ಬಿಗ್‌ಬಾಸ್‌ ಕನ್ನಡ 11: ನಾಮಿನೇಷನ್‌ನಲ್ಲಿ ಸೇವ್‌ ಮಾಡಿದ ಶಿಶಿರ್‌ ತ್ಯಾಗಕ್ಕೆ ಚಪ್ಪಡಿಕಲ್ಲು ಎಳೆದ ಚೈತ್ರಾ!

First Published | Nov 13, 2024, 6:48 PM IST

ಬಿಗ್‌ಬಾಸ್‌ ಕನ್ನಡ 11ರಲ್ಲಿ ಚೈತ್ರಾ ಕುಂದಾಪುರ, ಶಿಶಿರ್ ಶಾಸ್ತ್ರಿ ಬದಲು ತ್ರಿವಿಕ್ರಮ್‌ರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಆಯ್ಕೆಯಿಂದ ಶಿಶಿರ್‌ಗೆ ಬೇಸರವಾಗಿದ್ದು, ಚೈತ್ರಾ ನಿಜವಾದ ನಟಿ ಎಂದು ವ್ಯಂಗ್ಯವಾಡಿದ್ದಾರೆ.

ಬಿಗ್‌ಬಾಸ್‌ ಕನ್ನಡ 11 ರಲ್ಲಿ 7 ನೇ ವಾರ ಮನೆಯಲ್ಲಿ 6 ಜೋಡಿಗಳನ್ನು ಮಾಡಿ ಟಾಸ್ಕ್‌ ನೀಡಲಾಗುತ್ತಿದೆ.  ಅದರಲ್ಲಿ ಚೈತ್ರಾ ಕುಂದಾಪುರ-ಶಿಶಿರ್ ಶಾಸ್ತ್ರಿ ಕೂಡ ಒಂದು ಜೋಡಿ. ಇದೀಗ ಶಿಶಿರ್‌ ಅವರನ್ನು ಪಾರ್ಟ್‌ನರ್‌ ಮಾಡಿಕೊಳ್ಳಲು ಒಪ್ಪದೆ ತ್ರಿವಿಕ್ರಮ್‌ ಅವರನ್ನು ಚೈತ್ರಾ ಕುಂದಾಪುರ ಆಯ್ಕೆ ಮಾಡಿ ಶಿಶಿರ್‌ ಗೆ ಶಾಕ್ ಕೊಟ್ಟಿದ್ದಾರೆ. 

ತ್ರಿವಿಕ್ರಮ್‍‍ಗಾಗಿ ಶಿಶಿರ್​ ಅವರ ಕೈಬಿಟ್ರಾ ಚೈತ್ರಾ? ಎಂಬ ಪ್ರೋಮೋವನ್ನು ಹಾಕಲಾಗಿದೆ. ಚೈತ್ರಾ ನಿಜವಾದ ನಟಿ, ನಾವಲ್ಲ ಎಂದು ಹೇಳಿದ್ದು, ಈ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನೀವು ನಿಮ್ಮ ಜೋಡಿ ಸದಸ್ಯನನ್ನು ಮುರಿದು ತ್ರಿವಿಕ್ರಮ್​ ಜೊತೆ ಜೋಡಿಯಾಗಿ ಟಾಸ್ಕ್​​ನಲ್ಲಿ ಭಾಗಿಯಾಗಲು ಇಚ್ಛಿಸುತ್ತೀರೇ ಎಂದು ಬಿಗ್ಬಾಸ್‌ ಗೇಮ್‌ ನಲ್ಲಿ ಟ್ವಿಸ್ಟ್ ಕೊಟ್ಟಿದ್ದಾರೆ. ಎಲ್ಲ ಮಹಿಳಾ ಸ್ಪರ್ಧಿಗಳನ್ನು ಕನ್ಫೆಷನ್‌ ರೂಂ ಗೆ ಕರೆದು ಈ ಆಯ್ಕೆಯನ್ನು ಕೇಳಿದ್ದಾರೆ. ಆದರೆ ಇದರಲ್ಲಿ ಚೈತ್ರಾ ಅವರು ಶಿಶಿರ್ ಅವರನ್ನು ಬಿಟ್ಟು ತ್ರಿವಿಕ್ರಮ್‌ ಅವರನ್ನು ಆಯ್ಕೆ ಮಾಡಿದ್ದಾರೆ.
 

