾ ವಿಡಿಯೋದಲ್ಲಿ ಹೇಳಿದ್ದಾರೆ.

67
ಕಲಾವಿದರಿಗೆ ಡ್ರೆಸ್ ಯಾರು ಕೊಡ್ತಾರೆ?

ಯಮುನಾ ಹಾಕಿರುವ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಎಲ್ಲದಕ್ಕೂ ಯಮುನಾ ಪ್ರತಿಕ್ರಿಯೆ ನೀಡಿದ್ದಾರೆ. ಶೂಟಿಂಗ್ ವೇಳೆ ನಿಮಗೆ ಡ್ರೆಸ್ ನೀಡೋರು ಯಾರು ಅಂತ ಒಬ್ಬರು ಪ್ರಶ್ನೆ ಮಾಡಿದ್ದಾರೆ. ಸೀರಿಯಲ್ ನಲ್ಲಿ ನಮ್ಮದೇ ಡ್ರೆಸ್ ಧರಿಸ್ತೇವೆ, ಸಿನಿಮಾದಲ್ಲಿ ಅವರೇ ನೀಡ್ತಾರೆ. ಅಪರೂಪಕ್ಕೆ ನಮ್ಮ ಬಟ್ಟೆ ಬಳಸ್ತೇವೆ ಅಂತ ಯಮುನಾ ಪ್ರತಿಕ್ರಿಯೆ ನೀಡಿದ್ದಾರೆ.

77
ಯಜಮಾನದಲ್ಲಿ ಯಮುನಾ

ಬಿಗ್ ಬಾಸ್ ಮುಗಿದು ಹೊರಗೆ ಬಂದ್ಮೇಲೆ ಯಮುನಾ, ಯಜಮಾನ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಝಾನ್ಸಿ ಅಮ್ಮನ ಪಾತ್ರದಲ್ಲಿ ಯಮುನಾ ನಟಿಸ್ತಿದ್ದಾರೆ. ಇದ್ರ ಜೊತೆ ಕಲರ್ಸ್ ಕನ್ನಡದ ಇನ್ನೊಂದು ಸೀರಿಯಲ್ ನಲ್ಲೂ ಯಮುನಾ ನಟಿಸುತ್ತಿದ್ದಾರೆ. ಇದ್ರ ಜೊತೆ ಸಿನಿಮಾ ಕೂಡ ಅವರ ಕೈನಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories