ಡ್ರೋಣ್ ಪ್ರತಾಪ್‌ಗೆ ಸಿನೆಮಾ ಮಾಡೋ ಆಸೆ, ಸಖತ್‌ ಫೋಟೋ ಶೂಟ್‌, ಹೊಸ ಲುಕ್ ವೈರಲ್!

First Published | Nov 13, 2024, 7:57 PM IST

ಬಿಗ್ ಬಾಸ್ ಖ್ಯಾತಿಯ ಡ್ರೋಣ್ ಪ್ರತಾಪ್ ಅವರ ಸ್ಟೈಲಿಶ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಫೋಟೋಗ್ರಾಫರ್ ಒಬ್ಬರು ತೆಗೆದ ಈ ಚಿತ್ರಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿವೆ. ಚಿತ್ರರಂಗಕ್ಕೆ ಪ್ರವೇಶಿಸುವ ಬಗ್ಗೆಯೂ ಪ್ರತಾಪ್ ಸುಳಿವು ನೀಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಭಾರೀ ಸುದ್ದಿ ಮಾಡಿ, ತನ್ನ ಮುಗ್ದತೆ ಮತ್ತು ಚಾಣಾಕ್ಷ್ಯತನದಿಂದ ಆಡಿ, ರನ್ನರ್ ಅಪ್‌ ಆದವರು ಡ್ರೋಣ್ ಪ್ರತಾಪ್‌. ಬಿಗ್ಬಾಸ್‌ ಬಳಿಕವೂ ಡ್ರೋಣ್ ಪ್ರತಾಪ್ ಸಮಾಜಸೇವೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಇದೀಗ ಅವರ ಒಂದಿಷ್ಟು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸ್ಟ್ರೀಟ್ ಫೋಟೊಗ್ರಾಫರ್ ಒಬ್ಬರು ಶೂಟ್ ಮಾಡಿದಂತಹ ಫೋಟೊಗಳು ಇದಾಗಿದ್ದು,ಪ್ರತಾಪ್ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
 

Tap to resize

ಡ್ರೋಣ್ ಪ್ರತಾಪ್  ಹೊಸ ಲುಕ್ ನೋಡಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಫೋಟೋಗ್ರಾಫರ್‌ ಅಪ್‌ಲೋಡ್‌ ಮಾಡಿದ ಫೋಟೋವನ್ನು ಒಂದು ದಿನದಲ್ಲಿ 2.5 ಮಿಲಿಯನ್ ಜನ ವೀಕ್ಷಿಸಿದ್ದಾರೆ. 1.60 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

ಜ್ಯೂಸ್‌ ಕುಡಿಯುತ್ತಿರುವ ಪ್ರತಾಪ್‌ ಟೇಬಲ್ ಬಳಿ ಫೋಟೋಗ್ರಾಫರ್‌ ಬಂದಿದ್ದಾನೆ. ಪ್ರತಾಪ್ ಹೆಸರು ಕೇಳಿದ್ದಾನೆ. ಆಗ ಪ್ರತಾಪ್‌ ನನ್ನನ್ನು ಡ್ರೋಣ್ ಪ್ರತಾಪ್ ಎಂದು ಕರೆಯುತ್ತಾರೆ ಎಂದಿದ್ದಾರೆ.
 

ಯಾಕೆ ಹಾಗೆ ಕರೆಯುತ್ತಾರೆಂದು ಫೋಟೋಗ್ರಾಫರ್ ಕೇಳಿದ್ದಕ್ಕೆ. ನಾನು ಡ್ರೋಣ್ ಎರೋಸ್ಪೇಸ್‌ ಎಂಬ ಸ್ಟಾರ್ಟ್ಅಪ್‌ ಹೊಂದಿದ್ದೇನೆ ಅದಕ್ಕಾಗಿ ಎಂದಿದ್ದಾರೆ. 


ನಿಮ್ಮ ಕಂಪೆನಿ ಬಿಟ್ಟು ಬೇರೇನು ಮಾಡುತ್ತೀರಿ ಎಂದು ಫೊಟೋಗ್ರಾಫರ್‌ ಕೇಳಿದ್ದಕ್ಕೆ ಕೆಲವೊಬ್ಬರಿಗೆ ನನ್ನನ್ನು ಗೊತ್ತು. ಕೆಲವು ಜನರು ನನ್ನನ್ನು ಇಷ್ಟಪಡುತ್ತಾರೆ. ಅವರು ನನ್ನನ್ನು ಮೂವಿ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಹಾಗಾಗಿ ನಾನು ಮೂವಿ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ನೋಡೋಣ ಮುಂದೇನಾಗುತ್ತೆ ಎಂದು ಪ್ರತಾಪ್ ಹೇಳಿದ್ದು ಬಳಿಕ ಸಖತ್ ಸೈಲೀಶ್ ಆಗಿ ಫೋಟೋ ತೆಗೆಸಿಕೊಂಡಿದ್ದಾರೆ.


ಇತ್ತೀಚೆಗೆ ಸಂಗೀತಾ ಶೃಂಗೇರಿ ಅವರ ಫೋಟೋವನ್ನು ಕೂಡ ಇದೇ ಕ್ಯಾಮಾರ ಮ್ಯಾನ್ ಸೆರೆ ಹಿಡಿದಿದ್ದರು. ಅಕ್ಕ ತಮ್ಮ ಜೊತೆಯಲ್ಲೇ ಇದ್ದಾಗ ತೆಗೆದ ಫೋಟೋ ಆಗಿರಬಹುದೇ ಎಂಬುದು ತಿಳಿದುಬಂದಿಲ್ಲ.

ಯಾಕೆಂದರೆ ಫೋಟೋ ತೆಗೆದಿರುವ ಲೊಕೇಶನ್‌ ಒಂದೇ ಆಗಿದೆ. ಹೇಳಿಕೇಳಿ ಸಂಗೀತಾ ಶೃಂಗೇರಿ ಮತ್ತು ಡ್ರೋಣ್ ಪ್ರತಾಪ್ ಒಂದೇ ಸೀಸನ್‌ ನಲ್ಲಿದ್ದರು. ಅಕ್ಕ-ತಮ್ಮ ಜೊತೆಗೆ ಆಗಾಗ ಸಿಗುತ್ತಿರುತ್ತಾರೆ. ಬಿಗ್‌ಬಾಸ್‌ ಮನೆಯಲ್ಲಿ ಕೂಡ ಇವರು ಪ್ರೀತಿಯ ಅಕ್ಕ ತಮ್ಮನೇ ಆಗಿದ್ದರು. ಹೊರಗಡೆಯೂ ಆ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. 
 

Latest Videos

click me!