Tap to resize

ಹಾಗಾಗಿ, ಶಿಶಿರ್​​ ಈ ವಾರ ಟಾಸ್ಕ್​​ಗಳಿಂದ ಹೊರಬೀಳುವ ಸಾಧ್ಯತೆಗಳಿದ್ದು, ಅದು ಅವರ ನಾಮಿನೇಷನ್ಸ್​ ಮೇಲೆ ಪರಿಣಾಮ ಬೀಳಲಿದೆ. ವಿಚಾರ ತಿಳಿದು ಕೋಪಗೊಂಡ ಶಿಶಿರ್‌ ನಾನೇನು ಕಡ್ಲೆಪುರಿ ತಿಂತಿದ್ನಾ ಇಷ್ಟು ದಿನ . ತ್ರಿವಿಕ್ರಮ್ ಅವರು ದೈಹಿಕವಾಗಿ ಮಾನಸಿಕವಾಗಿ ಬಹಳ ಗಟ್ಟಿಯಾಗಿದ್ದಾರೆ ಎಂದು ಚೈತ್ರಾ ತಮ್ಮ ಕಾರಣ ಒದಗಿಸಿದ್ದಾರೆ. ಮಾನಸಿಕ ಅನ್ನೋ ಕಾರಣ ಕೊಡ್ತಾರೆ, ಇಷ್ಟು ದಿನ ಮಾನಸಿಕ ಏನಾಗಿತ್ತು?, ನಾಮಿನೇಷನ್​ ಅಂತಾ ಬಂದಾಗ ಅಯ್ಯೋ ಅಮ್ಮಾ ಅಂತಾ ಹೇಳಿಬಿಡ್ತಾರೆ. 12 ವರ್ಷಗಳಿಂದ ನಟಿಸುತ್ತಾ ಬಂದಿರೋ ನಾವಲ್ಲ ಕಲಾವಿದರು. ಇಲ್ಲಿ ಇದ್ದಾರೆ ನೋಡಿ ನಿಜವಾದ ಆ್ಯಕ್ಟರ್​​ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಾರ ಒಬ್ಬರನ್ನು ತಮ್ಮ ಟಾಸ್ಕ್​​ನಿಂದ ಹೊರ ಇಡುತ್ತಾರೆ ಅನ್ನೋದು ನನಗೆ ದೇವರಾಣೆ ಗೊತ್ತಿರಲಿಲ್ಲ ಅಣ್ಣಾ ಎಂದು ಶಿಶಿರ್ ಬಳಿ ಚೈತ್ರಾ ತಮ್ಮ ಸ್ಪಷ್ಟನೆ ಕೊಟ್ಟಿದ್ದಾರೆ. ಹಿಂದಿನ ಸಂಚಿಕೆಯಲ್ಲಿ ನಾಮಿನೇಷನ್‌  ನಲ್ಲಿ ಚೈತ್ರಾ ಮತ್ತು ಶಿಶಿರ್‌ ನಡುವೆ ಯಾರು ಉಳಿಯಬೇಕು ಎಂದಾಗ ಚೈತ್ರಾ ಅವರನ್ನು ಉಳಿಸಿದ ಶಿಶಿರ್‌ ಅವರಿಗೆ ಒಂದು ಅವಕಾಶ ನೀಡುತ್ತೇನೆ ಎಂದು ತಾನೇ ನಾಮಿನೇಟ್‌ ಆಗಿದ್ದರು.
 

ಆದರೆ ಈ ಮಾತನ್ನು, ಶಿಶಿರ್‌ ಅವರ ತ್ಯಾಗವನ್ನು ಚೈತ್ರಾ ಕುಂದಾಪುರ ಮರೆತು ಇಂದು ಅವರನ್ನೇ ದೂರ ಇಟ್ಟು ತ್ರಿವಿಕ್ರಮ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಿಕ್ಕಂತೆ ಯಾವ ಮಹಿಳಾ ಸ್ಪರ್ಧಿಗಳು ತಮ್ಮ ಜೋಡಿಯನ್ನು ಬಿಟ್ಟು ತ್ರಿವಿಕ್ರಮ್‌ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 
 

Latest Videos

click me!