ಕೊನೆ ಸೀನ್ ನಲ್ಲಿ ತಮ್ಮೂರ ಜಾತ್ರೆಯಲ್ಲಿ ಮಗಳು ಚುಕ್ಕಿಯನ್ನು ತಂದೆ ಎತ್ತಿಕೊಂಡೇ ದೇವರ ಮೆರವಣಿಗೆ ತೋರಿಸುತ್ತಾನೆ. ಆಗ ಚುಕ್ಕಿ ಅಪ್ಪಾ... ಎಲ್ಲರೂ ಕಳಗಡೆ ನಿಂತು ನೋಡ್ತಾ ಇದ್ದಾರೆ, ಆದ್ರೆ ನೀನು ಮಾತ್ರ ನನ್ನ ಯಾಕೆ ಎತ್ಕೊಂಡಿದೀಯಾ?ʼ ಅಂದಾಗ ಅಪ್ಪ, ʼಚುಕ್ಕಿ... ನನ್ನ ತಪಸ್ಸಿಗೆ ಹುಟ್ಟಿರೋ ದೇವತೆ ನೀನು... ಹೀಗಾಗಿ ನಿನ್ನ ಕೆಳಗಡೆ ಇಳಿಸಲು ಆಗುತ್ತಾ?ʼ ಎನ್ನುತ್ತಾ ಆಕೆಯ ರಾಡ್ ಹಾಕಿದ ಕಾಲುಗಳನ್ನು ನೋಡಿ ಕಣ್ಣೀರು ಒರೆಸುತ್ತಾನೆ ಅಪ್ಪ.